ಕ್ರೀಡೆ

ಮೊಹಮ್ಮದ್ ಅಲಿ ಮತ್ತೆ ಆಸ್ಪತ್ರೆಗೆ

ಇತ್ತೀಚೆಗಷ್ಟೇ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ, ಬಿಡುಗಡೆಗೊಂಡಿದ್ದ ವಿಶ್ವ...

ಮೊಹಮ್ಮದ್ ಅಲಿ ಮತ್ತೆ ಆಸ್ಪತ್ರೆಗೆ
ಮೊಹಮ್ಮದ್ ಅಲಿ
Published On :

ಲೂಯಿಸ್‌ವಿಲ್ಲೆ(ಅಮೆರಿಕ): ಇತ್ತೀಚೆಗಷ್ಟೇ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ, ಬಿಡುಗಡೆಗೊಂಡಿದ್ದ ವಿಶ್ವ ಬಾಕ್ಸಿಂಗ್‌ನ ದಂತ ಕಥೆ ಮೊಹಮ್ಮದ್ ಅಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

72 ವರ್ಷ ವಯಸ್ಸಿನ ಅಲಿ ಈಗಗಲೇ ಪಾರ್ಕಿನ್ಸನ್ಸ್ ಕಾಯಿಲೆಯಿಂದ ಬಳಲುತ್ತಿದ್ದು, ಈಗ ಅವರು ಶ್ವಾಸಕೋಶದ ಸೋಂಕಿಗೂ ಒಳಗಾಗಿದ್ದಾರೆಂದು ಅವರ ವಕ್ತಾರ ಬಾಬ್ ಗುನ್ನೆಲ್ ತಿಳಿಸಿದ್ದಾರೆ.

ಆದರೆ, ಈ ಸೋಂಕು ಪ್ರಾಥಮಿಕ ಹಂತದ್ದಾಗಿದ್ದು, ಅಲಿಯವರ ಸ್ಥಿತಿ ಗಂಭೀರವಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಏತನ್ಮಧ್ಯೆ, ಅಲಿಯವರ ಸ್ಥಿತಿ ಸ್ಥಿರವಾಗಿದ್ದು, ಚಿಕಿತ್ಸೆಗೆ ಅವರು ಸ್ಪಂದಿಸುತ್ತಿದ್ದಾರೆ ಎಂದು ಅವರನ್ನು ಚಿಕಿತ್ಸೆಗೊಳಪಡಿಸಿರುವ ವೈದ್ಯರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.