ಸಂಕ್ರಾಂತಿ: ಮಕರ ಜ್ಯೋತಿಗೂ ಮಕರ ಬೆಳಕಿಗೂ ಇರುವ ವ್ಯತ್ಯಾಸವೇನು?.. ತಿಳಿಯಿರಿ 'ಶಬರಿ ಮಲೆ' ರಹಸ್ಯ!
ಇಂದು ಸಂಕ್ರಾಂತಿ ಹಬ್ಬದ ನಿಮಿತ್ತ ಎಲ್ಲರ ಕಣ್ಣೂ ಕೇರಳದ ಶಬರಿಮಲೆಯತ್ತ ನೆಟ್ಟಿದೆ.. ಅಲ್ಲಿ ಕೋಟ್ಯಂತರ ಭಕ್ತರು ವರ್ಷಕ್ಕೊಮ್ಮೆ 'ಮಕರ ಜ್ಯೋತಿ' ರೂಪದಲ್ಲಿ ದರ್ಶನ ನೀಡುವ ಅಯ್ಯಪ್ಪ ಸ್ವಾಮಿಗಾಗಿ ಕಾತುರದಿಂದ ಕಾಯುತ್ತಿದ್ದಾರೆ.

ಇಂದು ಸಂಕ್ರಾಂತಿ ಹಬ್ಬದ ನಿಮಿತ್ತ ಎಲ್ಲರ ಕಣ್ಣೂ ಕೇರಳದ ಶಬರಿಮಲೆಯತ್ತ ನೆಟ್ಟಿದೆ.. ಅಲ್ಲಿ ಕೋಟ್ಯಂತರ ಭಕ್ತರು ವರ್ಷಕ್ಕೊಮ್ಮೆ 'ಮಕರ ಜ್ಯೋತಿ' ರೂಪದಲ್ಲಿ ದರ್ಶನ ನೀಡುವ ಅಯ್ಯಪ್ಪ ಸ್ವಾಮಿಗಾಗಿ ಕಾತುರದಿಂದ ಕಾಯುತ್ತಿದ್ದಾರೆ.
ಸಾವಿರಾರು ವರ್ಷಗಳಿಂದಲೂ ಶಬರಿಮಲೆಯಲ್ಲಿ ನಡೆದುಕೊಂಡು ಬಂದಿದ್ದ ಸಂಪ್ರದಾಯ ಈಚೆಗೆ ಅಂದರೆ 2011ರಲ್ಲಿ ಮಕರ ಸಂಕ್ರಾಂತಿಯ ದಿನ ಕಾಲ್ತುಳಿತ ಸಂಭವಿಸಿ ನೂರಾರು ಅಯ್ಯಪ್ಪ ಭಕ್ತರು ಸಾವಿಗೀಡಾದಾಗ ವಿವಾದಕ್ಕೆ ಗ್ರಾಸವಾಗಿತ್ತು.
ಈ ಘಟನೆ ಹಿನ್ನಲೆಯಲ್ಲಿ ಮಕರ ಜ್ಯೋತಿಯ ನಿಜಾಂಶವನ್ನು ಬಯಲು ಮಾಡಲು ಕೆಲವರು ಕೋರ್ಟ್ ಮೆಟ್ಟಿಲೇರಿದ್ದರು. ಮಕರ ಜ್ಯೋತಿ ದೈವ ಸೃಷ್ಟಿ ಅಲ್ಲ. ಅದು ಮಾನವ ನಿರ್ಮಿತ. ಈ ಬಗ್ಗೆ ತನಿಖೆ ಮಾಡಿ ಅಂತ ಮನವಿ ಮಾಡಿದ್ರು. ಆಗ ಕೋರ್ಟ್ ಈ ಬಗ್ಗೆ ಟ್ರಾವಂಕೂರ್ ದೇವಸ್ವಂ ಟ್ರಸ್ಟ್ ಗೆ ಈ ಬಗ್ಗೆ ವಿವರಣೆ ಕೇಳಿ ನೋಟಿಸ್ ನೀಡಿತ್ತು.
ಟ್ರಾವಂಕೂರ್ ದೇವಸ್ವಂ ಬೋರ್ಡ್ ನಿಂದ ಶಾಕಿಂಗ್ ಮಾಹಿತಿ
ಕೋರ್ಟ್ ನೋಟಿಸ್ ಹಿನ್ನಲೆಯಲ್ಲಿ 'ಮಕರ ಜ್ಯೋತಿ.. ಮಕರ ವಿಳಕ್ಕು' ಕುರಿತು ಮಾಹಿತಿ ನೀಡಿದ್ದ ಟ್ರಾವಂಕೂರ್ ದೇವಸ್ವಂ ಬೋರ್ಡ್ ಶಬರಿಮಲೆ ವಿರುದ್ಧ ಅರ್ಜಿ ಹಾಕಿದವರಿಗೆ ಮುಟ್ಟಿನೋಡಿಕೊಳ್ಳುವಂತೆ ಉತ್ತರ ನೀಡಿತ್ತು.
