ಕ್ರೀಡೆ

2015ರ ವಿಶ್ವಕಪ್‌ಗೆ ಐರ್ಲೆಂಡ್

Published On :

ದುಬೈ: ವಿಶ್ವ ಕ್ರಿಕೆಟ್ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ಹಾಲೆಂಡ್ ವಿರುದ್ಧ ಜಯ ಸಾಧಿಸಿದ ಐರ್ಲೆಂಡ್ ತಂಡ ಸತತ ಮೂರನೇ ಭಾರಿಗೆ ಐಸಿಸಿ ವಿಶ್ವಕಪ್ ಪಂದ್ಯಾವಳಿಗೆ ಅರ್ಹತೆ ಪಡೆದುಕೊಂಡಿದೆ.
ಪಂದ್ಯದ ಅತಿಮ ಎರಡು ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದ ಹಾಲೆಂಡ್ ಬ್ಯಾಟ್ಸ್‌ಮನ್ ಮೈಕಲ್ ರಿಪ್ಪನ್ ತಮ್ಮ ತಂಡಕ್ಕೆ ಒಂದು ಅಂಕ ಗಳಿಸಿಕೊಡುವಲ್ಲಿ ಯಶಸ್ವಿಯಾದರು. ಆದರೆ, ಇದು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ 2015ನೇ ವಿಶ್ವಕಪ್ ಪಂದ್ಯಾವಳಿಗೆ ಪ್ರವೇಶ ಪಡೆಯಲು ಐರ್ಲೆಂಡ್‌ಗೆ ಅಡ್ಡಿಯಾಗಲಿಲ್ಲ.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ್ದ ಐರ್ಲೆಂಡ್, ಎಡ್ ಜಾಯಿಸ್ (ಅಜೇಯ 96) ಮತ್ತು ನೈಲ್ ಓಬ್ರೇನ್ (50) ಹಾಗೂ ಪಾಲ್ ಸ್ಟರ್ಲಿಂಗ್ (49) ನೆರವಿನೊಂದಿಗೆ ನಿಗದಿತ 50 ಓವರ್‌ಗಳಲ್ಲಿ 268 ರನ್ ಗಳಿಸಿತ್ತು.
ಇದಕ್ಕೆ ಉತ್ತರವಾಗಿ ಹಾಲೆಂಡ್ ಉತ್ತಮ ಆರಂಭವನ್ನೇ ಕಂಡಿತ್ತು. ವೆಸ್ಲೀ ಬಾರ್ರೆಸಿ (46), ಎರಿಕ್ ಸ್ವರ್ಕಾಸ್ಕಿ (44) ಹಾಗೂ ಸ್ಟೆಫನ್ ಮೇಬರ್ಗ್ (35) ನೆರವಿನೊಂದಿಗೆ ಹಾಲೆಂಡ್ 4 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿತ್ತು. ಆದರೆ, ನಂತರ ಡಾನ್ ವ್ಯಾನ್ ಬುಂಗೆ (45) ಮತ್ತು ಟಾಮ್ ಕೂಪರ್ (38) ಅವರ ಆಕರ್ಷಕ ಬ್ಯಾಟಿಂಗ್ ನೆರವಿನೊಂದಿಗೆ ಹಾಲೆಂಡ್‌ಗೆ ಗೆಲ್ಲಲು ಅಂತಿಮ ಎರಡು ಓವರ್‌ಗಳಲ್ಲಿ 16 ರನ್ ಬೇಕಾಗಿತ್ತು. ಐರ್ಲೆಂಡ್‌ನ ಅಲೆಕ್ಸ್ ಕುಸಾಕ್ 49ನೇ ಓವರ್‌ನಲ್ಲಿ ಕೇವಲ 3 ರನ್ ನೀಡಿದರು. ಅಂತಿಮ ಓವರ್‌ನಲ್ಲಿ ಮೂನಿ ಆಕರ್ಷಕವಾಗಿ ಬೌಲಿಂಗ್ ಆರಂಭಿಸಿ ಮೊದಲ ನಾಲ್ಕು ಎಸೆತಗಳಲ್ಲಿ ಕೇವಲ 2 ರನ್ ನೀಡಿದರು. ಆದರೆ, ಈ ಹಂತದಲ್ಲಿ ಕ್ರೀಸ್‌ನಲ್ಲಿದ್ದ ರಿಪ್ಪನ್ ಅಂತಿಮ ಎರಡು ಎಸೆತಗಳಲ್ಲಿ 1 ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸುವ ಮೂಲಕ ತಮ್ಮ ತಂಡಕ್ಕೆ 1 ಅಂಕ ಗಳಿಸಿಕೊಟ್ಟರು. ಈ ಅಂಕ ವಿಶ್ವಕಪ್‌ಗೆ ಎರಡನೇ ತಂಡವಾಗಿ ಅರ್ಹತೆ ಪಡೆಯಲು ಹಾಲೆಂಡ್‌ಗೆ ನೆರವಾದರೂ ಆಗಬಹುದು.
ಪಂದ್ಯಾವಳಿಯಲ್ಲಿ ಆಡಿದ 12 ಪಂದ್ಯಗಳಲ್ಲಿ 9ರಲ್ಲಿ ಜಯ ಸಾಧಿಸಿದ ಐರ್ಲೆಂಡ್ 20 ಅಂಕ ಗಳಿಸಿತು. ಈಗ ಎರಡನೇ ತಂಡವಾಗಿ ವಿಶ್ವಕಪ್‌ಗೆ ಅರ್ಹತೆ ಪಡೆಯಲು ಹಾಲೆಂಡ್, ಆಫ್ಘಾನಿಸ್ತಾನ, ಸ್ಕಾಟ್ಲೆಂಡ್ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡಗಳಿಗೆ ಅವಕಾಶವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.