ಕ್ರೀಡೆ

ಫೆಡರರ್ಗೆ ಸೋಲು

Published On :

ಹಂಬರ್ಗ್: ಖ್ಯಾತ ಟೆನಿಸ್ ತಾರೆ ರೋಜರ್ ಫೆಡರರ್ ಜರ್ಮನಿ ಟೆನಿಸ್ ಚಾಂಪಿಯನ್ಷಿಪ್ನ ಸೆಮಿಫೈನಲ್ ಪಂದ್ಯದಲ್ಲಿ ಅರ್ಹತಾ ಸುತ್ತಿನ ಮೂಲಕ ಪ್ರವೇಶ ಪಡೆದಿದ್ದ ಅರ್ಜೆಂಟೀನಾದ ಫೆಡೆರಿಕೋ ಡೆಲ್ಬೋನಿಸ್ ವಿರುದ್ಧ 7-6 (7), 7-6 (4) ನೇರ ಸೆಟ್ಗಳ ಅಂತರದಿಂದ ಪರಾಭವ ಹೊಂದಿದರು.
ಹಂಬರ್ಗ್ನಲ್ಲಿ ನಾಲ್ಕು ಬಾರಿ ಚಾಂಪಿಯನ್ ಎನಿಸಿದ್ದ ಫೆಡರರ್ 114 ರ್ಯಾಂಕಿಂಗ್ ಹೊಂದಿರುವ ಆಟಗಾರನ ವಿರುದ್ಧ ಪರಾಭವ ಹೊಂದಿದರು. ಇದರೊಂದಿಗೆ ಅರ್ಜೆಂಟೀನಾದ ಫೆಡೆರಿಕೋ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದರು.
'ಫೆಡೆರಿಕೋ ಉತ್ತಮ ಪ್ರದರ್ಶನ ತೋರಿದರು. ಪಂದ್ಯದಲ್ಲಿ ಕೊಂಚ ಆಕ್ರಮಣಕಾರಿ ಆಟ ಪ್ರದರ್ಶಿಸಿದ್ದು ಅವರಿಗೆ ಜಯ ಕಾಣಲು ಸಾಧ್ಯವಾಯಿತು' ಎಂದಿದ್ದಾರೆ ರೋಜರ್ ಫೆಡರರ್.
ವಿಂಬಲ್ಡನ್ ಟೆನಿಸ್ ಚಾಂಪಿಯನ್ಷಿಪ್ನ ದ್ವಿತೀಯ ಸುತ್ತಿನಲ್ಲಿ ಸೋಲನುಭವಿಸಿದ್ದ ಫೆಡರರ್ ಈ ಪಂದ್ಯಾವಳಿಯಲ್ಲಿ ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಗಿಟ್ಟಿಸಿದ್ದರು.
ಫೈನಲ್ ಪಂದ್ಯದಲ್ಲಿ ಫೆಡೆರಿಕೋ ಇಟಲಿಯ ಫ್ಯಾಬಿಯೋ ಫೋಗ್ನಿನಿ ಅವರನ್ನು ಎದುರಿಸಲಿದ್ದಾರೆ. ಫೋಗ್ನಿನಿ ಅವರು ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಸ್ಪೇನ್ನ ನಿಕೋಲಾಸ್ ಅಲ್ಮಗ್ರೋ ವಿರುದ್ಧ 6-4, 7-6 (1) ಸೆಟ್ಗಳಿಂದ ಜಯ ಕಂಡುಕೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.