ಕ್ರೀಡೆ

ಭಾರತಕ್ಕೆ ಬಂದ ವಿಶ್ವಕಪ್ ಟ್ರೋಫಿ

ಮುಂದಿನ ವರ್ಷ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ...

ಭಾರತಕ್ಕೆ ಬಂದ ವಿಶ್ವಕಪ್ ಟ್ರೋಫಿ
2015ರ ವಿಶ್ವಕಪ್ ಪ್ರಶಸ್ತಿಯೊಂದಿಗೆ ವೀರೇಂದ್ರ ಸೆಹವಾಗ್
Published On :

ಮುಂಬೈ: ಮುಂದಿನ ವರ್ಷ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯಾವಳಿ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಟ್ರೋಫಿ, ವಿಶ್ವದಾದ್ಯಂತ ಪರ್ಯಟನೆ ನಡೆಸುತ್ತಿದೆ. ಈಗ ಭಾರತಕ್ಕೆ ಆಗಮಿಸಿರುವ ಟ್ರೋಫಿ 6 ದಿನಗಳ ಕಾಲ ಭಾರತದಲ್ಲಿ ಪ್ರವಾಸ ಮಾಡಲಿದೆ.

ಮಂಗಳವಾರ ಮುಂಬೈಗೆ ಆಗಮಿಸಿರುವ ವಿಶ್ವಕಪ್ ಟ್ರೋಫಿ ಪ್ರತಿ ದಿನ ದೇಶದ ಪ್ರಮುಖ ನಗರಗಳಿಗೆ ತೆರಳಲಿದೆ. ಈ ಟ್ರೋಫಿ ಕ್ರಮವಾಗಿ ಬುಧವಾರ ಹೈದರಾಬಾದ್, ಗುರುವಾರ ಬೆಂಗಳೂರು, ಶುಕ್ರವಾರ ನವದೆಹಲಿ, ಶನಿವಾರ ಜಲಂದರ್ ಮತ್ತು ಭಾನುವಾರ ಆಹ್ಮದಾಬಾದ್‌ಗೆ ತೆರಳಲಿದೆ.

ಮನಿಗ್ರಾಮ್ ಕಂಪನಿ ನೇತೃತ್ವದಲ್ಲಿ ವಿಶ್ವಕಪ್ ಪ್ರಶಸ್ತಿಯನ್ನು ಮಂಗಳವಾರ ಮುಂಬೈನ ಹೈ ಸ್ಟ್ರೀಟ್ ಫೊನಿಕ್ಸ್ ಮಾಲ್‌ಗೆ ತರಲಾಗಿತ್ತು. ಈ ವೇಳೆ ಭಾರತದ ಸ್ಫೋಟಕ ಬ್ಯಾಟ್ಸ್‌ಮಾನ್ ವೀರೇಂದ್ರ ಸೆಹವಾಗ್ ಉಪಸ್ಥಿತರಿದ್ದರು.

ಕ್ರಿಕೆಟ್ ಪ್ರೇಮಿಗಳು ಈ ಪ್ರತಿಷ್ಠಿತ ಟ್ರೋಫಿಯನ್ನು ಕಣ್ತುಂಬಿಕೊಳ್ಳಲು ಉತ್ತಮ ಅವಕಾಶವಾಗಿದ್ದು, ಇದನ್ನು ನೋಡಲು ಸಾಕಷ್ಟು ಅಭಿಮಾನಿಗಳು ಆಗಮಿಸುವ ನಿರೀಕ್ಷೆ ಇದೆ.

ಕ್ರಿಕೆಟ್ ಪ್ರಿಯರು ಈ ಆಕರ್ಷಕ ಟ್ರೋಫಿಯನ್ನು ನೋಡಲು ಇದೊಂದು ಉತ್ತಮ ಅವಕಾಶ. ಐಸಿಸಿ ಹಾಗೂ ಮನಿಗ್ರಾಮ್ ಭಾರತದಲ್ಲಿ ವಿಶ್ವಕಪ್ ಟ್ರೋಫಿ ಪ್ರವಾಸವನ್ನು ಆಯೋಜಿಸಲು ಉತ್ಸುಕವಾಗಿದೆ. ಮುಂದಿನ ದಿನಗಳಲ್ಲಿ ದೇಶದ ಇತರೆ ನಗರಗಳಿಗೂ ಸಂಚರಿಸಲಿದ್ದು, ಅಭಿಮಾನಿಗಳ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ವಿಶ್ವಾಸವಿದೆ ಎಂದು ಮನಿಗ್ರಾಮ್‌ನ ದಕ್ಷಿಣ ಏಷ್ಯಾದ ಸ್ಥಳೀಯ ಹಿರಿಯ ನಿರ್ದೇಶಕ ಕೌಶಿಕ್ ರಾಯ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.