ಪಿತ್ತಕೋಶ ಕ್ಯಾನ್ಸರ್ ಗೆ ಮನೆಮದ್ದು ಗಣಿಕೆ ಸೊಪ್ಪು: ಸಂಶೋಧನೆಗೆ ಅಮೆರಿಕದ ಎಫ್ ಡಿಎ ಅನುಮೋದನೆ
ಇಂಗ್ಲಿಷ್ ನಲ್ಲಿ ಬ್ಲಾಕ್ ನೈಟ್ ಶೇಡ್ ಅಥವಾ ಸೋಲಾನಮ್ ನಿಗ್ರಮ್ ಎಂದು ಕರೆಯಲಾಗುವ ಮಾನತಕ್ಕಲ್ಲಿ ತನ್ನ ಔಷಧೀಯ ಮೌಲ್ಯದಿಂದ ಮನೆಮದ್ದು ಎಂದು ಹೆಸರುವಾಸಿಯಾಗಿದೆ.ಇದನ್ನು ಕನ್ನಡದಲ್ಲಿ ಕಾಕೆ ಹಣ್ಣು, ಗಣಿಕೆ ಸೊಪ್ಪು ಎಂಬಿತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ.

ತಿರುವನಂತಪುರಂ: ಇಂಗ್ಲಿಷ್ ನಲ್ಲಿ ಬ್ಲಾಕ್ ನೈಟ್ ಶೇಡ್ ಅಥವಾ ಸೋಲಾನಮ್ ನಿಗ್ರಮ್ ಎಂದು ಕರೆಯಲಾಗುವ ಮಾನತಕ್ಕಲ್ಲಿ ತನ್ನ ಔಷಧೀಯ ಮೌಲ್ಯದಿಂದ ಮನೆಮದ್ದು ಎಂದು ಹೆಸರುವಾಸಿಯಾಗಿದೆ.ಇದನ್ನು ಕನ್ನಡದಲ್ಲಿ ಕಾಕೆ ಹಣ್ಣು, ಗಣಿಕೆ ಸೊಪ್ಪು ಎಂಬಿತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ.
ಪಿತ್ತಕೋಶ ಕ್ಯಾನ್ಸರ್ ಚಿಕಿತ್ಸೆಗೆ ಗಣಿಕೆ ಸೊಪ್ಪಿನಿಂದ ಪ್ರತ್ಯೇಕಿಸಲಾದ ಸಂಯುಕ್ತವನ್ನು ಇದೀಗ ಅಮೆರಿಕದ ಪುಡ್ ಅಂಡ್ ಡ್ರಗ್ ಆಡ್ಮಿನಿಸ್ಟ್ರೇಷನ್ ಗಮನಿಸಿದ್ದು, ಇದನ್ನು ಪತ್ತೆ ಹಚ್ಚಿದ ರಾಜೀವ್ ಗಾಂಧಿ ಸೆಂಟರ್ ಆಫ್ ಬಯೋಟೆಕ್ನಾಲಾಜಿಯ ವಿಜ್ಞಾನಿಗಳ ತಂಡಕ್ಕೆ ಧನ್ಯವಾದ ಸಲ್ಲಿಸಿದೆ.
ರಾಜೀವ್ ಗಾಂಧಿ ಸೆಂಟರ್ ಆಫ್ ಬಯೋಟೆಕ್ನಾಲಾಜಿಯ ಹಿರಿಯ ವಿಜ್ಞಾನಿ ಡಾ. ರೂಬಿ ಜಾನ್ ಅಂಟೊ ಮತ್ತು ಆಕೆಯ ವಿದ್ಯಾರ್ಥಿ ಡಾ. ಲಕ್ಷ್ಮಿ ಆರ್ ನಾಥ್, ಗಣಿಕೆ ಸೊಪ್ಪಿನಲ್ಲಿರುವ ಔಷಧ ಅಂಶ ಉಟ್ರೋಸೈಡ್-ಬಿನ್ನು ಕಂಡುಹಿಡಿದಿದ್ದಾರೆ.ಪ್ರಸ್ತುತ ಪಿತ್ತಕೋಶ ಕ್ಯಾನ್ಸರ್ ಗಾಗಿ ಮಾತ್ರ ಈ ಔಷಧ ಬಳಸಲು ಎಫ್ ಡಿಎ ಅನುಮೋದನೆ ನೀಡಿದೆ. ನಾವು ಅಭಿವೃದ್ಧಿಪಡಿಸಿದ ಸಂಯುಕ್ತದಲ್ಲಿ ಒಂದಕ್ಕಿಂತ ಹೆಚ್ಚು ಪರಿಣಾಮಕಾರಿ ಎಂಬುದು ಕಂಡುಬಂದಿದೆ ಎಂದು ಅವರು ತಿಳಿಸಿದ್ದಾರೆ.
ಪಿತ್ತಕೋಶ ಕ್ಯಾನ್ಸರ್ ಸೇರಿದಂತೆ ಪಿತ್ತಕೋಶ ಕಾಯಿಲೆಗಳ ಚಿಕಿತ್ಸೆಯಲ್ಲಿ ಸಂಶೋಧನೆಯು ಪ್ರಮುಖ ಪ್ರಗತಿಯಾಗಿದೆ ಎಂದು ಆರ್ ಜಿ ಸಿಬಿ ನಿರ್ದೇಶಕ ಡಾ. ಚಂದ್ರಬಾಸ್ ನಾರಾಯಣ ಹೇಳಿದ್ದಾರೆ. ಪಿತ್ತಕೋಶ ಕಾಯಿಲೆಯಿಂದ ವಾರ್ಷಿಕವಾಗಿ ಅಂದಾಜು 8 ಲಕ್ಷಕ್ಕಿಂತ ಹೆಚ್ಚು ಜನರು ಸಾವನ್ನಪ್ಪುತ್ತಿದ್ದು, ಪ್ರತಿ ವರ್ಷ 9 ಲಕ್ಷ ಹೊಸ ಪ್ರಕರಣಗಳು ವರದಿಯಾಗುತ್ತಿವೆ ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


