ವಿಶೇಷ

ನೋಟಿನ ಮೇಲಿರೋ ನಂಬರ್ ಮಾತ್ರ ಅಲ್ಲ, ನೋಟಿನ ಹಿಂಭಾಗದಲ್ಲಿರೋ ಸ್ಮಾರಕ ನೋಡಿದ್ದೀರಾ? ಇಲ್ಲಿದೆ ಭಾರತದ ಭವ್ಯ ಪರಂಪರೆಯ ಕುರಿತ ಮಾಹಿತಿ

ನಿಮ್ಮ ಬಳಿ ಇರುವ ನೋಟಿನ ಹಿಂಭಾಗದಲ್ಲಿದೆ ಭಾರತದ ಭವ್ಯ ಪರಂಪರೆ ಐತಿಹಾಸಿಕ ಮಹತ್ವ ಗೊತ್ತಾ? ಯಾವ ನೋಟಿನಲ್ಲಿ ಯಾವ ಸ್ಮಾರಕವಿದೆ? ಇಲ್ಲಿದೆ ನೋಡಿ ಭಾರತದ ನೋಟುಗಳ ಮೇಲಿರುವ ಪ್ರಸಿದ್ಧ ಸ್ಮಾರಕಗಳ ಕುರಿತ ಅಚ್ಚರಿಯ ಮಾಹಿತಿ:

ನೋಟಿನ ಮೇಲಿರೋ ನಂಬರ್ ಮಾತ್ರ ಅಲ್ಲ, ನೋಟಿನ ಹಿಂಭಾಗದಲ್ಲಿರೋ ಸ್ಮಾರಕ ನೋಡಿದ್ದೀರಾ? ಇಲ್ಲಿದೆ ಭಾರತದ ಭವ್ಯ ಪರಂಪರೆಯ ಕುರಿತ ಮಾಹಿತಿ
Online Desk
Published On :

ನಾವು ಡೈಲಿ ಬಳಕೆ ಮಾಡೋ ಕರೆನ್ಸಿ ನೋಟುಗಳಲ್ಲಿ ಹೆಚ್ಚಾಗಿ ಅದು ಎಷ್ಟು ರೂಪಾಯಿ ನೋಟು ಎಂದು ಗುರುತಿಸಲು ಎಂದು ಗುರುತಿಸಲು ಅದರ ಬಣ್ಣ, ಹಾಗೂ ಅದರ ಮೇಲಿರುವ ನೋಟಿನ ಮೌಲ್ಯ ಮಾತ್ರವೇ ನೋಡುತ್ತೇವೆ; ಆದ್ರೆ, ನಿಮಗೆ ಗೊತ್ತಾ, ಆ ನೋಟುಗಳ ಹಿಂಭಾಗದಲ್ಲಿ ಭಾರತದ ಭವ್ಯ ಇತಿಹಾಸ, ವೈವಿಧ್ಯಮಯ ಸಂಸ್ಕೃತಿ ಮತ್ತು ಕಲಾತ್ಮಕ ಪರಂಪರೆಯನ್ನು ಪ್ರತಿಬಿಂಬಿಸುವ ಪ್ರಸಿದ್ಧ ಸ್ಮಾರಕಗಳ ಚಿತ್ರಗಳನ್ನು ಮುದ್ರಿಸಲಾಗಿದೆ ಎಂದು? ಹೌದು, ಪ್ರತಿ ನೋಟಿನ ಹಿಂಭಾಗವು ಶ್ರೇಷ್ಠ ಇತಿಹಾಸ ಸಾರುವ ಸ್ಮಾರಕವಿದೆ. ಆ ಕುರಿತ ಮಾಹಿತಿ ಇಲ್ಲಿದೆ:

1. ₹10 ನೋಟು – ಕೋನಾರ್ಕ್ ಸೂರ್ಯ ದೇವಾಲಯ (ಪುರಿ, ಒಡಿಶಾ)

₹10 ನೋಟು – ಕೋನಾರ್ಕ್ ಸೂರ್ಯ ದೇವಾಲಯ (ಪುರಿ, ಒಡಿಶಾ)
₹10 ನೋಟು – ಕೋನಾರ್ಕ್ ಸೂರ್ಯ ದೇವಾಲಯ (ಪುರಿ, ಒಡಿಶಾ) — Online Desk

