ವಿಶೇಷ

ಹೊಸಪೇಟೆ: ಒಂದೇ ಪಾದದಲ್ಲಿ ಒಂಬತ್ತು ಕಾಲು ಬೆರಳೊಂದಿಗೆ ಜನಿಸಿದ ಮಗು, 'ದೇವರ ವರ' ಎಂದ ಕುಟುಂಬ!

ಇದನ್ನು ಪವಾಡವೆನ್ನಬೇಕು ಅಥವಾ ವೈದ್ಯಕೀಯ ಪರಿಭಾಷೆಯಲ್ಲಿ ಪಾಲಿಡಾಕ್ಟಲಿ (polydactyly) ಎಂದು ಕರೆಯಬೇಕೋ ನೀವು ತೀರ್ಮಾನಿಸಿ! ನವಜಾತ ಶಿಶುವೊಂದು ಹುಟ್ಟುವಾಗಲೇ ಒಂದೇ ಕಾಲಿನಲ್ಲಿ ಒಂಬತ್ತು ಬೆರಳನ್ನು ಹೊಂದಿದೆ. ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಇಂತಹಾ ಒಂದು ವಿಚಿತ್ರ ಗಂಡು ಮಗುವು ಜನಿಸಿದೆ.

ಹೊಸಪೇಟೆ: ಒಂದೇ ಪಾದದಲ್ಲಿ ಒಂಬತ್ತು ಕಾಲು ಬೆರಳೊಂದಿಗೆ ಜನಿಸಿದ ಮಗು, 'ದೇವರ ವರ' ಎಂದ ಕುಟುಂಬ!
ಒಂಬತ್ತು ಕಾಲು ಬೆರಳಿನ ಮಗು(ವಿಶೇಷ ಚಿತ್ರ)
Published On :

ಹೊಸಪೇಟೆ: ಇದನ್ನು ಪವಾಡವೆನ್ನಬೇಕು ಅಥವಾ ವೈದ್ಯಕೀಯ ಪರಿಭಾಷೆಯಲ್ಲಿ ಪಾಲಿಡಾಕ್ಟಲಿ (polydactyly) ಎಂದು ಕರೆಯಬೇಕೋ ನೀವು ತೀರ್ಮಾನಿಸಿ! ನವಜಾತ ಶಿಶುವೊಂದು ಹುಟ್ಟುವಾಗಲೇ ಒಂದೇ ಕಾಲಿನಲ್ಲಿ ಒಂಬತ್ತು  ಬೆರಳನ್ನು ಹೊಂದಿದೆ. ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಇಂತಹಾ ಒಂದು ವಿಚಿತ್ರ ಗಂಡು ಮಗುವು ಜನಿಸಿದೆ.

ಹೆರಿಗೆ ಮಾಡಿಸಿದ್ದ ಡಾ.ಬಾಲಚಂದ್ರನ್, ಇದು ಅಪರೂಪದ ಪ್ರಕರಣ ಮತ್ತು ನವಜಾತ ಶಿಶು ಹಾಗೂ ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಹೇಳಿದರು. "ಪಾಲಿಡಾಕ್ಟಲಿ (polydactyly) ಬಗ್ಗೆ ಕುಟುಂಬಕ್ಕೆ ಅರ್ಥವಾಗುವಂತೆ ನಾವು ಹಿಂದಿನ ಪ್ರಕರಣಗಳು ಮತ್ತು ದಾಖಲೆಗಳನ್ನು ವಿವರಿಸಬೇಕಾಯಿತು" ಎಂದು ಅವರು ಹೇಳಿದರು.

ಮಗುವಿಗೆ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ ಎಂದು ಬಳ್ಳಾರಿಯ ಮಕ್ಕಳ ತಜ್ಞ ಡಾ. ಪ್ರಿಸ್ಸಿಲ್ಲಾ ಟಿ ಹೇಳಿದ್ದಾರೆ. "ಹಲವಾರು ಶಿಶುಗಳು ಹೆಚ್ಚುವರಿ ಕೈ ಬೆರಳು ಅಥವಾ ಕಾಲು ಬೆರಳುಗಳೊಡನೆ ಜನಿಸುತ್ತವೆ ಆದರೆ ಈ ಸಂದರ್ಭದಲ್ಲಿ ಮಗುವಿಗೆ ಒಂದೇ ಪಾದದಲ್ಲಿ ಒಂಬತ್ತು ಕಾಲು ಬೆರಳುಗಳಿವೆ. ಶಿಶು ಬೆಳೆದಂತೆ ಹೆಚ್ಚುವರಿ ಕಾಲು ಬೆರಳುಗಳ ಜತೆಗೇ ನಡೆಯಲು ಹೊಂದಿಕೊಳ್ಳುತ್ತವೆ” ಎಂದು ಅವರು ಹೇಳಿದರು.

ಕುಟುಂಬದ ಹಲವಾರು ಹಿರಿಯರು ಇದು ದೇವರ ವರ ಎಂದು ಹೇಳಿದರು ಮತ್ತು ಮಗು ಮತ್ತು ತಾಯಿಯ ಆರೋಗ್ಯ ಕಾಪಾಡಿದ ವೈದ್ಯರ ತಂಡಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.