ವಿಶೇಷ

ಭಕ್ತರಿಗೆ ದ್ರಾಕ್ಷಿ, ವೈನ್ ಪ್ರಸಾದ: ಜಪಾನ್ ನಲ್ಲಿದೆ ವಿಶಿಷ್ಟ ದೇವಾಲಯ

ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಸಿಹಿ ತಿನಿಸು ಸೇರಿದಂತೆ ವಿವಿಧ ರೀತಿಯ ಪ್ರಸಾದಗಳನ್ನು ನೀಡುವುದು ಸಾಮಾನ್ಯ, ಆದರೆ, ಜಪಾನ್ ನಲ್ಲಿರುವ ಈ ವಿಶಿಷ್ಟ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ದ್ರಾಕ್ಷಿ, ವೈನ್'ನ್ನು ಪ್ರಸಾದವಾಗಿ ನೀಡಲಾಗುತ್ತದೆ.

ಭಕ್ತರಿಗೆ ದ್ರಾಕ್ಷಿ, ವೈನ್ ಪ್ರಸಾದ: ಜಪಾನ್ ನಲ್ಲಿದೆ ವಿಶಿಷ್ಟ ದೇವಾಲಯ
ಬೌದ್ಧ ಸನ್ಯಾಸಿ ಟೆಸ್ಶು ಇನೌ ದೇವಾಲಯದ ಪ್ರವೇಶದ್ವಾರದ ಹೊರಗೆ ನಿಂತಿರುವುದು.
Published On :

ಕೋಶು: ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಸಿಹಿ ತಿನಿಸು ಸೇರಿದಂತೆ ವಿವಿಧ ರೀತಿಯ ಪ್ರಸಾದಗಳನ್ನು ನೀಡುವುದು ಸಾಮಾನ್ಯ, ಆದರೆ, ಜಪಾನ್ ನಲ್ಲಿರುವ ಈ ವಿಶಿಷ್ಟ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ದ್ರಾಕ್ಷಿ, ವೈನ್'ನ್ನು ಪ್ರಸಾದವಾಗಿ ನೀಡಲಾಗುತ್ತದೆ. 

ಜಪಾನ್ ನಲ್ಲಿ ಈ ದೇವಾಲಯವಿದ್ದು, ಗುಡ್ಡದ ಮೇಲಿರುವ ಬುದ್ಧನ ದೇವಾಲಯಕ್ಕೆ ದ್ರಾಕ್ಷಿ ಹಾಗೂ ವೈನ್ ಬಾಟಲಿಗಳನ್ನು ಪ್ರಸಾದವಾಗಿ ಭಕ್ತರಿಗೆ ನೀಡಲಾಗುತ್ತದೆ. ದೇವಾಲಯದ ಬಳಿ ದ್ರಾಕ್ಷಿ ತೋಟವಿದ್ದು, ಈ ದ್ರಾಕ್ಷಿ ತೋಟಕ್ಕೆ ದೇವಾಲಯದ ಮುಖ್ಯ ಸನ್ಯಾಸಿಯೇ ಗೌರವಾಧ್ಯಕ್ಷರೂ ಆಗಿದ್ದಾರೆ. 

ಈ ದೇವಾಲಯದ ಅಧಿಕೃತ ಹೆಸರು ಡೈಜೆಂಜಿ ಆಗಿದ್ದು, ಇಲ್ಲಿ ಹೇರಳವಾಗಿ ದ್ರಾಕ್ಷಿ ಬೆಳೆಯುವುದರಿಂದ ದೇವಾಲಯಕ್ಕೆ ಇಲ್ಲಿನ ಜನರು ದ್ರಾಕ್ಷಿ ದೇವಾಲಯ ಎಂದು ಕರೆಯುತ್ತಾರೆ. 

ಈ ದೇವಾಲಯವು ಟೊಕಿಯೊದಿಂದ ಪಶ್ಚಿಮಕ್ಕೆ 100 ಕಿಲೋಮೀಟರ್ (60 ಮೈಲುಗಳು) ಯಮನಾಶಿ ಪ್ರದೇಶದಲ್ಲಿದೆ, ಇದು ಫ್ಯೂಜಿ ಪರ್ವತದ ನೆಲೆಯಾಗಿ ಪ್ರಸಿದ್ಧವಾಗಿದೆ ಮತ್ತು ಜಪಾನ್‌ನ ಅತೀ ಹೆಚ್ಚು ವೈನ್ ತಯಾರಿಕೆ ಮಾಡುವ ತಾಣವೂ ಆಗಿದೆ.

