ಜಾನುವಾರುಗಳಿಗೆ ಚಾಕಲೇಟ್ ಕೇಕ್: ವಿನೂತನ ಪ್ರಯೋಗದಿಂದ ಹಾಲಿನ ಇಳುವರಿ ಹೆಚ್ಚಳದ ಭರವಸೆ
ಬಡ ರೈತರಿಗೆ ನೆರವಾಗುವ ಸಲುವಾಗಿ ಜಾನುವಾರುಗಳಿಗೆ ಅಗತ್ಯವಿರುವ ಪೋಷಕಾಂಶಗಳು ಹಾಗೂ ನಾಲಗೆಗೆ ರುಚಿಸುವ ಪದಾರ್ಥಗಳನ್ನು ಸೇರಿಸಿ ಸಂಶೋಧಕರು ಚಾಕಲೇಟ್ ಕೇಕ್ ತಯಾರಿಸಿದ್ದಾರೆ. ಒಂದೊಂದು ಗಟ್ಟಿಯೂ 2.5- 3 ಕೆ.ಜಿ ತೂಕವಿದೆ.

ಭೋಪಾಲ್: ಮಕ್ಕಳು ಆಸೆ ಪಟ್ಟು ಚಾಕಲೇಟ್ ಗಾಗಿ ತಿನ್ನುವುದು ಸಹಜ. ಹದಿಹರೆಯದ ಕಾಲೇಜು ತರುಣಿಯರೂ ಉಡುಗೊರೆಯಾಗಿ ಚಾಕಲೇಟನ್ನು ಅಪೇಕ್ಷಿಸುವುದೂ ಸಹಜವೇ. ಮುಂದಿನ ದಿನಗಳಲ್ಲಿ ಮನುಷ್ಯರು ಮಾತ್ರವಲ್ಲದೆ ಜಾನುವಾರುಗಳೂ ಚಾಕಲೇಟಿಗಾಗಿ ಬೇಡಿಕೆ ಇಡುವ ಕಾಲವೂ ಸನ್ನಿಹಿತವಾಗಿದೆ. ಅದಕ್ಕೆ ಮುನ್ನುಡಿ ಬರೆದಿದೆ ಮಧ್ಯಪ್ರದೇಶದ, ಜಬಲ್ಪುರದಲ್ಲಿರುವ ನಾನಾಜಿ ಪಶುವೈದ್ಯಕೀಯ ಕೇಂದ್ರದ (NDVSU) ಸಂಶೋಧಕರು. ಅವರು ಜಾನುವಾರುಗಳಿಗಾಗಿ ಚಾಕಲೇಟ್ ಕೇಕ್(ಗಟ್ಟಿ) ಗಳನ್ನು ತಯಾರಿಸುವಲ್ಲಿ ಸಫಲರಾಗಿದ್ದಾರೆ.
ಹೈನುಗಾರಿಕೆಯಲ್ಲಿ ತೊಡಗಿರುವ ಬಡ ರೈತರಿಗೆ ಈ ಚಾಕಲೇಟ್ ಗಟ್ಟಿಗಳು ವರದಾನವಾಗಬಲ್ಲುದು ಎಂದು ಸಂಶೋಧಕರು ತಿಳಿಸಿದ್ದಾರೆ. ನಿಜ ಹೇಳಬೇಕೆಂದರೆ ಈ ಜಾನುವಾರುಗಳ ಚಾಕಲೇಟ್ ಅಭಿವೃದ್ಧಿಯ ಉದ್ದೇಶವೇ ಅದು.
ಹಾಲಿನ ಇಳುವರಿ ಹೆಚ್ಚಿಸಬೇಕೆಂದರೆ ಜಾನುವಾರುಗಳಿಗೆ ಚೆನ್ನಾಗಿ ಮೇವು ಹಾಕಬೇಕು. ಬಡ ರೈತರು ಮೇವು ಒದಗಿಸಲು ಸಾಧ್ಯವಾಗದೆ ಜಾನುವಾರುಗಳಿಂದ ಹಾಲಿನ ಇಳುವರಿ ಪಡೆಯುವಲ್ಲಿ ಹಿಂದೆ ಬೀಳುತ್ತಿರುವುದು ಸಂಶೋಧಕರ ಗಮನಕ್ಕೆ ಬಂದಿತ್ತು.
