12ನೇ ವಯಸ್ಸಿಗೆ ಹುಡುಗಿಯರು ಹುಡುಗರಾಗುವ ನಿಗೂಢ ಊರು; ಇಡೀ ಜಗತ್ತನ್ನೇ ಬೆರಗುಗೊಳಿಸಿದ ಅಪರೂಪದ ರಹಸ್ಯ ಇಲ್ಲಿದೆ
ಹುಟ್ಟುತ್ತಾ ಹೆಣ್ಣು ಮಗುವಿನಂತೆ ಕಾಣುವ ಮಗು, ಪ್ರಾಯಕ್ಕೆ ಬಂದಾಗ ಇದ್ದಕ್ಕಿದ್ದಂತೆ ಗಂಡಾಗಿ ಬದಲಾದರೆ ಹೇಗಿರಬಹುದು? ಕೇಳಲು ಇದು ಯಾವುದೋ ಕಾಲ್ಪನಿಕ ಕಥೆಯಂತೆ ಕಂಡರೂ, ಜಗತ್ತಿನ ಒಂದು ಮೂಲೆಯಲ್ಲಿ ಇದು ನಿಜವಾಗಿ ನಡೆಯುತ್ತಿದೆ. ಆ ಕುರಿತ ವರದಿ ಇಲ್ಲಿದೆ:

The Mystery of Guevedoces: ಸಾಮಾನ್ಯವಾಗಿ, ಗಂಡೋ ಅಥವಾ ಹೆಣ್ಣೋ ಎಂದು ಹುಟ್ಟಿದ ತಕ್ಷಣವೇ ಗೊತ್ತಾಗುತ್ತೆ. ಆದರೆ, ಭೂಮಿಯ ಮೇಲೊಂದು ವಿಚಿತ್ರ ಹಳ್ಳಿ ಇದೆ. ಅಲ್ಲಿ, ಮಕ್ಕಳು ಹುಟ್ಟಿದ 12 ವರ್ಷವಾದರೂ ಅವರು ಗಂಡೋ ಅಥವಾ ಹೆಣ್ಣೋ ಎಂದು ಕನ್ಫರ್ಮ್ ಇರಲ್ಲ! ಯಾಕಂದ್ರೆ, ಆ ಹಳ್ಳಿಯ ಮಕ್ಕಳು ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳು, 12 ವರ್ಷಕ್ಕೆ ಅಂದರೆ ಹದಿಹರೆಯಕ್ಕೆ ಬರುತ್ತಿದ್ದಂತೆ ಗಂಡು ಮಕ್ಕಳಾಗಿ ಬದಲಾಗುತ್ತಾರೆ ಎನ್ನಲಾಗಿದೆ. ವೈದ್ಯಕೀಯ ಲೋಕವನ್ನೇ ಬೆರಗುಗೊಳಿಸಿರುವ ಈ ವಿಚಿತ್ರ ವಿದ್ಯಮಾನದ ಸಂಪೂರ್ಣ ವಿವರ ಇಲ್ಲಿದೆ:
ಇದು ಯಾವುದೇ ಕಟ್ಟುಕಥೆಯಲ್ಲ, ಅಕ್ಷರಶಃ ಸತ್ಯ! ಕೆರಿಬಿಯನ್ ಸಮುದ್ರದಲ್ಲಿರುವ ಡೊಮಿನಿಕನ್ ರಿಪಬ್ಲಿಕ್ ದೇಶದ 'ಸಲೀನಾಸ್' ಎಂಬ ಹಳ್ಳಿಯಲ್ಲಿ ಹೆಣ್ಣು ಮಕ್ಕಳಾಗಿ ಹುಟ್ಟುವ ಮಕ್ಕಳು, ಹದಿಹರೆಯಕ್ಕೆ (12 ವರ್ಷಕ್ಕೆ) ಬರುತ್ತಿದ್ದಂತೆ ಗಂಡು ಮಕ್ಕಳಾಗಿ ಬದಲಾಗುತ್ತಾರೆ.
ಏನಿದು ವಿಚಿತ್ರ ವಿದ್ಯಮಾನ?
