ಚಾಂಪಿಯನ್ನರ ಕದನಕ್ಕೆ ವೇದಿಕೆ

ಭುವನೇಶ್ವರ: ಒಲಿಂಪಿಕ್ಸ್ ಹಾಗೂ ವಿಶ್ವಕಪ್ ನಂತರ ಹಾಕಿ ಕ್ರೀಡೆಯ ಪ್ರತಿಷ್ಠಿತ ಪಂದ್ಯಾವಳಿಯಾಗಿರುವ ಚಾಂಪಿಯನ್ಸ್ ಟ್ರೋಫಿ, ಶನಿವಾರದಿಂದ ಆರಂಭವಾಗಲಿದೆ. ವಿಶ್ವದ ಎಂಟು ಘಟಾನುಘಟಿ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿದ್ದು, ರೋಚಕ ಹಣಾಹಣಿಯ ನಿರೀಕ್ಷೆಇದೆ.
ಶನಿವಾರ ಕಳಿಂಗಾ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಅತಿಥೇಯ ಭಾರತ ತಂಡ ಬಲಿಷ್ಠ ಜರ್ಮನಿ ವಿರುದ್ಧ ಸೆಣೆಸಲಿದ್ದು, ಶುಭಾರಂಭ ಮಾಡಲು ಉಭಯ ತಂಡಗಳು ಕಾತರಗೊಂಡಿವೆ.
ಏಷ್ಯನ್ ಗೇಮ್ಸ್ ಹಾಗೂ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದು ಬೀಗಿದ್ದ ಭಾರತ ತಂಡ, ಆತ್ಮ ವಿಶ್ವಾಸದಲ್ಲಿ ಬೀಗುತ್ತಿದೆ. ಇತ್ತ ಜರ್ಮನಿ ತಂಡವೂ ಬಲಿಷ್ಠ ಪಡೆಯಾಗಿದ್ದೂ, ಉಭಯ ತಂಡಗಳ ಮುಕಾಬಲದಲ್ಲಿ ಗೆಲವು ಯಾರ ಪಾಲಾಗಲಿದೆ ಎಂಬ ಕುತೂಹಲ ಮೂಡಿದೆ.
ಅಲ್ಲದೆ ಭಾರತ ತಂಡ ಅಭ್ಯಾಸ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಅಲ್ಲದೆ ತವರಿನ ಅಂಗಣದಲ್ಲಿ ಅಭಿಮಾನಿಗಳ ಬೆಂಬಲದೊಂದಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲಿರುವ ಆತಿಥೇಯರು, ಎದುರಾಳಿ ವಿರುದ್ಧ ಪ್ರಾಬಲ್ಯ ಮೆರೆಯಲು ಸಜ್ಜಾಗಿದೆ.
ಭಾರತ ತಂಡ ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಅರ್ಜೇಂಟೀನಾ, ಹಾಲೆಂಡ್, ಜರ್ಮನಿ ಜತೆ ಕಾದಾಟ ನಡೆಸಲಿದೆ. ಇನ್ನು ಎ ಗುಂಪಿನಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ, ಪಾಕಿಸ್ತಾನ, ಬೆಲ್ಜಿಯಂ ಹಾಗೂ ಇಂಗ್ಲೆಂಡ್ ತಂಡಗಳು ಸೆಣೆಸಾಡಲಿವೆ. ಒಲಿಂಪಿಕ್ಸ್ ಹಾಗೂ ವಿಶ್ವಕಪ್ ನಂತರ ಅತಿ ದುಬಾರಿ ಪ್ರಶಸ್ತಿಯ ಟೂರ್ನಿ ಇದಾಗಿದ್ದು, ಪ್ರತಿ ತಂಡ ಪ್ರಶಸ್ತಿಯನ್ನು ಎತ್ತಿ ಹಿಡಿಯಲು ಪ್ರಯತ್ನಿಸಲಿದೆ.
ಮೊದಲ ಪಂದ್ಯಕ್ಕೆ ಸರ್ದಾರ್ ಅನುಮಾನ: ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಗಾಯಗೊಂಡಿರುವ ನಾಯಕ ಸರ್ದಾರ್ ಸಿಂಗ್, ಆರಂಭಿಕ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನವಾಗಿದೆ.
ಶುಕ್ರವಾರ ಭಾರತ ತಂಡದ ಆಟಗಾರರು ಉನ್ನತ ಪ್ರದರ್ಶನ ಅಧಿಕಾರಿ ರೋಯ್ಲೆಂಟ್ ಒಲ್ಟ್‌ಮನ್ಸ್ ಮಾರ್ಗದರ್ಶನದಲ್ಲಿ ಕಠಿಣ ತಾಲೀಮು ನಡೆಸಿದ್ದು, ನಾಯಕ ಸರ್ದಾರ್ ಸಿಂಗ್ ಮಾತ್ರ ಕಣಕ್ಕಿಳಿಯಲಿಲ್ಲ. ನಂತರ ಮಾತನಾಡಿದ ಒಲ್ಟ್‌ಮನ್ಸ್, ಆಸೀಸ್ ವಿರುದ್ಧದ ಪಂದ್ಯದ ವೇಳೆ ಸರ್ದಾರ್ ಸಿಂಗ್ ಗಾಯಗೊಂಡಿದ್ದು, ಅವರು ಮೊದಲ ಪಂದ್ಯದಲ್ಲಿ ಆಡುವರೇ ಅಥವಾ ಹೊರಗುಳಿಯುವರೆ ಎಂಬ ಬಗ್ಗೆ ಇನ್ನು ನಿರ್ಧಾರ ತೆಗೆದುಕೊಂಡಿಲ್ಲ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