ಇದನ್ನೂ ಓದಿ: ವಿಧಾನ ಪರಿಷತ್ ನಲ್ಲಿ ಗೋಹತ್ಯೆ ನಿಷೇಧ ವಿಧೇಯಕ ಅಂಗೀಕಾರ
ಬಡ ರೈತರಿಗೆ ನೆರವಾಗುವ ಸಲುವಾಗಿ ಜಾನುವಾರುಗಳಿಗೆ ಅಗತ್ಯವಿರುವ ಪೋಷಕಾಂಶಗಳು ಹಾಗೂ ನಾಲಗೆಗೆ ರುಚಿಸುವ ಪದಾರ್ಥಗಳನ್ನು ಸೇರಿಸಿ ಸಂಶೋಧಕರು ಚಾಕಲೇಟ್ ಕೇಕ್ ತಯಾರಿಸಿದ್ದಾರೆ. ಒಂದೊಂದು ಗಟ್ಟಿಯೂ 2.5- 3 ಕೆ.ಜಿ ತೂಕವಿದೆ.
ಈ ಉತ್ಪನ್ನ ಐ ಎಸ್ ಒ ಮತ್ತು ಬಿಐಎಸ್ ಸಂಸ್ಥೆಗಳಿಂದ ಪ್ರಮಾಣೀಕೃತಗೊಂಡಿದೆ. ಈ ಚಾಕಲೇಟ್ ಕೇಕ್ ಗೆ ನರ್ಮದಾ ವಿಟಮಿನ್ ಲಿಕ್ ಎಂದು ನಾಮಕರಣ ಮಾಡಲಾಗಿದೆ. ಈ ಚಾಕಲೇಟು ಸೇವನೆಯಿಂದ ಜಾನುವಾರುಗಳು ಶೇ.15- 20 ಪ್ರತಿಶತ ಹೆಚ್ಚಿನ ಪ್ರಮಾಣದ ಹಾಲನ್ನು ನೀಡುವ ಭರವಸೆಯನ್ನು ಸಂಶೋಧಕರು ನೀಡಿದ್ದಾರೆ. ಈ ಉತ್ಪನ್ನ ಕೇವಲ ಜಾನುವಾರುಗಳಿಗೆ ಮಾತ್ರ ಸೀಮಿತವಾಗಿಲ್ಲ. ಎಮ್ಮೆ, ಆಡು, ಕುರಿ, ಹಂದಿಗಳ ಪೋಷಣೆಗೂ ನೆರವಾಗುವುದರಿಂದ ಅವುಗಳಿಗೂ ನೀಡಬಹುದಾಗಿದೆ.
Related Article
ಡಿಜೆ ಹಳ್ಳಿ: ಹತ್ಯೆಗಾಗಿ ಕರೆತರಲಾಗಿದ್ದ ಆರು ಜಾನುವಾರುಗಳ ರಕ್ಷಣೆ
ಜಾನುವಾರುಗಳಲ್ಲಿ ಕಾಲುಬಾಯಿ ರೋಗ ಹೆಚ್ಚಳ: ಕೊರೋನಾ ನಡುವೆ ರಾಜ್ಯದಲ್ಲಿ ಮತ್ತೊಂದು ತಲೆನೋವು!
ಜಾನುವಾರು ಸಂರಕ್ಷಣೆಯ ಹೆಸರಿನಲ್ಲಿ ಸಂವಿಧಾನ ಬಾಹಿರ ಸುಗ್ರಿವಾಜ್ಞೆ: ಎಸ್ಡಿಪಿಐ
ಕೃಷಿ ಚಟುವಟಿಕೆಗಳಿಗೆ ಜಾನುವಾರು ಸಾಗಿಸುವವರ ಮೇಲೆ ಕ್ರಮವಿಲ್ಲ; ಹೈಕೋರ್ಟ್'ಗೆ ಸರ್ಕಾರ
ಬ್ರಿಟನ್ ನಲ್ಲಿ ಜಾನುವಾರುಗಳಿಗೆ ಹುಚ್ಚು ಕಾಯಿಲೆ ಹರಡುವ ಭೀತಿ: ಮೊದಲ ಬಲಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


