'ಬಟ್ಟೆ ತೆಗೆಯಲು ಒತ್ತಾಯಿಸಿದರು'
ನವದೆಹಲಿ: ಲಂಡನ್ ವಿಮಾನ ನಿಲ್ದಾಣದಲ್ಲಿ ಏರ್ಪೋರ್ಟ್ ಅಧಿಕಾರಿಗಳು ನನಗೆ ಬಟ್ಟೆ ತೆಗೆಯಲು ಒತ್ತಾಯಿಸಿದರು. ಎಂದು ಮಾಜಿ ಕ್ರಿಕೆಟಿಗ ಕೀರ್ತಿ ಅಜಾದ್ ಅವರು ಆರೋಪಿಸಿದ್ದಾರೆ. ತಮ್ಮ ಪತ್ನಿ ಹಾಗೂ ಪುತ್ರನೊಂದಿಗೆ ಲಂಡನ್ನಿಂದ ತವರಿಗೆ ಮರಳುತ್ತಿದ್ದಾಗ ವಿಮಾನ ನಿಲ್ದಾಣದಲ್ಲಿ ಆಜಾದ್ ತೀವ್ರ ತಪಾಸಣೆಗೊಳಪಟ್ಟಿದ್ದಾರಂತೆ. 'ನನ್ನ ಬ್ಯಾಗ್ನಲ್ಲಿ ಸ್ಫೋಟಕ ವಸ್ತು ಒಂದು ಇದೆ ಎಂದು ಆರೋಪಿಸುವ ಮೂಲಕ ಏರ್ಪೋರ್ಟ್ ಅಧಿಕಾರಿಗಳು ನನಗೆ ತೀವ್ರ ಹಿಂಸೆ ನೀಡಿದರು. ನನ್ನನ್ನು ಪ್ರತ್ಯೇಕ ಕೊಠಡಿಯೊಂದಕ್ಕೆ ಕರೆದುಕೊಂಡು ಹೋದಾಗ, ನಾನು ಭೀತಿಗೊಳಪಟ್ಟಿದ್ದೆ. ಅಲ್ಲಿ ನನ್ನ ಬೆಟ್ಟೆಗಳನ್ನು ತೆಗೆಯಲು ಅಧಿಕಾರಿಗಳು ಒತ್ತಾಯಿಸಿದರು' ಎಂದು ಆಜಾದ್ ಹೇಳಿದರು.ವಿಮಾನ ನಿಲ್ದಾಣದಲ್ಲಿ ಒಟ್ಟು 45 ನಿಮಿಷಗಳ ಕಾಲ ನನ್ನನ್ನು ತಪಾಸಣೆಗೊಳಪಡಿಸಲಾಯಿತು ಎಂದು ಅಜಾದ್ ಹೇಳಿದ್ದಾರೆ.
ನಾಣ್ಯ ಚಿಮ್ಮಿದ ಸ್ಮೈಲ್ ಪಿಂಕಿ
ಲಂಡನ್: ಉಚಿತ ಸೀಳುದುಟಿ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಭಾರತದ ಬಾಲಕಿ ಪಿಂಕಿ ಸೊಂಕಾರ್ ಭಾನುವಾರ ವಿಂಬಲ್ಡನ್ ಪುರುಷರ ಫೈನಲ್ ಪಂದ್ಯದಲ್ಲಿ ನಾಣ್ಯ ಚಿಮ್ಮಿದರು. ಆ್ಯಂಡಿ ಮರ್ರೆ ಮತ್ತು ನೋವಾಕ್ ಜೋಕೊವಿಚ್ ನಡುವೆ ನಡೆದ ಪಂದ್ಯದಲ್ಲಿ ಪಿಂಕಿ ನಾಣ್ಯ ಚಿಮ್ಮಿದರು. ಬಿಳಿ ನಕ್ಲೆಸ್ನೊಂದಿಗೆ ಬಿಳಿ ಟಿ ಶರ್ಟ್ ಮತ್ತು ಕಾಲಂಗಿ ತೊಟ್ಟಿದ್ದ ಪಿಂಕಿ ಪ್ರೇಕ್ಷಕರತ್ತ ಕೈಬೀಸುತ್ತಾ ವಿಶ್ವಾಸದಿಂದ ಸೆಂಟರ್ ಕೋರ್ಟ್ಗೆ ಪ್ರವೇಶಿಸಿದಳು. ಅಧಿಕಾರಿಗಳು ಮತ್ತು ಫೈನಲ್ ಪ್ರವೇಶಿಸಿದ ಇಬ್ಬರೂ ಆಟಗಾರರೊರಂದಿಗೆ ಪಿಂಕಿ ಕೈ ಕುಲುಕಿದಳು. 