ವಿಶೇಷ

ಜೊತೆಗಾರನಿಲ್ಲದೇ ತಾಯಿಯಾದ ಡೆನಿಯಲ್ ಬಟಲ್!

ಪ್ರತಿಯೊಬ್ಬ ಮಹಿಳೆಯು ತಾಯ್ತನ ಬಯಸೋಕೆ ಇಷ್ಟಪಟ್ತಾಳೆ. ಸಹಜ ತಾಯ್ತನ ಅನುಭವಿಸಲು ನೈಸರ್ಗಿಕವಾಗಿ ಮಗುವನ್ನು ಪಡೆಯೋಕೆ ಜೊತೆಗಾರ (ಗಂಡ)ಬೇಕು ಅಂತ ಬಯಸ್ತಾಳೆ.ಆದರೆ ಇಲ್ಲೊಬ್ಬ ಮಹಿಳೆ ಇದೆಲ್ಲಕ್ಕಿಂತ ಭಿನ್ನವಾಗಿ ಮಗುವನ್ನು ಹೆತ್ತಿದ್ದಾಳೆ.

ಜೊತೆಗಾರನಿಲ್ಲದೇ ತಾಯಿಯಾದ ಡೆನಿಯಲ್ ಬಟಲ್!
ಡೆನಿಯಲ್ ಬಟಲ್
Published On :

ಲಂಡನ್ : ಪ್ರತಿಯೊಬ್ಬ ಮಹಿಳೆಯು ತಾಯ್ತನ ಬಯಸೋಕೆ ಇಷ್ಟಪಟ್ತಾಳೆ. ಸಹಜ ತಾಯ್ತನ ಅನುಭವಿಸಲು ನೈಸರ್ಗಿಕವಾಗಿ ಮಗುವನ್ನು ಪಡೆಯೋಕೆ ಜೊತೆಗಾರ (ಗಂಡ)ಬೇಕು ಅಂತ ಬಯಸ್ತಾಳೆ.ಆದರೆ ಇಲ್ಲೊಬ್ಬ ಮಹಿಳೆ ಇದೆಲ್ಲಕ್ಕಿಂತ ಭಿನ್ನವಾಗಿ ಮಗುವನ್ನು ಹೆತ್ತಿದ್ದಾಳೆ. 

ಅದೂ ಯಾವುದೇ ಜೊತೆಯಿಲ್ಲದೆಯೇ ಪರ್ಫೆಕ್ಟ್ ಜೊತೆಗಾರನ ಹುಡುಕಾಟದಲ್ಲಿದ್ದ ಇಂಗ್ಲೆಂಡ್ ನ ಡೆನಿಯಲ್ ಬಟಲ್ ಅನ್ನೋ 30 ವರ್ಷದ ಮಹಿಳೆ ಪರ್ಫೆಕ್ಟ್ ಜೊತೆಗಾರ ಸಿಗದೇ ಇದ್ದಿದ್ದಕ್ಕೆ ಕೊನೆಗೂ ಒಂಟಿಯಾಗಿಯೇ ಮಗುವನ್ನು ಹಡೆದಿದ್ದಾಳೆ.

ಮಿರರ್ ವರದಿ ಪ್ರಕಾರ ಡೆನಿಯಲ್ ಬಟಲ್ ಗೆ  ಮಗುವನ್ನು ಹೆರಬೇಕು, ಅದರ ಪಾಲನೆ ಮಾಡಬೇಕು ಅನ್ನೋ ಆಸೆಯಿತ್ತಾದರೂ ಅವಳು ಒಳ್ಳೆ ಜೊತೆಗಾರ ಸಿಗದ ಕಾರಣ ನೈಸರ್ಗಿಕವಾಗಿ ಮಗುವನ್ನ ಪಡೆಯೋಕೆ ಸಫಲಳಾಗಲಿಲ್ಲ. ಇದರಿಂದ ಬೇಸತ್ತ ಆಕೆ ಒಂದು ನಿರ್ಧಾರಕ್ಕೆ ಬರ್ತಾಳೆ. ಬಟಲ್ ಐವಿಎಫ್ ಸಹಾಯದಿಂದ ಸಿಂಗಲ್ ಮದರ್ ಆಗೋಕೆ ನಿರ್ಧರಿಸ್ತಾಳೆ.ಅದಕ್ಕಾಗಿ ಬಟಲ್ ವೀರ್ಯಾಣು ದಾನಿಯನ್ನು (ಸ್ಪರ್ಮ್ ಡೋನರ್) ಹುಡುಕೋಕೆ ಆರಂಭಿಸುತ್ತಾಳೆ.

ಸ್ಪರ್ಮ್ ಬ್ಯಾಂಕ್ ನಲ್ಲಿ ತನಗೆ ಬೇಕಾದ ಅನಿಸೋ ಅರ್ಜೆಂಟೇನಾ ಮೂಲದ ಸ್ಪರ್ಮ್  ಆಯ್ಕೆ ಮಾಡಿ ಆತನಿಗೆ ಒಂದು ಲಕ್ಷ ರೂ. ನೀಡಿ ಸ್ಪರ್ಮ್ ಪಡೆದು ತಾಯಿಯಾಗಿದ್ದಾಳೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.