ಕ್ರೀಡೆ

ಮ್ಯಾಥ್ಯೂಸ್ ಪಡೆಗೆ ಜಯ

Published On :

ಪೋರ್ಟ್ ಆಫ್ ಸ್ಪೈನ್: ಸಂಗಕ್ಕಾರ ಅವರ ಜವಾಬ್ದಾರಿಯುತ ಬ್ಯಾಟಿಂಗ್ ಹಾಗೂ ನಾಯಕ ಏಂಜಲೋ ಮ್ಯಾಥ್ಯೂಸ್ ಅವರ ಆಲ್ರೌಂಡರ್ ಪ್ರದರ್ಶನದಿಂದ ಶ್ರೀಲಂಕಾ ತಂಡ ವೆಸ್ಟ್ ಇಂಡೀಸ್ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ 39 ರನ್‌ಗಳ ಜಯ ಸಾಧಿಸಿದೆ.
ವೇಳಾಪಟ್ಟಿಯ ಪ್ರಕಾರ ಭಾನುವಾರ ನಡೆಯಬೇಕಿದ್ದ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಪಂದ್ಯವನ್ನು ಸೋಮವಾರ ಮುಂದುವರಿಸಲಾಯಿತು. ಭಾನುವಾರ ಶ್ರೀಲಂಕಾ ತಂಡ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದು 19 ಓವರ್‌ಗಳಲ್ಲಿ 3ವಿಕೆಟ್ ನಷ್ಟಕ್ಕೆ 60 ರನ್‌ಗಳಿಸಿತ್ತು.
ಸೋಮವಾರವೂ ಪಂದ್ಯ ಆರಂಭದಲ್ಲಿ ಮಳೆ ಆಗಾಗ ಅಡಿಯುಂಟು ಮಾಡಿತು. ಹಾಗಾಗಿ ಪಂದ್ಯವನ್ನು 41 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ತಮ್ಮ ಬ್ಯಾಟಿಂಗ್ ಮುಂದುವರಿಸಿದ ಸಂಗಕ್ಕಾರ ಹಾಗೂ ತಿರಿಮಾನ್ನೆ ರಕ್ಷಣಾತ್ಮಕ ಆಟಕ್ಕೆ ಮುಂದಾದರಾದರೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಈ ಜೋಡಿ 4ನೇ ವಿಕೆಟ್‌ಗೆ 64ರನ್‌ಗಳ ಜತೆಯಾಟ ನೀಡಿತು. ಆನಂತರ, ಮ್ಯಾಥ್ಯೂಸ್, ಮೆಂಡಿಸ್, ಕುಲಸೇಖರ, ಸೇನನಾಯಕೆ ಬೇಗನೇ ಔಟಾದರು.
ಇನಿಂಗ್ಸ್ ಅಂತ್ಯದವರೆಗೂ ಕ್ರೀಸ್‌ನಲ್ಲಿ ನಿಂತಿದ್ದ ಸಂಗಕ್ಕಾರ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರು. 95 ಎಸೆತಗಳನ್ನು ಎದುರಿಸಿದ ಇವರು 6 ಬೌಂಡರಿ ಹಾಗೂ 1 ಸಿಕ್ಸರ್ ಸೇರಿದಂತೆ ಅಜೇಯ 90 ರನ್‌ಗಳಿಸಿ ಲಂಕಾ ತಂಡ 190 ರನ್ ಕಲೆಹಾಕಲು ನೆರವಾದರು.
ಲಂಕಾ ನೀಡಿದ್ದ ಸವಾಲನ್ನು ಬೆನ್ನಟ್ಟಿದ್ದ ವಿಂಡೀಸ್‌ಗೆ ಆರಂಭಿಕರಾದ  ಕ್ರಿಸ್ ಗೇಯ್ಲ್ ಹಾಗೂ ಚಾರ್ಲ್ಸ್ ಉತ್ತ ಆರಂಭ ನೀಡಿದರಾದರೂ, ಬೇಗನೇ ಬೇರ್ಪಟ್ಟರು. ಮಧ್ಯಮ ಕ್ರಮಾಂಕದ ಸಿಮನ್ಸ್, ಸ್ಯಾಯ್ಯುಯೆಲ್ಸ್ ಬಿಟ್ಟರೆ ಮತ್ಯಾರೂ ಗಟ್ಟಿಯಾಗಿ ನಿಂತು ಆಡಲಿಲ್ಲ. ಅಂತಿಮವಾಗಿ, ವಿಂಡೀಸ್ 41 ಓವರ್‌ಗೆ 190 ರನ್ ಮಾತ್ರ ಗಳಿಸಲು ಶಕ್ತವಾಯಿತು.

