ವಿಶ್ವ ಚೆಸ್ ಚಾಂಪಿಯನ್ಶಿಪ್: ಆನಂದ್ ಗೆ ಶುಭಕೋರಿದ ಮೋದಿ
ಹಾಲಿ ಚಾಂಪಿಯನ್ ಮ್ಯಾಗ್ನಸ್ ಕಾರ್ಲಸನ್ ವಿರುದ್ಧ ನಡೆಯಲಿರುವ ವಿಶ್ವ ಚಾಂಪಿಯನ್ ಶಿಪ್ ಪಂದ್ಯಕ್ಕೂ ಮುಂಚೆ ...
-an.jpg?w=1200&q=68&auto=format,compress)
ನವದೆಹಲಿ: ಹಾಲಿ ಚಾಂಪಿಯನ್ ಮ್ಯಾಗ್ನಸ್ ಕಾರ್ಲಸನ್ ವಿರುದ್ಧ ನಡೆಯಲಿರುವ ವಿಶ್ವ ಚಾಂಪಿಯನ್ ಶಿಪ್ ಪಂದ್ಯಕ್ಕೂ ಮುಂಚೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಚೆಸ್ ಪ್ರತಿಭೆ ವಿಶ್ವನಾಥನ್ ಆನಂದ್ ಅವರಿಗೆ "ಒಳ್ಳೆಯದಾಗಲಿ" ಎಂದು ಶುಭ ಕೋರಿದ್ದಾರೆ.
೧೨ ಪಂದ್ಯಗಳ ಈ ಸರಣಿ ಶನಿವಾರ ರಶಿಯಾದ ಸೋಚಿಯಲ್ಲಿ ನವೆಂಬರ್ ೨೭ ರಿಂದ ಪ್ರಾರಂಭವಾಗಲಿದೆ.
"ವಿಶಿ ನಿಮಗೆ ಒಳ್ಳೆಯದಾಗಲಿ! ನಮ್ಮ ಹೆಮ್ಮೆಯ ವಿಶ್ವನಾಥನ್ ಆನಂದ್ ಅವರಿಗೆ, ಸೋಚಿಯ ವಿಶ್ವ ಚೆಸ್ ಚಾಂಪಿಯನ್ ಶಿಪ್ ಗೆ ಶುಭ ಕೋರುತ್ತಿದ್ದೇನೆ" ಎಂದು ತಮ್ಮ ಟ್ವಿಟ್ಟರ್ ಸಂದೇಶದಲ್ಲಿ ಪ್ರಧಾನಿ ಮೋದಿ ತಿಳಿಸಿದ್ದಾರೆ.
ಕಳೆದ ವರ್ಷ ಚೆನ್ನೈ ನಲ್ಲಿ ಕಾರ್ಲಸನ್ ವಿರುದ್ಧ ಸೋತು ತಮ್ಮ ವಿಶ್ವ ಚಾಂಪಿಯನ್ ಪಟ್ಟ ಕಳೆದುಕೊಂಡಿದ್ದ ಆನಂದ್ ಚಾಲೆಂಜರ್ ಸರಣಿಯನ್ನು ಗೆದ್ದು ೨೩ ವರ್ಷದ ನಾರ್ವೆ ದೇಶದ ಕಾರ್ಲಸನ್ ವಿರುದ್ಧ ವಿಶ್ವ ಚಾಂಪಿಯನ್ ಶಿಪ್ ಗೆ ಸೆಣಸಲು ಮತ್ತೆ ಹಕ್ಕು ಸ್ಥಾಪಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


-an.jpg?w=64&q=30&auto=format,compress)