ಮಕರ ಸಂಕ್ರಮಣದ ದಿನ ಸಂಜೆ ಕತ್ತಲಾಗುತ್ತಿದ್ದಂತೆಯೇ ಶಬರಿಮಲೆಯ ಬೆಟ್ಟದ ಕಾಡಲ್ಲಿ ಕಾಣುವ ಜ್ವಾಲೆ ಮಕರ ಜ್ಯೋತಿ ಅಲ್ಲ. ಅದು ಮಕರವಿಳಕ್ಕು. ಇಲ್ಲಿ ವಿಳಕ್ಕು ಎಂದರೆ ಬೆಳಕು ಎಂದು ಅರ್ಥ… ಅಲ್ಲಿ ಅಂದರೆ ಮಕರ ವಿಳಕ್ಕು ಕಾಣುವ ಪೊನ್ನಾಂಬಲಮೇಡು ಬೆಟ್ಟದಲ್ಲಿ ಪುರಾತನ ಕಾಲದಿಂದಲೂ ಮಲಾ ಆರ್ಯರು ಅನ್ನೋ ಬುಡಕಟ್ಟು ಜನ ಮಕರ ಸಂಕ್ರಮಣದ ದಿನ ಬೆಂಕಿಯನ್ನ ಹಾಕಿ ದೀಪೋತ್ಸವ ಆಚರಿಸ್ತಾ ಬಂದಿದ್ರು. ಈಗಲೂ ಅದನ್ನೇ ಮುಂದುವರಿಸಿಕೊಂಡು ಬರಲಾಗಿದೆ.. ಹೀಗಾಗಿ ಬೆಟ್ಟದಲ್ಲಿ ಕಾಣುವುದು ಮಕರ ವಿಳಕ್ಕು ಎಂದು ಹೇಳಿತು...
ಹಾಗಾದರೆ ಮಕರ ಜ್ಯೋತಿ ಏನು? ಮಕರ ಜ್ಯೋತಿ ಸುಳ್ಳೇ?
ಈ ಪ್ರಶ್ನೆಗೂ ಕೋರ್ಟ್ ಗೆ ಉತ್ತರ ನೀಡಿದ್ದ ಟ್ರಾವಂಕೂರ್ ದೇವಸ್ವಂ ಬೋರ್ಡ್ ನಿಜವಾದ ಮಕರ ಜ್ಯೋತಿ ಯಾವುದು ಎಂದು ತನ್ನ ವಿವರಣೆಯಲ್ಲಿ ಸ್ಪಷ್ಟಪಡಿಸಿದೆ. ಶಬರಿಮಲೆಯಲ್ಲಿ ಮಕರ ಸಂಕ್ರಾಂತಿಯ ದಿನ ರಾತ್ರಿ ಬೆಟ್ಟದ ಮೇಲೆ ಆಕಾಶದಲ್ಲಿ ಪ್ರಕಾಶಮಾನವಾದ ಮಕರ ನಕ್ಷತ್ರ ಕಾಣುತ್ತೆ. ಅದೇ ಮಕರ ಜ್ಯೋತಿ. ತಲತಲಾಂತರದಿಂದಲೂ ಇದೇ ನಂಬಿಕೆಯಿತ್ತು. ಆದರೆ ಮಾಧ್ಯಮಗಳ ಪ್ರಚಾರದಿಂದಾಗಿ ಪೊನ್ನಾಂಬಲ ಮೇಡುವಿನಲ್ಲಿ ಬುಡಕಟ್ಟು ಜನರು ಹಾಕುವ ಬೆಂಕಿಯನ್ನು ಮಕರ ಜ್ಯೋತಿ ಎಂದು ಬಿಂಬಿಸಲಾಗಿದೆ ಎಂದು ಬೋರ್ಡ್ ಸ್ಪಷ್ಟನೆ ನೀಡಿತು.
ಇದನ್ನೂ ಓದಿ: ಶಬರಿಮಲೆ ದೇವಸ್ಥಾನದೊಳಗೆ ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳ ಫೋಟೋಗಳನ್ನು ಭಕ್ತರು ತರಬಾರದು: ಕೇರಳ ಹೈಕೋರ್ಟ್
ಬೆಟ್ಟದಲ್ಲಿ ಕಾಣುವ ಬೆಳಕು ಮಕರ ಜ್ಯೋತಿಯಲ್ಲ.. ಅದು ಮಕರ ಬೆಳಕು... ಅಥವಾ ಮಕರ ವಿಳಕ್ಕು... ಆಗಸದಲ್ಲಿ ಕಾಣುವ ನಕ್ಷತ್ರವೇ ಮಕರ ಜ್ಯೋತಿ... ಇಂದು ಸಂಜೆ ಶಬರಿಮಲೆಯಲ್ಲಿ ಕಾಣುವ ಮಕರ ಜ್ಯೋತಿ ಅಂದರೆ ನಕ್ಷತ್ರವನ್ನು ನೋಡಿ ಭಕ್ತಿಯಿಂದ ನಮಿಸಿ, ಪೊನ್ನಾಂಬಲಮೇಡುವಿನಲ್ಲಿ ಕಾಣುವ ಮಕರ ವಿಳಕ್ಕನ್ನು ನೋಡಿ ಅಯ್ಯಪ್ಪ ಭಕ್ತಿಯನ್ನು ಸಂಭ್ರಮಿಸಿ...
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


