ಯುವಿ, ಸೆಹ್ವಾಗ್, ಗಂಭೀರ ಕ್ರಿಕೆಟ್ ಬದುಕು ಅಂತ್ಯ
ಕಳೆದ ಬಾರಿಯ ವಿಶ್ವಕಪ್ ಹೀರೋ ಯುವರಾಜ್ ಅಂದಿನ ತಂಡದ ಪ್ರಮುಖ ಆಟಗಾರರಾದ ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್...

ಮುಂಬೈ: ಕಳೆದ ಬಾರಿಯ ವಿಶ್ವಕಪ್ ಹೀರೋ ಯುವರಾಜ್ ಅಂದಿನ ತಂಡದ ಪ್ರಮುಖ ಆಟಗಾರರಾದ ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್, ಜಹೀರ್ ಖಾನ್ ಅವರ ಕ್ರಿಕೆಟ್ ಭವಿಷ್ಯ ಇನ್ನು ಮುಗಿದಂತೆ.
2015ರ ವಿಶ್ವಕಪ್‌ಗಾಗಿ 30 ಸಂಭವನೀಯರ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದ್ದು ಈ ಯಾವ ಹಿರಿಯ ಆಟಗಾರರಿಗೂ ಅದರಲ್ಲಿ ಸ್ಥಾನ ಸಿಕ್ಕಿಲ್ಲ.
ಖುಷಿಯ ವಿಚಾರವೆಂದರೆ ರಾಜ್ಯದ ರಾಬಿನ್ ಉತ್ತಪ್ಪ, ಸ್ಟುವರ್ಟ್ ಬಿನ್ನಿ ಮತ್ತು ಮನೀಷ್ ಪಾಂಡೆ ಸಂಭಾವ್ಯರಲ್ಲಿ ಸ್ಥಾನ ಪಡೆದಿದ್ದಾರೆ.
ನಿಜವಾದ ಯುವಿ ಭವಿಷ್ಯ: ಇತ್ತೀಚೆಗಷ್ಟೇ ನನಗೆ ತಂಡದಲ್ಲಿ ಸ್ಥಾನ ಸಿಗದು ಎಂಬ ಯುವಿ ಭವಿಷ್ಯ ನಿಜವಾಗಿದೆ. ವಿಶ್ವಕಪ್‌ನಲ್ಲಿ ಆಡಲು ಮನಸ್ಸಿದೆ ಎಂದು ಹೇಳಿದ್ದ ವೀರೇಂದ್ರ ಸೆಹ್ವಾಗ್ ಆಶಯಕ್ಕೆ ಬಿಸಿಸಿಐ ತಣ್ಣೀರು ಹಾಕಿದೆ. ಹೀಗಾಗಿ ಕಳಪೆ ಫಾರ್ಮ್, ಗಾಯದ ಸಮಸ್ಯೆಯಿಂದಾಗಿ ವರ್ಷಗಟ್ಟಲೇ ತಂಡದಿಂದ ಹೊರಗುಳಿದಿದ್ದ ಇವರಿಗೆ ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನ ಸ್ಪಲ್ಪ ಕಷ್ಟವೇ. ನಾಯಕ ಧೋನಿ, ಕೊಹ್ಲಿ, ರೈನಾ ಮತ್ತು ಅಶ್ವಿನ್ ಇವರನ್ನು ಬಿಟ್ಟರೆ ಉಳಿದವರಿಗ್ಯಾರಿಗೂ ವಿಶ್ವಕಪ್‌ನಲ್ಲಿ ಆಡಿದ ಅನುಭವವೇ ಇಲ್ಲ. ಈ ಮೂಲಕ ಬಿಸಿಸಿಐ ಯುವ ತಂಡ ಕಟ್ಟಲು ಮುಂದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


