ಏಕಕಾಲಕ್ಕೆ 18 ತಬಲಾ ವಾದನ: ಗಿನ್ನೆಸ್ ರೆಕಾರ್ಡ್ ನಿರೀಕ್ಷೆಯಲ್ಲಿ ಆಂಧ್ರಪ್ರದೇಶ ಸಂಗೀತಗಾರ
ಏಕಕಾಲಕ್ಕೆ 18 ತಬಲಾಗಳನ್ನು ನುಡಿಸುವ ವಿಡಿಯೋವನ್ನು ಅವರು ಗಿನ್ನೆಸ್ ರೆಕಾರ್ಡ್ಸ್ ಸಂಸ್ಥೆಗೆ ಕಳಿಸಿಕೊಟ್ಟಿದ್ದು ಫಲಿತಾಂಶಕ್ಕೆ ಕಾದಿದ್ದಾರೆ.

ಕಡಪ: ಈ ಆಧುನಿಕ ಯುಗದಲ್ಲೂ ಕುಟುಂಬದ ತಲೆಮಾರುಗಳ ಪರಂಪರೆಯನ್ನು ಉಳಿಸಿಕೊಂಡು, ಪೋಷಿಸಿಕೊಂಡು ಬರುತ್ತಿರುವ ಹಲವಾರು ಮಂದಿ ನಮ್ಮ ನಡುವೆ ಇದ್ದಾರೆ. ಅವರಲ್ಲೊಬ್ಬರು ಅಂಧ್ರಪ್ರದೇಶದ ಕೊಂಡಪಲ್ಲಿ ಚಿದಂಬರ ನಟರಾಜ.
ನಟರಾಜ ಅವರ ಜೀವನ ನಿರ್ವಹಣೆ ಸಂಗೀತದ ಮೇಲೆ ಅವಲಂಬಿತವಾಗಿದೆ. ಕಡಪ ಜಿಲ್ಲೆಯ ಮಿದುಕೂರ್ ಊರಿನವರಾದ ಅವರು ಓರ್ವ ಪ್ರತಿಭಾನ್ವಿತ ಮೃದಂಗ ಕಲಾವಿದ. ಹಲವು ರಾಜ್ಯಮಟ್ಟದ ಪ್ರಶಸ್ತಿಗಳಿಗೆ ಭಾಜನರಾದ ನಟರಾಜ ಅವರು ಇದೀಗ ನೂತನ ಸಾಧನೆ ಮಾಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.
ಅವರು ಏಕಕಾಲಕ್ಕೆ 18 ತಬಲಾಗಳನ್ನು ನುಡಿಸುವ ವಿಡಿಯೋವನ್ನು ಗಿನ್ನೆಸ್ ರೆಕಾರ್ಡ್ಸ್ ಸಂಸ್ಥೆಗೆ ಕಳಿಸಿಕೊಡಲಾಗಿದ್ದು ಫಲಿತಾಂಶಕ್ಕೆ ಕಾದಿದ್ದಾರೆ. ಅವರು ಅಂದುಕೊಂಡಂತೆಯೇ ನಡೆದರೆ ಏಕಕಾಲಕ್ಕೆ ಅತಿ ಹೆಚ್ಚು ತಬಲಾ ನುಡಿಸಿದ ದಾಖಲೆಗೆ ನಟರಾಜ ಅವರು ಪಾತ್ರರಾಗಲಿದ್ದಾರೆ.
ನಟರಾಜ ಅವರ ಕುಟುಂಬ ಸಂಗೀತ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಅವರ ತಾತ ಕೊಂಡಪಲ್ಲಿ ಭಿಕ್ಷಾಪತಿ ಹಾರ್ಮೋನಿಯಂ ವಾದಕರಾಗಿದ್ದರು. ನತರಾಜ ಅವರ ತಂದೆ ವೀರಭದ್ರಯ್ಯ ಸಂಗೀತದ ಜೊತೆಗೆ ಹರಿಕಥೆ, ಬುರ್ರಕಥೆಯಲ್ಲೂ ಪ್ರವೀಣರಾಗಿದ್ದರು. ಎಲ್ಲಕ್ಕಿಂತ ಅಚ್ಚರಿಯೆಂದರೆ ಅವರು ಯಕ್ಷಗಾನವನ್ನೂ ಕಲಿತಿದ್ದರು ಎನ್ನುವುದು.
ಸಂಗೀತ ಪರಂಪರೆಯನ್ನು ಹೊಂದಿದ ಕುಟುಂಬದಿಂದ ಬಂದ ನಟರಾಜ ಅವರೂ ತಮ್ಮ ತಂದೆಯಂತೆ ಸಾಧನೆ ಮಾಡಬೇಕು ಎನ್ನುವ ಅಭಿಲಾಷೆ ಹೊಂದಿದ್ದಾರೆ.
Related Article
ಎಲೆಯ ಮೇಲೆ ಕಲೆ: ಉಡುಪಿಯ ಕಲಾವಿದ ಮಹೇಶ್ ಮರ್ನೆಯ ವಿಶಿಷ್ಟ ಪ್ರತಿಭೆ
ಕರ್ನಾಟಕಕ್ಕೆ ಶೀಘ್ರವೇ ರಾಜ್ಯ ಕಪ್ಪೆ; ಶರಾವತಿಯಲ್ಲಿ ಕಪ್ಪೆಗಳ ಹಬ್ಬ ಆಯೋಜನೆ!
12ನೇ ವಯಸ್ಸಿಗೇ ಮದುವೆಯಾಗಿ ಶಾಲೆ ಬಿಟ್ಟಿದ್ದ ಕೇರಳ ಮಹಿಳೆ ಈಗ ಹೈಸ್ಕೂಲ್ ಶಿಕ್ಷಕಿ
ಜಗತ್ತಿನ ಅತ್ಯಂತ ವಿಷಕಾರಿ ಮೀನು: ಕುಟುಕಿದರೆ ಪ್ರಜ್ಞೆ ತಪ್ಪುವುದು ಪಕ್ಕಾ, ನಿರಂತರ ಬಣ್ಣ ಬದಲಾವಣೆ!
ಶರಣಾಗತ ನಕ್ಸಲ್ ಮಹಿಳೆಯರಿಂದ ಫಿನೈಲ್ ತಯಾರಕ ಘಟಕ ಸ್ಥಾಪನೆ; ಮಹಾರಾಷ್ಟ್ರ ಪೊಲೀಸರ ಸಹಕಾರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


