ಅಕ್ಕುಂಜೆ ಅವಕಾಶ?
ಪುಣೆ: ಇತ್ತೀಚೆಗಷ್ಟೇ ನಿಷೇಧ ಮುಗಿಸಿರುವ ರಾಜ್ಯದ ಅಥ್ಲೀಟ್ ಅಶ್ವಿನ್ ಅಕ್ಕುಂಜೆ ಅವರನ್ನು ಪುಣೆಯಲ್ಲಿ ನಡೆಯುತ್ತಿರುವ ಏಷ್ಯನ್ ಚಾಂಪಿಯನ್ಷಿಪ್ನ 4್ಢ400 ಮೀಟರ್ ಭಾರತ ರಿಲೇ ತಂಡದಲ್ಲಿ ಸೇರಿಸಲು ಭಾರತೀಯ ಅಥ್ಲೆಟಿಕ್ಸ್ ಫೆಡರೇಷನ್ (ಎಎಫ್ಐ) ಚಿಂತನೆ ನಡೆಸಿದಿಯಂತೆ. ಆದರೆ, ಇದು ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಫೆಡರೇಷನ್ (ಐಎಎಎಫ್) ನಿಯಮ ಉಲ್ಲಂಘನೆಯಾಗುವ ಬಗ್ಗೆ ಚಾಂಪಿಯನ್ಷಿಪ್ನ ತಾಂತ್ರಿಕ ಸಮಿತಿ ಎಚ್ಚರಿಕೆ ನೀಡಿದೆ ಎನ್ನಲಾಗಿದೆ.
ಎರಡು ವರ್ಷಗಳ ನಿಷೇಧ ಮುಕ್ತಾಯಗೊಳಿಸಿರುವ ಅಕ್ಕುಂಜೆ ಅವರನ್ನು ಭಾರತ ತಂಡದಲ್ಲಿ ಸೇರಿಸಿಕೊಳ್ಳುವ ಬಗ್ಗೆ ಚರ್ಚೆನಡೆಯುತ್ತಿದೆ. ಅಲ್ಲದೆ ಇದರಿಂದ ಭಾರತ 4್ಢ400 ಮೀಟರ್ನಲ್ಲಿ ಭಾರತ ಚಿನ್ನ ಗೆಲ್ಲುವ ಭರವಸೆ ಹೆಚ್ಚಿಸಿದೆ.
ಆದರೆ, ಅಕ್ಕುಂಚೆ ಅವರನ್ನು ತಂಡದಲ್ಲಿ ಸೇರಿಸುವ ಕುರಿತು ಎಎಫ್ಐ ಉನ್ನತ ಅಧಿಕಾರಿಗಳು ಗುರುವಾರ ನಿರಾಕರಿಸಿದ್ದಾರೆ.
2011ರಲ್ಲಿ ನಿಷೇಧಕ್ಕೊಳಗಾಗಿದ್ದ ಅಕ್ಕುಂಜೆ ಮತ್ತು ಇತರ ಐವರು ಅಥ್ಲೀಟ್ಗಳು ಕಳೆದ ಎರಡು ವರ್ಷಗಳಿಂದ ಪಟಿಯಾಲದಲ್ಲಿನ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ಅಥ್ಲೀಟ್ಗಳನ್ನು ತಂಡದಲ್ಲಿ ಸೇರಿಸಲು ಸಾಧ್ಯವಿಲ್ಲ. ಹಾಗೊಂದು ವೇಳೆ ಸೇರಿಸಿದರೆ, ಅದು ಅಂತಾರಾಷ್ಟ್ರೀಯ ಮತ್ತು ಏಷ್ಯನ್ ಸ್ಪರ್ಧೆಗಳ ನಿಯಮ ಉಲ್ಲಂಘನೆ ಮಾಡಿದಂತಾಗುತ್ತದೆ. ಅಥ್ಲೀಟ್ಗಳನ್ನು ಪಟ್ಟಿ ಕಳುಹಿಸಲು ಜೂನ್ 20 ಅಂತಿಮ ದಿನವಾಗಿತ್ತು ಎಂದು ಚಾಂಪಿಯನ್ಷಿಪ್ನ ತಾಂತ್ರಿಕ ಸಮಿತಿಯ ಸದಸ್ಯ ಜಪಾನ್ನ ಯೂಕಿಯೋ ಸೆಕಿ ಅವರು ಹೇಳಿದ್ದಾರೆ. 'ಅಥ್ಲೀಟ್ಗಳ ಪಟ್ಟಿ ಕಳುಹಿಸುವ ಗಡುವು ಮುಕ್ತಾಯವಾದ ನಂತರ ಭಾರತ ಸೇರಿದಂತೆ ಯಾವುದೇ ದೇಶಕ್ಕೆ ಹೆಚ್ಚುವರು ಅಥ್ಲೀಟ್ಗಳನ್ನು ಈಗ ಪಟ್ಟಿಯಲ್ಲಿ ಸೇರಿಸಲು ಬರುವುದಿಲ್ಲ. ಒಂದು ವೇಳೆ ಸೇರಿಸುವುದಾದರೆ ಅದು ಐಎಎಎಫ್ ಮತ್ತು ಎಎಎ ಸ್ಪರ್ಧೆಗಳ ನಿಯಮವನ್ನು ಉಲ್ಲಂಘಿಸಿದಂತಾಗುತ್ತದೆ' ಎಂದು ಯೂಕಿಯೋ ಹೇಳಿದರು.
'ಚಾಂಪಿಯನ್ಷಿಪ್ಗೂ ಮುನ್ನ ನಡೆದ ಎಲ್ಲ ದೇಶಗಳ ತಾಂತ್ರಿ ನಿಯೋಗದ ಸಭೆಯಲ್ಲಿ, ಯಾವುದೇ ಹೆಚ್ಚುವರಿ ಅಥ್ಲೀಟ್ಗಳನ್ನು ತಂಡದಲ್ಲಿ ಸೇರಿಸುವುದಿಲ್ಲ ಎಂದು ತೀರ್ಮಾನಿಸಲಾಗಿದೆ' ಎಂದು ಸಹ ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