ಸ್ಕೋರ್ ಬೋರ್ಡ್

ಶ್ರೀಲಂಕಾ 219/8 (41 ಓವರ್)
ತರಂಗಾ ಸಿ ಬ್ರಾವೊ ಬಿ ಹೊಲ್ಡರ್ 7(14), ಜಯವರ್ಧನೆ ಸಿ ಸ್ಮಿತ್ ಬಿ ರೋಚ್ 7(12), ಸಂಗಕ್ಕಾರ ಅಜೇಯ 90(95), ಚಂಡಿಮಲ್ ಬಿ ರೋಚ್ 2(8), ತಿರಿಮಾನ್ನೆ ಬಿ ಸ್ಯಾಮ್ಯುಯಲ್ಸ್ 23(73), ಮ್ಯಾಥ್ಯೂಸ್ ಸಿ ಸ್ಮಿತ್ ಬಿ ರೋಚ್ 30(27), ಮೆಂಡಿಸ್ ಸಿ ಚಾರ್ಲ್ಸ್ ಬಿ ರೋಚ್ 8(5), ಕುಲಸೇಖರ ಸಿ ಬ್ರಾವೊ ಬಿ ಹೊಲ್ಡರ್ 14(9), ಸೇನನಾಯಕೆ ಸಿ ಬ್ರಾವೊ ಬಿ ಪೊಲಾರ್ಡ್ 7(6), ಇತರೆ 31
ವಿಕೆಟ್ ಪತನ: 1-19, 2-19, 3-29, 4-93, 5-139, 6-147, 7-201, 8-219.
ಬೌಲಿಂಗ್: ರೋಚ್ 8-2-27-4, ಹೋಲ್ಡರ್ 8-0-50-2, ಸಾಮಿ 9-2-24-0, ಬೆಸ್ಟ್ 6-0-42-0, ಸ್ಯಾಮ್ಯುಯಲ್ಸ್ 7-0-48-1, ಪೊಲಾರ್ಡ್ 3-0-24-1

ವೆಸ್ಟ್ ಇಂಡೀಸ್ 190/9 (41 ಓವರ್)
ಗೇಯ್ಲ್ ಸಿ ಎರಾಂಗ ಬಿ ಮ್ಯಾಥ್ಯೂಸ್ 14(17), ಚಾರ್ಲ್ಸ್ ಸಿಮತ್ತು ಬಿ ಎರಾಂಗಾ 14(13), ಸ್ಮಿತ್ ಎಲ್‌ಬಿಡಬ್ಲ್ಯೂ ಬಿ ಮ್ಯಾಥ್ಯೂಸ್ 0(14), ಸ್ಯಾಮ್ಯುಯಲ್ಸ್ ಸಿ ಜಯವರ್ಧನೆ ಬಿ ಎರಾಂಗ 0(4), ಬ್ರಾವೊ ಸಿ ಮೆಂಡಿಸ್ ಬಿ ಮ್ಯಾಥ್ಯೂಸ್ 70(84), ಸಿಮನ್ಸ್ ಸಿ ತಿರಿಮಾನ್ನೆ ಬಿ ಎರಾಂಗ 67(78), ಪೊಲಾರ್ಡ್ ಸಿ ಸಂಗಕ್ಕಾರ ಬಿ ಮಾಲಿಂಗಾ 0(4), ಸಾಮಿ ಸಿ ಮತ್ತು ಬಿ ಮಾಲಿಂಗಾ 3(9), ರೋಚ್ ಅಜೇಯ 8(11), ಹೊಲ್ಡರ್ ಬಿ ಮ್ಯಾಥ್ಯೂಸ್ 0(1), ಬೆಸ್ಟ್ ಅಜೇಯ 5(11), ಇತರೆ 9
ವಿಕೆಟ್ ಪತನ: 1-25, 2-29, 3-29, 4-31, 5-154, 6-154, 7-172, 8-176, 9-177
ಬೌಲಿಂಗ್: ಕುಲಸೇಖರ 1.5-0-8-0, ಎರಾಂಗ 8-0-46-3, ತಿರಿಮಾನ್ನೆ 4.1-0-16-0, ಮ್ಯಾಥ್ಯೂಸ್ 8-1-29-4, ಸೇನನಾಯಕೆ 9-0-41-0, ಮಾಲಿಂಗಾ 8-2-42-2, ಮೆಂಡಿಸ್ 2-0-8-0

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.