ಕ್ರೀಡೆ

ಚಿನ್ನದ ಪದಕ ಗೆದ್ದ ವನಿತೆಯರು

ದೀಪಿಕಾ ಕುಮಾರಿ ಆಕರ್ಷಕ ಪ್ರದರ್ಶನದ ನೆರವಿನೊಂದಿಗೆ ಭಾರತ ವನಿತೆಯರ ತಂಡ ವಿಶ್ವಕಪ್ ಆರ್ಚರಿ 3ನೇ ಹಂತದಲ್ಲಿ...

ಚಿನ್ನದ ಪದಕ ಗೆದ್ದ ವನಿತೆಯರು
Published On :

ಕೋಲ್ಕತಾ: ದೀಪಿಕಾ ಕುಮಾರಿ ಆಕರ್ಷಕ ಪ್ರದರ್ಶನದ ನೆರವಿನೊಂದಿಗೆ ಭಾರತ ವನಿತೆಯರ ತಂಡ ವಿಶ್ವಕಪ್ ಆರ್ಚರಿ 3ನೇ ಹಂತದಲ್ಲಿ ಚಿನ್ನ ಗೆದ್ದುಕೊಂಡಿದೆ. ಮಿಶ್ರ ತಂಡ ವಿಭಾಗದಲ್ಲಿ ಕಂಚು ಗೆದ್ದುಕೊಂಡ ಭಾರತ ತಂಡ ಪಂದ್ಯಾವಳಿಯಲ್ಲಿ ಒಟ್ಟಾರೆ 4ನೇ ಸ್ಥಾನ ಪಡೆದುಕೊಂಡಿದೆ.
ಗಾಳಿ ಜೋರಾಗಿ ಬೀಸುತ್ತಿದ್ದ ಸಂದರ್ಭದಲ್ಲಿ ವಿಶ್ವದ ನಂಬರ್ 3 ರಿಕರ್ವ್ ಆರ್ಚರಿಯಲ್ಲಿ ದೀಪಿಕಾ ನಾಲ್ಕೂ ಸುತ್ತುಗಳಲ್ಲೂ ಅದ್ಭುತ ಅಂಕ ಗಳಿಸುವ ಮೂಲಕ ಮಹಿಳೆಯರ ಫೈನಲ್ ವಿಭಾಗದಲ್ಲಿ ಚೀನಾ ವಿರುದ್ಧ ಭಾರತ ತಂಡ 201-186 ಅಂತರದಿಂದ ಜಯ ಸಾಧಿಸಿತು.
2011ರಲ್ಲಿ ಶಾಂಘೈನಲ್ಲಿ ಚಿನ್ನ ಗೆದ್ದ ನಂತರ ವಿಶ್ವಕಪ್ ತಂಡ ವಿಭಾಗದಲ್ಲಿ ಭಾರತ ಇದೇ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದುಕೊಂಡಿದೆ.
ವನಿತೆಯರ ತಂಡ ಚಿನ್ನದ ಪದಕ ಗೆದ್ದುಕೊಂಡ ನಂತರ ಮಿಶ್ರ ತಂಡ ವಿಭಾಗದಲ್ಲಿ ಅತಾನು ದಾಸ್ ಅವರೊಂದಿಗೆ ಸೇರಿಕೊಂಡ ದೀಪಿಕಾ ಅವರು ಭಾರತ ಮೆಕ್ಸಿಕೋ ವಿರುದ್ಧ 150-132 ಅಂಕಗಳಿಂದ ಜಯ ಸಾಧಿಸುವ ಮೂಲಕ ಕಂಚಿನ ಪದಕ ಗೆಲ್ಲಲು ನೆರವಾದರು.
ಭಾರತ ತಂಡ ಒಂದು ಚಿನ್ನ ಮತ್ತು ಎರಡು ಕಂಚಿನ ಪದಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದರೆ, 2 ಚಿನ್ನ, 5 ಬೆಳ್ಳಿ ಹಾಗೂ 2 ಕಂಚಿನ ಪದಕ ಗೆದ್ದ ಅಮೆರಿಕ ಅಗ್ರಸ್ಥಾನ ಪಡೆಯಿತು. 2 ಚಿನ್ನ, 1 ಬೆಳ್ಳಿ ಹಾಗೂ 2 ಕಂಚಿನ ಪದಕ ಗೆದ್ದ ಚೀನಾ ದ್ವಿತೀಯ ಸ್ಥಾನ ಪಡೆಯಿತು. 1 ಚಿನ್ನ, 2 ಬೆಳ್ಳಿ ಗೆದ್ದ ಆತಿಥೇಯ ಕೊಲಂಬಿಯಾ ಮೂರನೇ ಸ್ಥಾನ ಗಿಟ್ಟಿಸಿತು.