ಈ ಹಳ್ಳಿಯಲ್ಲಿ ಹುಟ್ಟುವ ಕೆಲವು ಮಕ್ಕಳು ಜನಿಸಿದಾಗ ಹೆಣ್ಣು ಮಕ್ಕಳಂತೆಯೇ ಇರುತ್ತಾರೆ. ಪೋಷಕರು ಅವರಿಗೆ ಹೆಣ್ಣು ಮಕ್ಕಳ ಹೆಸರನ್ನೇ ಇಟ್ಟು, ಲಂಗ-ದಾವಣಿ ತೊಡಿಸಿ ಹುಡುಗಿಯರಂತೆಯೇ ಬೆಳೆಸುತ್ತಾರೆ. ಆದರೆ ಅವರಿಗೆ 12 ವರ್ಷ ತುಂಬುತ್ತಿದ್ದಂತೆ ಅವರ ದೇಹದಲ್ಲಿ ಪುರುಷ ಹಾರ್ಮೋನ್‌ಗಳು ಬಿಡುಗಡೆಯಾಗಿ, ಗಂಡು ಜನನಾಂಗಗಳು ಬೆಳೆಯಲು ಆರಂಭಿಸುತ್ತವೆ. ಧ್ವನಿ ಗಂಭೀರವಾಗುತ್ತದೆ ಮತ್ತು ದೇಹದಲ್ಲಿ ಗಂಡು ಮಕ್ಕಳ ಲಕ್ಷಣಗಳು ಮೂಡುತ್ತವೆ. ಸ್ಥಳೀಯವಾಗಿ ಇಂತಹ ಮಕ್ಕಳನ್ನು ಗೆವೆಡೋಸಸ್ ಎಂದು ಕರೆಯಲಾಗುತ್ತದೆ. ಸ್ಪ್ಯಾನಿಷ್ ಭಾಷೆಯಲ್ಲಿ ಇದರ ಅರ್ಥ "12ನೇ ವಯಸ್ಸಿಗೆ ಪುರುಷತ್ವ ಪಡೆಯುವವರು" ಎಂದಾಗಿದೆ. ಅದರಲ್ಲೂ, ಇಲ್ಲಿ ಪ್ರತಿ 90 ಮಕ್ಕಳಲ್ಲಿ ಒಂದು ಮಗುವಿಗೆ ಈ ರೀತಿ ಆಗುತ್ತದೆ.

ಭಾರತದ ನಿಗೂಢ ದ್ವೀಪ; ಇಲ್ಲಿಗೆ ಹೋದವರು ಸಾಯೋದು ಪಕ್ಕಾ! 60,000 ವರ್ಷಗಳಿಂದ ಒಂಟಿಯಾಗಿರುವ ದ್ವೀಪದ ಭೀಕರ ರಹಸ್ಯಗಳು
ಇದಕ್ಕೆ ವೈಜ್ಞಾನಿಕ ಕಾರಣವೇನು?
1970ರ ದಶಕದಲ್ಲಿ ಕಾರ್ನೆಲ್ ವಿಶ್ವವಿದ್ಯಾಲಯದ ಹಾರ್ಮೋನ್ ತಜ್ಞರಾದ ಡಾ. ಜೂಲಿಯನ್ ಇಂಪೆರಾಟೊ ಅವರು ಈ ಹಳ್ಳಿಗೆ ಭೇಟಿ ನೀಡಿ ಸಂಶೋಧನೆ ನಡೆಸಿದಾಗ ಇದರ ಅಸಲಿ ರಹಸ್ಯ ಬಯಲಾಯಿತು. ಅದುವೇ, ಇದು ಯಾವುದೇ ಪವಾಡವಲ್ಲ, ಇದೊಂದು ಅಪರೂಪದ ಜೀನ್ ದೋಷ ಅಥವಾ ತಳೀಯ ಅಸ್ವಸ್ಥತೆ. ಅಂದರೆ, ಈ ಮಕ್ಕಳು ಗಂಡು ಕ್ರೋಮೋಸೋಮ್ (XY) ಹೊಂದಿದ್ದರೂ, ತಾಯಿಯ ಗರ್ಭದಲ್ಲಿರುವಾಗ ಇವರಿಗೆ 5-ಆಲ್ಫಾ-ರಿಡಕ್ಟೇಸ್ ಎಂಬ ಎಂಜೈಮ್ ಕೊರತೆ ಇರುತ್ತದೆ. ಈ ಎಂಜೈಮ್ ಕೊರತೆಯಿಂದಾಗಿ, ಗರ್ಭದಲ್ಲಿರುವಾಗ ಗಂಡು ಹಾರ್ಮೋನ್ ಆದ ಡಿಹೈಡ್ರೋ-ಟೆಸ್ಟೋಸ್ಟೆರಾನ್ ಉತ್ಪತ್ತಿಯಾಗುವುದಿಲ್ಲ. ಇದರಿಂದಾಗಿ ಗಂಡು ಮಗುವಾಗಿದ್ದರೂ ಜನಿಸಿದಾಗ ಹೆಣ್ಣು ಮಗುವಿನಂತೆ ಕಾಣಿಸುತ್ತದೆ. ಆದರೆ ಮಗುವಿಗೆ 12 ವರ್ಷ ತುಂಬಿದಾಗ, ದೇಹದಲ್ಲಿ ಮತ್ತೊಮ್ಮೆ ಭಾರಿ ಪ್ರಮಾಣದಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಬಿಡುಗಡೆಯಾಗುತ್ತದೆ. ಈ ಹಂತದಲ್ಲಿ ಗರ್ಭದಲ್ಲಿ ಆಗಬೇಕಿದ್ದ ದೈಹಿಕ ಬದಲಾವಣೆಗಳು 12 ವರ್ಷದ ನಂತರ ನಡೆದು, ಆ ಹುಡುಗಿ ಸಂಪೂರ್ಣ ಹುಡುಗನಾಗಿ ಬದಲಾಗುತ್ತಾಳೆ.
ವೈದ್ಯಕೀಯ ಲೋಕಕ್ಕೆ ಭಾರಿ ಕೊಡುಗೆ!
ಮುಂದುವರೆದು, ಈ ಹಳ್ಳಿಯ ಜನರ ಮೇಲಿನ ಸಂಶೋಧನೆಯಿಂದಾಗಿ ವೈದ್ಯಕೀಯ ಲೋಕಕ್ಕೆ ಒಂದು ದೊಡ್ಡ ಯಶಸ್ಸು ಸಿಕ್ಕಿತು. ಅದುವೇ, ಪುರುಷರಲ್ಲಿ ಕಂಡುಬರುವ ಪ್ರೊಸ್ಟೇಟ್ ಗ್ರಂಥಿ ಹಿಗ್ಗುವಿಕೆ ಮತ್ತು ಪುರುಷರ ತಲೆ ಲೇಡಿ ಬೋಳು ಕಾಯಿಲೆಗಳಿಗೆ ಔಷಧಿ ಕಂಡುಹಿಡಿಯಲು ಈ ಸಂಶೋಧನೆ ದಾರಿಯಾಯಿತು. ಇಂದು ಜಗತ್ತಿನಾದ್ಯಂತ ಲಕ್ಷಾಂತರ ಪುರುಷರು ಬಳಸುವ ಫಿನಾಸ್ಟರೈಡ್ ಎಂಬ ಔಷಧಿಯನ್ನು ಇದೇ ಸಂಶೋಧನೆಯ ಆಧಾರದ ಮೇಲೆ ತಯಾರಿಸಲಾಗಿದೆ.
ಏತನ್ಮಧ್ಯೆ, ಈ ಹಳ್ಳಿಯ ಹುಡುಗಿಯರು ದೊಡ್ಡವರಾದ ಮೇಲೆ ಗಂಡಸರಾಗಿ ಮದುವೆಯಾಗಿ ಸಾಮಾನ್ಯ ಪುರುಷರಂತೆ ಜೀವನ ನಡೆಸುತ್ತಾರೆ. ಅದರಲ್ಲೂ, ಈ ಹಳ್ಳಿ ತಲೆಮಾರುಗಳಿಂದ ಇತರೆ ಜಗತ್ತಿನಿಂದ ದೂರವೇ ಉಳಿದಿರುವುದರಿಂದ ಈ ವಂಶವಾಹಿ ದೋಷ ಇಲ್ಲಿ ಮುಂದುವರಿದುಕೊಂಡು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