10 ರೂಪಾಯಿ ನೋಟಿನ ಮೇಲೆ ಒಡಿಶಾದ ಪ್ರಸಿದ್ಧ ಕೋನಾರ್ಕ್ ಸೂರ್ಯ ದೇವಾಲಯದ ರಥದ ಚಕ್ರದ (ಕೋನಾರ್ಕ್ ಚಕ್ರ) ಚಿತ್ರವಿದೆ. 13ನೇ ಶತಮಾನದ ಈ ಅದ್ಭುತ ದೇವಾಲಯವನ್ನು ಕಲಿಂಗ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ಇಡೀ ದೇವಾಲಯವನ್ನು 24 ಚಕ್ರಗಳು ಮತ್ತು 7 ಕುದುರೆಗಳಿರುವ ಬೃಹತ್ ಸೂರ್ಯನ ರಥದ ಆಕಾರದಲ್ಲಿ ನಿರ್ಮಿಸಲಾಗಿದೆ. ಜೊತೆಗೆ ಇದು ಯುನೆಸ್ಕೋ (UNESCO) ವಿಶ್ವ ಪರಂಪರೆಯ ತಾಣವಾಗಿದೆ.

2. ₹20 ನೋಟು – ಎಲ್ಲೋರಾ ಗುಹೆಗಳು (ಮಹಾರಾಷ್ಟ್ರ)

₹20 ನೋಟು – ಎಲ್ಲೋರಾ ಗುಹೆಗಳು (ಮಹಾರಾಷ್ಟ್ರ)
₹20 ನೋಟು – ಎಲ್ಲೋರಾ ಗುಹೆಗಳು (ಮಹಾರಾಷ್ಟ್ರ) — Online Desk

10 ರೂಪಾಯಿ ನೋಟಿನ ಮೇಲೆ ಮಹಾರಾಷ್ಟ್ರದ ಔರಂಗಾಬಾದ್ (ಛತ್ರಪತಿ ಸಂಭಾಜಿನಗರ) ಜಿಲ್ಲೆಯಲ್ಲಿರುವ ಪ್ರಸಿದ್ಧ ಎಲ್ಲೋರಾ ಗುಹೆಗಳ ಚಿತ್ರವಿದೆ. ಇದು ಪ್ರಾಚೀನ ಭಾರತದ ಕಲ್ಲಿನಲ್ಲಿ ಕೆತ್ತಿದ ಅತ್ಯಂತ ದೊಡ್ಡ ಗುಹಾ ದೇವಾಲಯಗಳ ಸಂಕೀರ್ಣವಾಗಿದ್ದು, ಇಲ್ಲಿ ಹಿಂದೂ, ಬೌದ್ಧ ಮತ್ತು ಜೈನ ಧರ್ಮಗಳಿಗೆ ಸೇರಿದ 34 ಗುಹೆಗಳಿದ್ದು, ಇಲ್ಲಿನ ಏಕಶಿಲೆಯಲ್ಲಿ ಕೆತ್ತಲಾದ ಕೈಲಾಸನಾಥ ದೇವಾಲಯ ಜಗತ್ಪ್ರಸಿದ್ಧವಾಗಿದೆ.

3. ₹50 ನೋಟು – ಹಂಪಿ ರಥ (ಕರ್ನಾಟಕ )

₹50 ನೋಟು – ಹಂಪಿ ರಥ (ಕರ್ನಾಟಕ )
₹50 ನೋಟು – ಹಂಪಿ ರಥ (ಕರ್ನಾಟಕ ) — Online Desk

50 ರೂಪಾಯಿ ನೋಟಿನಲ್ಲಿ ಕರ್ನಾಟಕದ ಹೆಮ್ಮೆಯ ಹಂಪಿಯ ವಿಜಯ ವಿಠಲ ದೇವಾಲಯದ ಕಲ್ಲಿನ ರಥವನ್ನು ಕಾಣಬಹುದು. ವಿಜಯನಗರ ಸಾಮ್ರಾಜ್ಯದ ಭವ್ಯತೆಯನ್ನು ಜಗತ್ತಿಗೆ ಸಾರುವ ಈ ರಥವು ದ್ರಾವಿಡ ವಾಸ್ತುಶಿಲ್ಪದ ಅತ್ಯುನ್ನತ ಕಲಾಕೃತಿಗೆ ಸಾಕ್ಷಿಯಾಗಿದೆ. ಜೊತೆಗೆ ಇದು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿದೆ.

