100 ಗಂಟೆಗಳ ಕಾಲ ಸತತ ಭಾಷಣ ಮಾಡಿ ವಿಶ್ವ ದಾಖಲೆ ಸೃಷ್ಟಿಸಿದ ಭೂಪ!
ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ಸತತ 100 ಗಂಟೆಗಳ ಕಾಲ ಭಾಷಣ ಮಾಡಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಪುಸ್ತಕಕ್ಕೆ ಸೇರ್ಪಡೆಯಾಗಿದ್ದಾರೆ.

Published On :
ಷಹಜಹಾನಪುರ್(ಉತ್ತರ ಪ್ರದೇಶ): ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ಸತತ 100 ಗಂಟೆಗಳ ಕಾಲ ಭಾಷಣ ಮಾಡಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಪುಸ್ತಕಕ್ಕೆ ಸೇರ್ಪಡೆಯಾಗಿದ್ದಾರೆ.
ಉತ್ತರ ಪ್ರದೇಶ ಲಖ್ಮಿಪುರ ನಿವಾಸಿಯಾಗಿರುವ ಯತೀಶ್ ಚಂದ್ರ ಶುಕ್ಲಾ ಎಂಬ 35 ವರ್ಷದ ವ್ಯಕ್ತಿ ಈ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇವರು ಜನವರಿ 5ರಿಂದ 9ರವರೆಗೆ ಸತತ 4 ದಿನ (ನೂರು ಗಂಟೆ) ಭಾಷಣ ಮಾಡಿದ್ದಾರೆ.
ಮಾಜಿ ಅತಿಥಿ ಉಪನ್ಯಾಸಕರಾಗಿದ್ದ ಶುಕ್ಲಾ ಅವರು ನೇಪಾಳದ ಅನಂತ್ ರಾಮ್ ಅವರ ದಾಖಲೆಯನ್ನು ಅಳಿಸಿ ಹಾಕಿ ನೂತನ ದಾಖಲೆ ನಿರ್ಮಿಸಿದ್ದಾರೆ.ಅನಂತ್ ರಾಮ್ 90 ಗಂಟೆಗಳ ಕಾಲ ಭಾಷಣ ಮಾಡುವ ಮೂಲಕ ವಿಶ್ವ ದಾಖಲೆ ಪುಸ್ತಕ ಸೇರಿದ್ದರು.
ಶುಕ್ಲಾ ತಮ್ಮ ಭಾಷಣದ ನಡುವೆ ಕೇವಲ 32 ಬಾರಿ ವಿರಾಮ ತೆಗೆದುಕೊಂಡಿದ್ದರೆನ್ನುವುದು ಗಮನಾರ್ಹ.
ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಅಧಿಕಾರಿಗಳಾದ ಎಸ್‌ಡಿಎಂ, ಸದರ್, ಡಾ.ಅರುಣ್ ಕುಮಾರ್ ಸಿಂಗ್ ಮತ್ತಿತರರ ಉಪಸ್ಥಿತಿಯಲ್ಲಿ ಶುಕ್ಲಾ ಈ ಸಾಧನೆ ಮಾಡಿದ್ದು ಅವರಿಗೆ ವಿಶ್ವ ದಾಖಲೆಯ ಪ್ರಶಸ್ತಿ ಪತ್ರವನ್ನು ಹಸ್ತಾಂತರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Uttar pradeshಉತ್ತರ ಪ್ರದೇಶworld recordYatish Chandra ShuklaSpeaking Continuously For 100 Hoursಯತೀಶ್ ಚಂದ್ರ ಶುಕ್ಲಾ ವಿಶ್ವ ದಾಖಲೆನಿರಂತರ 100 ಗಂಟೆಗಳ ಕಾಲ ಭಾಷಣ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


