ಭೂಮಿಯಡಿ ಸಿಲುಕಿದ ಗಣಿಕಾರ್ಮಿಕರು: 22 ಗಂಟೆಗಳ ಕಾಲ ಮಣ್ಣು ಅಗೆದು ಸ್ವಪ್ರಯತ್ನದಿಂದ ಸಮಾಧಿಯಿಂದ ಮೇಲೆದ್ದು ಬಂದರು
ಕಾರ್ಮಿಕರು ಗಣಿಯ ಯಾವ ಭಾಗದಲ್ಲಿದ್ದಾರೆ ಎನ್ನುವುದು ತಿಳಿಯದ ಕಾರಣ ರಕ್ಷಣಾ ತಂಡದ ಕಾರ್ಯಾಚರಣೆ ಫಲ ನೀಡಿರಲಿಲ್ಲ.

ರಾಂಚಿ: ಬೊಕೆರೊದಲ್ಲಿನ ಕಲ್ಲಿದ್ದಲು ಗಣಿಯಲ್ಲಿ ಕುಸಿತ ಸಂಭವಿಸಿ ನಾಲ್ವರು ಕಾರ್ಮಿಕರು ಭೂಮಿಯಡಿ ಸಿಲುಕಿಕೊಂಡಿದ್ದರು. ಅವರು ಸತ್ತರೆಂದೇ ಎಲ್ಲರೂ ತಿಳಿದಿದ್ದರು. ಆದರೆ 22 ಗಂಟೆಗಳ ನಂತರ ಭೂಮಿಯಡಿ ಸಿಲುಕಿಕೊಂಡಿದ್ದ ನಾಲ್ವರೂ ಸುರಕ್ಷಿತವಾಗಿ ಹೊರಬಂದಿದ್ದಾರೆ.
ಇದನ್ನೂ ಓದಿ: ಚತ್ತೀಸ್ ಗಢ ಬುಡಕಟ್ಟು ಜನರಿಂದ ಪರಿಸರಸ್ನೇಹಿ ಬಿದಿರಿನ ಸೈಕಲ್ 'ಬ್ಯಾಂಬೂಕಾ' ಉತ್ಪಾದನೆ: ಬೆಲೆ ಬಲು ದುಬಾರಿ!
ಅಚ್ಚರಿ ಮೂಡಿಸುವ ಸಂಗತಿ ಎಂದರೆ ಅವರು ಜೀವಂತವಾಗಿ ಭೂಮಿಯಡಿಯಿಂದ ಮೇಲೆದ್ದು ಬರಲು ಕಾರಣವಾಗಿದ್ದು ರಕ್ಷಣಾ ತಂಡದ ಕಾರ್ಯಾಚರಣೆಯಿಂದಲ್ಲ. ಸ್ವಪ್ರಯತ್ನದಿಂದ.
ಭೂಮಿಯಡಿ ಸಿಲುಕಿದ್ದ ನಾಲ್ವರೂ ಸುಮ್ಮನೆ ಕೈಕಟ್ಟಿ ಕೂರಲಿಲ್ಲ. ತಮ್ಮ ಬಳಿಯಿದ್ದ ಉಪಕರಣ ಬಳಸಿ ಒಳಗಿನಿಂದಲೇ ಮಣ್ಣನ್ನು ಅಗಿಯುತ್ತಾ ಬಂದರು.ಅದರ ಫಲವಾಗಿ ಅವರಿಂದು ಜೀವಂತವಾಗಿ ಮರಳಿದ್ದಾರೆ.
ಇದಕ್ಕೂ ಮುನ್ನ ಅವರ ರಕ್ಲ್ಷಣೆಗೆ ಎನ್ ಡಿ ಆರ್ ಎಫ್ ತಂಡ ಧಾವಿಸಿತ್ತು. ಆದರೆ ಕಾರ್ಮಿಕರು ಗಣಿಯ ಯಾವ ಭಾಗದಲ್ಲಿದ್ದಾರೆ ಎನ್ನುವುದು ತಿಳಿಯದ ಕಾರಣ ರಕ್ಷಣಾ ತಂಡದ ಕಾರ್ಯಾಚರಣೆ ಫಲ ನೀಡಿರಲಿಲ್ಲ.
ಭೂಮಿಯಡಿ ಸಿಲುಕಿಕೊಂಡಿದ್ದ ನಾಲ್ವರೂ ಅಕ್ರಮ ಗಣಿಗಾರಿಕೆ ಮಾಡಲು ಗಣಿಯೊಳಗೆ ಇಳಿದಿದ್ದರು ಎಂದು ತಿಳಿದುಬಂದಿದೆ. ಕೆಲಸ ಇಲ್ಲದ ಕಾರನ ತಾವು ಈ ಕೆಲಸಕ್ಕೆ ಇಳಿದಿದ್ದಾಗಿ ನಾಲ್ವರಲ್ಲೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.
Related Article
ಏಕಕಾಲಕ್ಕೆ 18 ತಬಲಾ ವಾದನ: ಗಿನ್ನೆಸ್ ರೆಕಾರ್ಡ್ ನಿರೀಕ್ಷೆಯಲ್ಲಿ ಆಂಧ್ರಪ್ರದೇಶ ಸಂಗೀತಗಾರ
ಎಲೆಯ ಮೇಲೆ ಕಲೆ: ಉಡುಪಿಯ ಕಲಾವಿದ ಮಹೇಶ್ ಮರ್ನೆ ವಿಶಿಷ್ಟ ಪ್ರತಿಭೆ
ಹಿಂಗಾರು ಬೆಳೆ ಇಳುವರಿ ಹೆಚ್ಚಿಸಲು ಕಡಿಮೆ ಖರ್ಚಿನ ಕೃಷಿ ತಾಂತ್ರಿಕತೆ ಸಲಹೆಗಳು
ಕರ್ನಾಟಕಕ್ಕೆ ಶೀಘ್ರವೇ ರಾಜ್ಯ ಕಪ್ಪೆ; ಶರಾವತಿಯಲ್ಲಿ ಕಪ್ಪೆಗಳ ಹಬ್ಬ ಆಯೋಜನೆ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


