17ರಿಂದ ಶಫಿ ದಾರಾಶಾ ಟ್ರೋಫಿ
ಬೆಂಗಳೂರು: ಅಖಿಲ ಭಾರತ ಆಹ್ವಾನಿತ ಶಫಿ ದಾರಾಶಾ ಕ್ರಿಕೆಟ್ ಪಂದ್ಯಾವಳಿ ಇದೇ ಜುಲೈ 17ರಿಂದ ಬರುವ ಆಗಸ್ಟ್ 13ರವರೆಗೆ ಬೆಂಗಳೂರು ಮತ್ತು ಮೈಸೂರಿನಲ್ಲಿ ನಡೆಯಲಿದೆ.
ಪಂದ್ಯಾವಳಿ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ನಾಲ್ಕು ತಂಡಗಳನ್ನು ಪ್ರಕಟಿಸಿದೆ. ಕೆಎಸ್ಸಿಎ ಕಾಲ್ಟ್ಸ್, ಕೆಎಸ್ಸಿಎ ಪ್ರಸಿಡೆಂಟ್ ಇಲೆವೆನ್, ಕೆಎಸ್ಸಿಎ ಸೆಕ್ರೇಟಿಸ್ ಇಲೆವೆನ್ ಹಾಗೂ ಕೆಎಸ್ಸಿಎ ಇಲೆವೆನ್ ಆ ನಾಲ್ಕು ತಂಡಗಳವಾಗಿವೆ.
ರಾಜ್ಯ ರಣಜಿ ಪ್ರಮುಖ ಆಟಗಾರರಾದ ಸಿ.ಎಂ ಗೌತಮ್, ಸ್ಟುವಟ್ ಬಿನ್ನಿ, ರಾಬಿನ್ ಉತ್ತಪ್ಪ, ಮನೀಶ್ ಪಾಂಡೆ, ಕೆ.ಪಿ ಅಪ್ಪಣ್ಣ, ಅಭಿಮನ್ಯು ಮಿಥುನ್, ಶರತ್ ಎಚ್.ಎಸ್ ಸೇರಿದಂತೆ ಪಂದ್ಯಾವಳಿಯಲ್ಲಿ ಕರ್ನಾಟಕದ ಒಟ್ಟು 58 ಪ್ರಮುಖ ಆಟಗಾರರು ಪಾಲ್ಗೊಳ್ಳಲಿದ್ದಾರೆ.
ಕರ್ನಾಟಕದ ನಾಲ್ಕು ತಂಡಗಳು ಸೇರಿದಂತೆ ಇತರ ರಾಜ್ಯಗಳ 12 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ಹೀಗಾಗಿ ಪಂದ್ಯಾವಳಿಯಲ್ಲಿ ಒಟ್ಟು 16 ತಂಡಗಳ ನಡುವೆ ಹೋರಾಟ ನಡೆಯಲಿದೆ.
ಇದರೊಂದಿಗೆ ಎಲ್ಲ ನಾಲ್ಕೂ ತಂಡಗಳಿಗೂ ಪ್ರತ್ಯೇಕ ತರಬೇತುದಾರರು ಮತ್ತು ದೈಹಿಕ ತಜ್ಞರನ್ನು ಹೊಂದಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