4. ₹100 ನೋಟು – ರಾಣಿ ಕಿ ವಾವ್ (ಗುಜರಾತ್)

₹100 ನೋಟು – ರಾಣಿ ಕಿ ವಾವ್ (ಗುಜರಾತ್)
₹100 ನೋಟು – ರಾಣಿ ಕಿ ವಾವ್ (ಗುಜರಾತ್) — Online Desk

ಗುಜರಾತ್‌ನ ಪಟಾನ್‌ನಲ್ಲಿರುವ 'ರಾಣಿ ಕಿ ವಾವ್' (ರಾಣಿಯ ಬಾವಿ) ಎಂಬ ಅದ್ಭುತ ಮೆಟ್ಟಿಲು ಬಾವಿಯ ಚಿತ್ರವನ್ನು ಈ ನೋಟಿನ ಮೇಲೆ ಮುದ್ರಿಸಲಾಗಿದೆ. ಇದನ್ನು 11 ನೇ ಶತಮಾನದಲ್ಲಿ ಸೋಲಂಕಿ ವಂಶದ ರಾಣಿ ಉದಯಮತಿ ತನ್ನ ಪತಿಯ ನೆನಪಿಗಾಗಿ ನಿರ್ಮಿಸಿದಳು. ಇನ್ನು ಇದರ ಗೋಡೆಗಳ ಮೇಲೆ ಭಗವಾನ್ ವಿಷ್ಣುವಿನ ದಶಾವತಾರಗಳ ಅದ್ಭುತ ಕೆತ್ತನೆಗಳಿವೆ.

5. ₹200 ನೋಟು – ಸಾಂಚಿ ಸ್ತೂಪ (ಮಧ್ಯಪ್ರದೇಶ)

₹200 ನೋಟು – ಸಾಂಚಿ ಸ್ತೂಪ (ಮಧ್ಯಪ್ರದೇಶ)
₹200 ನೋಟು – ಸಾಂಚಿ ಸ್ತೂಪ (ಮಧ್ಯಪ್ರದೇಶ) — Online Desk

ಮಧ್ಯಪ್ರದೇಶದ ರೇಸನ್ ಜಿಲ್ಲೆಯಲ್ಲಿರುವ ಪ್ರಸಿದ್ಧ ಬೌದ್ಧ ಸ್ಮಾರಕವಾದ ಸಾಂಚಿ ಸ್ತೂಪದ ಚಿತ್ರ ಈ ನೋಟಿನಲ್ಲಿದೆ. ಇದನ್ನು ಮೌರ್ಯ ಸಾಮ್ರಾಜ್ಯದ ಚಕ್ರವರ್ತಿ ಅಶೋಕನ ಆಳ್ವಿಕೆಯಲ್ಲಿ ನಿರ್ಮಿಸಲಾಗಿದ್ದು, ಭಾರತದ ಅತ್ಯಂತ ಹಳೆಯ ಕಲ್ಲಿನ ನಿರ್ಮಿತಿಗಳಲ್ಲಿ ಒಂದಾಗಿದೆ.

6. ₹500 ನೋಟು – ಕೆಂಪು ಕೋಟೆ (ದೆಹಲಿ)

₹500 ನೋಟು – ಕೆಂಪು ಕೋಟೆ (ದೆಹಲಿ)
₹500 ನೋಟು – ಕೆಂಪು ಕೋಟೆ (ದೆಹಲಿ) — Online Desk

ದೇಶದ ರಾಜಧಾನಿ ದೆಹಲಿಯಲ್ಲಿರುವ ಐತಿಹಾಸಿಕ ಕೆಂಪು ಕೋಟೆಯ (ರೆಡ್ ಫೋರ್ಟ್) ಚಿತ್ರವನ್ನು ಈ ನೋಟಿನ ಹಿಂಭಾಗದಲ್ಲಿ ನೀಡಲಾಗಿದೆ. ಮೊಘಲ್ ಚಕ್ರವರ್ತಿ ಷಾ ಜಹಾನ್ ಕೆಂಪು ಮರಳುಗಲ್ಲಿನಿಂದ ನಿರ್ಮಿಸಿದ ಈ ಕೋಟೆಯು ಭಾರತದ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವದ ಪ್ರತೀಕವಾಗಿದೆ. ಇನ್ನು ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಮಂತ್ರಿಯವರು ಇಲ್ಲಿಂದಲೇ ರಾಷ್ಟ್ರಧ್ವಜವನ್ನು ಹಾರಿಸುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.