ಧೋನಿ ಹೊಸ ಅವತಾರ
ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಹೊಸ ಕೇಶ...

ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಹೊಸ ಕೇಶ ವಿನ್ಯಾಸದಲ್ಲಿ ಕಾಣಿಸಿಕೊಳ್ಳಲಿರುವ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಹೊಸ ಲುಕ್ ಶುಕ್ರವಾರ ಹೊರಬಂದಿದೆ.
2007ರಲ್ಲಿ ಭಾರತ ಕ್ರಿಕೆಟ್ ತಂಡ ಟ್ವೆಂಟಿ-20 ವಿಶ್ವಕಪ್ ಗೆದ್ದ ನಂತರ ಧೋನಿ ತಮ್ಮ ಉದ್ದನೆಯ ಕೂದಲಿಗೆ ಕತ್ತರಿ ಹಾಕಿ ಶಾರ್ಟ್‌ಹೇರ್ ಮಾಡಿಕೊಂಡಿದ್ದರು. ಭಾರತ ತಂಡ 2011ರ ವಿಶ್ವಕಪ್ ಗೆದ್ದ ನಂತರ ಬೋಳು ತಲೆಯಲ್ಲಿ ಕಾಣಿಸಿಕೊಂಡರು. ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸಿಂಪಲ್ ಆದ ಹೇರ್ ಸ್ಟೈಲ್ ಮಾಡಿಕೊಂಡರು. ಭಾರತೀಯ ಸೇನಾ ಪಡೆಯಲ್ಲಿ ಸೈನಿಕರೊಂದಿಗೆ ಕೆಲ ಕಾಲ ಕಳೆಯುವಾಗ ಅಲ್ಲಿಯ ಸೈನಿಕರಂತೆ ಆರ್ಮಿಸ್ಟೈಲ್‌ನಲ್ಲಿ ಹೇರ್ ಕಟಿಂಗ್ ಮಾಡಿಕೊಂಡು ಬಳಿಕ ಸಾಮಾನ್ಯ ಹೇರ್‌ಕಟ್‌ಗೆ ಮರಳಿದ್ದರು.
ಹೀಗೆ ಭಿನ್ನವಿಭಿನ್ನ ಹೇರ್‌ಸ್ಟೈಲ್‌ನಿಂದ ಗಮನ ಸೆಳೆದಿದ್ದ ಧೋನಿಯವರು ಇದೀಗ ಅವತಾರ್ ಚಿತ್ರದ ನಾಯಕನ ರೀತಿ ಹೇರ್‌ಸ್ಟೈಲ್ ಮಾಡಿಸಿಕೊಂಡಿರುವ ಫೋಟೋಗಳು ಹೊರಬಿದ್ದಿವೆ.
ಡಿಸೆಂಬರ್ 9ಕ್ಕೆ ನಡೆಯಲಿರುವ ಆಸ್ಟ್ರೇಲಿಯಾ ಪ್ರವಾಸದ ವೇಳೆ ಧೋನಿ ತಮ್ಮ ಹೊಸ ಹೇರ್‌ಲುಕ್‌ನೊಂದಿಗೆ ಅಭಿಮಾನಿಗಳಿಗೆ ಕಾಣಿಸಿಕೊಳ್ಳಲಿದ್ದಾರೆ. ಆದರೆ ಈ ಲುಕ್ 2015ರ ಫೆಬ್ರವರಿಯಲ್ಲಿ ನಡೆಯಲಿರುವ ವಿಶ್ವಕಪ್‌ನವರೆಗೂ ಇರುತ್ತದೆಯೋ ಇಲ್ಲವೋ ಎಂಬುದನ್ನು ಕಾದುನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


