ವಿಶೇಷ

ವಿಷ ನಿರೋಧಕ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಅನುದಾನಿತ ಪ್ರಯೋಗಾಲಯದಿಂದ ಉರಗ ಉದ್ಯಾನ ಸ್ಥಾಪನೆ

ಈ ಉರಗ ಉದ್ಯಾನ 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದು, 23 ಪ್ರಬೇದಗಳ 500ಕ್ಕೂ ಹೆಚ್ಚು ಹಾವುಗಳನ್ನು ಹೊಂದಿದೆ.

ವಿಷ ನಿರೋಧಕ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಅನುದಾನಿತ ಪ್ರಯೋಗಾಲಯದಿಂದ ಉರಗ ಉದ್ಯಾನ ಸ್ಥಾಪನೆ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಹಾವಿನ ವಿಷ ಕುರಿತಾದ ಅಧ್ಯಯನ ಮತ್ತು ವಿಷ ನಿರೋಧಕ (Anti Venom) ಸಂಶೋಧನೆ ಸಲುವಾಗಿ ಸರ್ಕಾರಿ ಅನುದಾನಿತ ಪ್ರಯೋಗಾಲಯವೊಂದು ಉರಗ ಉದ್ಯಾನ (serpentarium/ Reptile park) ಸ್ಥಾಪನೆಗೆ ಮುಂದಾಗಿದೆ. 

ರಾಜ್ಯಸರ್ಕಾರದ ಐಟಿ ಬಿಟಿ ಇಲಾಖೆಯಿಂದ ಅನುದಾನಿತ ಎವಲ್ಯೂಷನರಿ ವೆನೋಮಿಕ್ಸ್ ಲ್ಯಾಬ್ ಈ ಕಾರ್ಯಕ್ಕೆ ಮುಂದಾಗಿದೆ. ಉರಗ ಉದ್ಯಾನದಲ್ಲಿ ಮುಖ್ಯವಾಗಿ ಹಾವುಗಳನ್ನು ಕೇಂದ್ರೀಕರಿಸಲಾಗಿದೆ. 

ಈ ಉರಗ ಉದ್ಯಾನ 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದು, 23 ಪ್ರಬೇದಗಳ 500ಕ್ಕೂ ಹೆಚ್ಚು ಹಾವುಗಳನ್ನು ಹೊಂದಿದೆ. ಹಾವುಗಳನ್ನು ಹೊರತುಪಡಿಸಿ, ಚೇಳು ಮತ್ತು ಜೇಡಗಳೂ ಈ ಉರಗ ಉದ್ಯಾನದಲ್ಲಿವೆ.

ಸದ್ಯ ಲಭ್ಯವಿರುವ ವಿಷ ನಿರೋಧಕ ಔಷಧಗಳು ಪ್ರಭಾವಶಾಲಿಯಾಗಿಲ್ಲದ ಕಾರಣ ಈ ಹೊಸ ಸಂಶೋಧನೆ ಮಹತ್ತರ ಪಾತ್ರ ವಹಿಸಿದೆ ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ. 

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.