11 ವರ್ಷದ ಭಾರತದ ಪಿಂಕಿ ನ್ಯೂಯಾರ್ಕ್ ಮೂಲದ ಸ್ಮೈಲ್ ಟ್ರೇನ್ ಪ್ರತಿನಿಧಿಸಿದ್ದರು. ಹೀಗಾಗಿ 2007ರಲ್ಲಿ ಆಕೆ ಸೀಳುದುಟಿ ಚಿಕಿತ್ಸೆ ಪಡೆದಿದ್ದಳು. ಪಂದ್ಯ ಮುಕ್ತಾಯದ ನಂತರ ಆಟಗಾರರೊಂದಿಗೆ ಪಿಂಕಿಗೆ ಹೋಟೆಲ್ಲೊಂದರಲ್ಲಿ ಭೋಜನಕೂಟವೂ ಇತ್ತು.
ವಿಂಡೀಸ್ ಪಂದ್ಯಕ್ಕೆ ಮಳೆ ಅಡ್ಡಿ
ಪೋಟ್ ಆಫ್ ಸ್ಪೇನ್: ಆತಿಥೇಯ ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ತ್ರಿಕೋನ ಸರಣಿಯ ಮಹತ್ವದ ಪಂದ್ಯಕ್ಕೆ ಮಳೆ ಅಡ್ಡಿ ಉಂಟುಮಾಡಿದೆ.
ಮಳೆಯಿಂದ ಪಂದ್ಯ ನಿಂತಾಗ ಶ್ರೀಲಂಕಾ 19 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 60 ರನ್ ಗಳಿಸಿತ್ತು. ಲಹೀರು ತಿರಿಮನೆ (13) ಮತ್ತು ಕುಮಾರ ಸಂಗಕ್ಕಾರ (11) ಕ್ರೀಸ್ನಲ್ಲಿದ್ದರು.
ಆರಂಭಿಕರಾದ ಉಪುಲ್ ತರಂಗಾ (7) ಮತ್ತು ಮಹೇಲ ಜಯವರ್ಧನೆ (7) ಬೇಗನ ನಿರ್ಗಮಿಸುವ ಮೂಲಕ ತಂಡ ಆರಂಭಿಕ ಆಘಾತ ಅನುಭವಿಸಿತು. ತರಂಗಾ ಬ್ರಾವೋ ಬೌಲಿಂಗ್ನಲ್ಲಿ ಹೋಲ್ಡರ್ಗೆ ಕ್ಯಾಚ್ ನೀಡಿದರೆ, ಜಯವರ್ಧನೆ ಡ್ವೈನ್ ಸ್ಮಿತ್ ಬೌಲಿಂಗ್ನಲ್ಲಿ ಕೆಮರ ರೋಚ್ಗೆ ಕ್ಯಾಚ್ ನೀಡಿದರು. ನಂತರ ಬಂದ ದಿನೇಶ್ ಚಾಂಡಿಮಲ್ (2) ಸಹ ಕೆಮರ ರೋಚ್ ಬೌಲಿಂಗ್ನಲ್ಲಿ ಬೌಲ್ಡ್ ಆಗುವ ಮೂಲಕ ಪೆವಿಲಿಯನ್ಗೆ ಹೆಜ್ಜೆ ಹಾಕಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