ಅಗ್ರ ಶ್ರೇಯಾಂಕ ಪಡೆದಿದ್ದ ಚೀನಾ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಶೂ ಜಿಂಗ್ ಅವರನ್ನೊಳಗೊಂಡಿತ್ತು. ಚೆಂಗ್ ಮಿಂಗ್ ಹಾಗೂ ಚೂ ಯೂನ್ಯುನ್ ಅವರನ್ನೊಳಗೊಂಡ ತಂಡ ಗೆಲ್ಲುವ ಫೇವರಿಟ್ ಎನಿಸಿತ್ತು. ಆದರೆ, ಮಿಂಗ್ ಸಂಪೂರ್ಣವಾಗಿ ಗುರಿ ತಪ್ಪುವ ಮೂಲಕ ಅಂಕ ಗಳಿಸುವಲ್ಲಿ ವಿಫಲವಾದರು. ಜಿಂಗ್ ಮತ್ತು ಯುನ್ಯೂನ್ 6 ಮತ್ತು 5ನೇ ಸ್ಥಾನ ಪಡೆಯುವುದರೊಂದಿಗೆ ಚೀನಾ ಭಾರತಕ್ಕೆ ಶರಣಾಯಿತು.
ಭಾರತದ ಇನ್ನಿಬ್ಬರು ಆಟಗಾರ್ತಿಯರಾದ ರಿಮಿಲ್ ಬುರಿಲಿ ಮತ್ತು ಬೊಂಬೆಲಾ ದೇವಿ ಲೈಶ್ರಮ್ ಇಬ್ಬರೂ ಸೇರಿ 11 ಅಂಕ ಗಳಿಸಿದರೆ, ದೀಪಿಕಾ 8 ಅಂಕ ಪಡೆಯುವ ಮೂಲಕ ಸುತ್ತಿನಲ್ಲಿ ಭಾರತ 46-33 ಅಂಕಗಳಿಂದ ಮುನ್ನಡೆ ಕಂಡುಕೊಂಡಿತು.
ನಂತರ ದ್ವಿತೀಯ ಸುತ್ತಿನಲ್ಲಿ ಸ್ಥಿರ ಪ್ರದರ್ಶನ ಮುಂದುವರಿಸಿದ ಭಾರತ 147-134 ಅಂಕಗಳೊಂದಿಗೆ ಚೀನಾವನ್ನು ಬದಿಗಿಟ್ಟಿತು ಮುನ್ನಡೆ ಕಂಡುಕೊಂಡಿತು. ನಂತರ ಚೀನಾ ಆಟಗಾರ್ತಿಯರು ತೀವ್ರ ಪೈಪೋಟಿ ನೀಡಿದರು. ಆದರೆ, ದೀಪಿಕಾ ಅವರ ನಿಖರ ಪ್ರದರ್ಶನ ನೆರವಿನೊಂದಿಗೆ ಭಾರತ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಯಿತು. ಅಂತಿಮ ಮತ್ತು ನಾಲ್ಕನೇ ಸುತ್ತಿನ ವಿಶ್ವಕಪ್ ಆರ್ಚರಿ ಪಂದ್ಯಾವಳಿ ಆಗಸ್ಟ್ 19ರಿಂದ 25ರವರೆಗೆ ಪೊಲೆಂಡ್‌ನಲ್ಲಿ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.