ಟಿಟಿ: ಅಂಕಿತಾ, ಮೌಮಾಗೆ ಸೋಲು
ಬೂಸಾನ್ (ಕೊರಿಯಾ): ಒಲಿಂಪಿಯನ್ ಅಂಕಿತಾ ದಾಸ್, ರಾಷ್ಟ್ರೀಯ ಚಾಂಪಿಯನ್ ಕೆ, ಶ್ಯಾಮಿನಿ ಹಾಗೂ ಮೌಮಾ ದಾಸ್ ಅವರು ಕೊರಿಯಾದಲ್ಲಿ ನಡೆಯತ್ತಿರುವ ಏಷ್ಯನ್ ಟಿಟಿ ಚಾಂಪಿಯನ್‌ಷಿಪ್‌ನ ಮೂರನೇ ಸುತ್ತಿನಲ್ಲಿ ಸೋಲನುಭವಿಸಿದ್ದಾರೆ. ಇದರೊಂದಿಗೆ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.
ಅಂಕಿತಾ ಪ್ರೀ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಚೀನಾದ ಚೆನ್ ಮೆಂಗ್ ವಿರುದ್ಧ 0-4 ಅಂತರದಿಂದ ಸೋಲನುಭವಿಸಿದ್ದಾರೆ. ಶ್ಯಾಮಿನಿ ಅವರು ವಿಶ್ವ ನಂಬರ್ 1 ಆಟಗಾರ್ತಿ ಚೀನಾದ ದಿಂಗ್ ನಿಂಗ್ ವಿರುದ್ಧ 7-11, 3-11, 10-12, 5-11 ಸೆಟ್‌ಗಳಿಂದ ಸೋಲನುಭವಿಸಿದರು. ಇನ್ನು ಮೌಮಾ ದಾಸ್ ಅವರು ಜಪಾನ್‌ನ ಕಾಸುಮಿ ಇಶಿಕಾವಾ ವಿರುದ್ಧ (9) 4-11, 11-8, 2-11, 7-11, 7-11 ಸೆಟ್‌ಗಳಿಂದ ಸೋಲನುಭವಿಸಿದರು. ಇನ್ನು ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಅಚಂತಾ ಶರತ್ ಕಮಲ್ ಮತ್ತು ಸುನಿಲ್ ಶೆಟ್ಟಿ ಅವರು ಅಂತಿಮ 16ರ ಘಟ್ಟದ ಪಂದ್ಯದಲ್ಲಿ ಹಾಂಕಾಂಗ್‌ನ ಚೆಂಗ್ ಯೂಕ್ ಮತ್ತು ಲಿಯುಂಗ್ ಚು ಯಾನ್ ಜೋಡಿ ವಿರುದ್ಧ 4-11, 11-6, 11-9, 8-11, 8-11 ಪರಾಭವ ಹೊಂದಿತು.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತ ಶರತ ಕಮಲ್, ಹರ್ಮೀತ್ ದೇಸಾಯಿ, ಶೆಟ್ಟಿ ಹಾಗೂ ಅಂತೋನಿ ಅಮಲ್‌ರಾಜ್ ಶನಿವಾರ ತಮ್ಮ ಹೋರಾಟ ನಡೆಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