ಬೇರೆ ದೇವಾಲಯಗಳಲ್ಲಿ ಅವರಿಗಿಷ್ಟವಾದ ಪ್ರಸಾದಗಳನ್ನು ನೀಡುತ್ತಾರೆ. ಆದರೆ, ನಾವಿಲ್ಲಿ ವೈನ್ ಹಾಗೂ ದ್ರಾಕ್ಷಿಯನ್ನು ಪ್ರಸಾದವಾಗಿ ನೀಡುತ್ತೇವೆ. ಇದೇ ಇಲ್ಲಿನ ವೈಶಿಷ್ಟ್ಯತೆ ಎಂದು ದೇಗುಲದ ಮುಖ್ಯ ಸನ್ಯಾಸಿ ಟೆಸ್ಶು ಇನೌ (75) ಹೇಳಿದ್ದಾರೆ. 

ಕ್ರಿ.ಶ 718 ರಲ್ಲಿ, ಪ್ರಸಿದ್ಧ ಜಪಾನಿನ ಬೌದ್ಧ ಸನ್ಯಾಸಿ ಮತ್ತು ಗ್ಯೋಕಿ ಎಂಬ ಪ್ರಯಾಣಿಕನು ಈ ಸ್ಥಳದಲ್ಲಿ ಮಲಗಿದ್ದಾಗ ಕನಸಿನಲ್ಲಿ ಬುದ್ಧನನ್ನು ಕಂಡಿದ್ದನು. ಹೀಗಾಗಿ ಈ ಸ್ಥಳದಲ್ಲಿ ದೇವಾಲಯ ನಿರ್ಮಾಣವಾಗಿದೆ. ಕನಸಿನಲ್ಲಿ ಬುದ್ಧನನ್ನು ಕಂಡಿದ್ದ ಗ್ಯೋಕಿ ದ್ರಾಕ್ಷಿತೋಟ ನಿರ್ಮಾಣ ಸಂಸ್ಕೃತಿಯನ್ನು ಪ್ರೇರೇಪಿಸಿದ್ದ. ಬಳಿಕ ಇಲ್ಲಿನ ಯಮನಾಶಿ ನಿವಾಸಿಗಳಿಗೆ ಔಷಧೀಯ ಉದ್ದೇಶಗಳಿಗೆ ದ್ರಾಕ್ಷಾರಸವನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಕಲಿಸಿದ್ದ ಎಂದು ಟೆಸ್ಶು ಅವರು ದೇವಾಲಯದ ಪೌರಾಣಿಕ ಮೂಲವನ್ನು ವಿವರಿಸಿದ್ದಾರೆ. 

ಯಮನಾಶಿಯಲ್ಲಿರುವ ಮಣ್ಣು ಅತ್ಯಂತ ಫಲವತ್ತತೆಯನ್ನು ಹೊಂದಿದ್ದು, ದ್ರಾಕ್ಷಿ ಬೆಳೆಯಲು ಅತ್ಯುತ್ತಮ ಪ್ರದೇಶವಾಗಿದೆ. ಹೀಗಾಗಿ ಇಲ್ಲಿ ಹೇರಳವಾಗಿ ದ್ರಾಕ್ಷಿ ಬೆಳೆಯಲಾಗುತ್ತದೆ. 

ಈ ದೇವಾಲಯದಲ್ಲಿ ದ್ರಾಕ್ಷಿ ಹಾಗೂ ವೈನ್ ನ್ನು ದೇವರಿಗೆ ಅರ್ಪಣೆ ಮಾಡುವ ಜೊತೆಗೆ ಭಕ್ತರಿಗೂ ಅದನ್ನು ಪ್ರಸಾದವಾಗಿ ನೀಡಲಾಗುತ್ತದೆ. ಚಿನ್ನದ ಎಲೆಗಳಿಂದ ಅಲಂಕರಿಸಲ್ಪಟ್ಟ ಮೆರುಗೆಣ್ಣೆ ಶಿಲ್ಪವು ದೇವಾಲಯಕ್ಕೆ ಸೇರಿದ ಅಮೂಲ್ಯ ಕಲಾಕೃತಿಯಾಗಿದೆ ಮತ್ತು ಪ್ರತಿ ಐದು ವರ್ಷಗಳಿಗೊಮ್ಮೆ ಸಾರ್ವಜನಿಕವಾಗಿ ಪ್ರದರ್ಶಿಸಲಾಗುತ್ತದೆ. ದೇವಾಲಯದ ಹೆಸರು ಹೊಂದಿರುವ ವೈನ್ ಬಾಟಲಿಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ. 

ದ್ರಾಕ್ಷಿ ಬೆಳೆಯುವುದು, ವೈನ್ ತಯಾರಿಸುವುದು ಉತ್ತಮ ಕೆಲಸ ಎಂದು ಟೆಸ್ಶು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.