ಧೋನಿಯ ತಪ್ಪಿಲ್ಲ: ಪೊಲೀಸ್
ನವದೆಹಲಿ: ಇತ್ತೀಚೆಗೆ ಉತ್ತರ ಪ್ರದೇಶ ಮೂಲದ ಮ್ಯಾಗಜೀನ್ವೊಂದರಲ್ಲಿ ಧೋನಿ ಹಿಂದೂ ದೇವತೆ ವಿಷ್ಣುವಿನ ವೇಷ ಧರಿಸಿ ಕೈಯಲ್ಲಿ ಶೂ ಹಿಡಿದ ಚಿತ್ರವೊಂದ ಪ್ರಕಟವಾದ ಹಿನ್ನೆಲೆಯಲ್ಲಿ ಧೋನಿ ಹಣಕ್ಕಾಗಿ ಧರ್ಮವೊಂದಕ್ಕೆ ಅಪಮಾನಕಾರಿಯಾಗುವ ರೀತಿ ನಡೆದುಕೊಂಡಿದ್ದಾರೆ ಎಂದು ಶಿವಸೇನೆ ಹಿಂದುಸ್ಥಾನ್ನ ಪ್ರಧಾನ ಕಾರ್ಯದರ್ಶಿ ರಾಜೀಂದರ್ ಸಿಂಗ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು. ಈ ಚಿತ್ರದಲ್ಲಿ ಧೋನಿ ವಿಷ್ಣವಿನ ವೇಷ ಧರಿಸಿದ್ದು, ಆತನ ಕೈಯಲ್ಲಿ ಆತ ಒಪ್ಪಂದ ಮಾಡಿಕೊಂಡಿರುವ ಜಾಹೀರಾತು ಕಂಪನಿಗಳ ಉತ್ಪನ್ನಗಳಿದ್ದವು. ಅವುಗಳಲ್ಲಿ ಶೂ ಸಹ ಒಂದು. ಇದರ ತನಿಖೆ ನಡೆಸಿದ ನಂದ ನಾಗ್ರಿ ಪೊಲೀಸರು ಈ ಚಿತ್ರ ಗ್ರಾಫಿಕ್ ಮೂಲಕ ಮಾಡಲಾಗಿದ್ದು, ಇದರಲ್ಲಿ ಧೋನಿ ಯಾವುದೇ ಪಾತ್ರ ಹೊಂದಿಲ್ಲ. ಮ್ಯಾಗಜೀನ್ ತಮ್ಮ ಗ್ರಾಫಿಕ್ಸ್ ಮೂಲಕ ಈ ಚಿತ್ರವನ್ನು ತಯಾರಿಸಿ ಪ್ರಕಟಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಭ್ಯಾಸ ಸುತ್ತು: ವೆಟ್ಟಲ್ ನಂಬರ್ 1
ಬುಡಾಪೆಸ್ಟ್: ಭಾನುವಾರ ನಡೆಯಲಿರುವ ಹಂಗೇರಿಯನ್ ಗ್ರ್ಯಾನ್ ಪ್ರೀ ರೇಸ್ಗಾಗಿ ಶುಕ್ರವಾರ ಹಾಗೂ ಶನಿವಾರ ಬೆಳಗ್ಗೆ ನಡೆದ ಎರಡು ಹಂತದ ಅಭ್ಯಾಸ ಸುತ್ತಿನಲ್ಲಿ ವಿಶ್ವ ಚಾಂಪಿಯನ್ ಸೆಬಾಸ್ಟಿಯನ್ ವೆಟ್ಟಲ್ ಅವರು ಮೊದಲ ಸ್ಥಾನ ಪಡೆದಿದ್ದಾರೆ. ಎರಡೂ ಹಂತಗಳಲ್ಲಿ ಅವರು ಮೊದಲ ಸ್ಥಾನ ಗಳಿಸಿರುವ ಅವರು, ಭಾನುವಾರದ ಸ್ಪರ್ಧೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅವರು ಪ್ರತಿನಿಧಿಸುವ ರೆಡ್ಬುಲ್ ತಂಡದ ಮತ್ತೊಬ್ಬ ಕ್ರೀಡಾಳು ಮಾರ್ಕ್ ವೆಬರ್ ಅವರು, ಅಭ್ಯಾಸ ಸುತ್ತಿನಲ್ಲಿ 2ನೇ ಸ್ಥಾನ ಪಡೆದರು. ಈ ಬಗ್ಗೆ ಮಾತನಾಡಿದ ವೆಟಲ್, 'ಇತ್ತೀಚಿನ ರೇಸ್ಗಳಿಗೆ ಹೋಲಿಸಿದರೆ, ನಮ್ಮ (ರೆಡ್ಬುಲ್) ಪ್ರದರ್ಶನದಲ್ಲಿ ಕೊಂಚ ಅಭಿವೃದ್ಧಿ ಸಾಧಿಸಿದ್ದೇವೆ ಎನಿಸುತ್ತಿದೆ. ಆದರೂ, ಇಷ್ಟಕ್ಕೇ ತೃಪ್ತರಾಗಬಾರದು. ಮತ್ತಷ್ಟು ಸಾಧಿಸಲು ಪ್ರಯತ್ನಿಸಬೇಕು' ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

