ಕ್ರೀಡೆ

ಚಂದರ್ ನಿಧನ

Published On :

ಬೆಂಗಳೂರು: ಐಟಿಐ ಫುಟ್ಬಾಲ್ ತಂಡದ ಮಾಜಿ ಆಟಗಾರ ಇ. ಚಂದರ್ ನಿಧನರಾಗಿದ್ದಾರೆ. 1983ರಿಂದ 1990ರವರೆಗೆ ಅವರು ಐಟಿಐನಲ್ಲಿ ಆಡಿದ್ದರು.
ಐಟಿಐ ಹಾಗೂ ಭಾರತ ಪರ ಉತ್ತಮ ಪ್ರದರ್ಶನ ನೀಡಿದ ಸುಂದರೇಶನ್ ಸಮಯದಲ್ಲಿ ಚಂದರ್ ಗೋಲ್ ಕೀಪರ್ ಆಗಿ ಕಾರ್ಯ ನಿರ್ವಹಿಸಿದ್ದರು. ಅಲ್ಲದೆ ಡುರಾಂಡ್ ಕಪ್, ರೊವರ್ಸ್ ಕಪ್, ರಾಕ್ ಟ್ರೋಫಿಯಲ್ಲಿ ಭಾಗವಹಿಸಿದ್ದರು. ಐಟಿಐ ತಂಡ ಸೇರುವ ಮುನ್ನ ಜ್ಯುಪಿಟರ್ ಎಫ್‌ಸಿ ತಂಡದ ಪರ ಆಡಿದ್ದರು. ಚಂದರ್ ಕಳೆದ 1 ವಾರದಿಂದ ಫಿಲೋಮಿನಾ ಆಸ್ಪತ್ರೆಗೆ ದಾಖಲಾಗಿದ್ದು, ಸೋಮವಾರ ಬೆಳಗ್ಗೆ 10.30ರ ವೇಳೆಗೆ ನಿಧನರಾಗಿದ್ದಾರೆ. ಇವರ ಅಂತಿಮ ಸಂಸ್ಕಾರವನ್ನು ಮಂಗಳವಾರ ಕಲ್ಲಪಳ್ಳಿ ವಿದ್ಯುತ್ ಚಿತಾಗಾರದಲ್ಲಿ ನಡೆಸಲಾಗುವುದು.

ಐಪಿಸಿಗೆ ಗಿರೀಶ್
ನವದಹೆಲಿ: ಲಂಡನ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಹಾಸನದ ಎಚ್.ಎನ್ ಗಿರೀಶ್ ಅವರು ಐಪಿಸಿ ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲಿದ್ದಾರೆ. ಚಾಂಪಿಯನ್‌ಶಿಪ್‌ಗೆ ಆಯ್ಕೆ ಮಾಡಲಾಗಿರುವ 10 ಸದಸ್ಯರ ಭಾರತ ತಂಡದಲ್ಲಿ ಗಿರೀಶ್ ಒಬ್ಬರಾಗಿದ್ದಾರೆ. ಚಾಂಪಿಯನ್‌ಶಿಪ್ ಜುಲೈ 19ರಿಂದ 28ರವರೆಗೆ ಫ್ರಾನ್ಸ್‌ನಲ್ಲಿ ನಡೆಯಲಿದೆ. ಎಲ್ಲ ಹತ್ತು ಅಥ್ಲೀಟ್‌ಗಳೂ ಎ ವಿಭಾಗದಲ್ಲೆ ಅರ್ಹತೆ ಪಡೆದುಕೊಂಡಿದ್ದಾರೆ. ಗಿರೀಶ್ ಪುರುಷರ ಹೈಜಂಪ್ ಟಿ-42 ವಿಭಾಗದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಳೆದ ವರ್ಷ ಪದ್ಮಶ್ರೀ ಪ್ರಶಸ್ತಿ ವಿಜೇತ ದೇವೇಂದ್ರ ಝಜರಿಯಾ ಜಾವೆಲಿನ್ ಥ್ರೋ ವಿಭಾಗದಲ್ಲಿ ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.