ವಿಶೇಷ

ಮಾತೃವಾತ್ಸಲ್ಯದ ಈ ಬಂಧ: 42 ವರುಷಗಳ ನಂತರ ಮಗಳಿಗೆ ಅಮ್ಮ ಸಿಕ್ಕಿದಳು!

ಎಲಿಜಬೆತ್‌ಗೆ ಎರಡೂವರೆ ವರ್ಷವಿದ್ದಾಗ ಸ್ವೀಡಿಷ್ ದಂಪತಿಗಳು ಆಕೆಯನ್ನು ದತ್ತು ಪಡೆದರು. ಬೆಳೆಯುತ್ತಿದ್ದ ಹಾಗೆ ಎಲಿಜಬೆತ್ ತನ್ನ ನಿಜವಾದ ಅಮ್ಮನನ್ನು...

ಮಾತೃವಾತ್ಸಲ್ಯದ ಈ ಬಂಧ: 42 ವರುಷಗಳ ನಂತರ ಮಗಳಿಗೆ ಅಮ್ಮ ಸಿಕ್ಕಿದಳು!
(ಎಡದಿಂದ ಬಲಕ್ಕೆ) ಬಾಲ್ಯದಲ್ಲಿ ಎಲಿಜಬೆತ್ (ಕೈಯಲ್ಲೆತ್ತಿಕೊಂಡಿರುವ ಮಗು)- ಸ್ವೀಡನ್ ನಿಂದ ಬಂದ ಎಲಿಜಬೆತ್
Published On :
ಈಕೆ ಎಲಿಜಬೆತ್ ಪೂರ್ವೆ ಜೊರೆಂಡಾಲ್, ಸ್ವೀಡನ್ ದೇಶದ ಪ್ರಜೆ. ಹುಟ್ಟಿದಾಗ ಭಾರತೀಯಳಾಗಿದ್ದ ಎಲಿಜಬೆತ್ ಈಗ ಸ್ವೀಡನ್‌ನಲ್ಲಿ ನೆಲೆಸಿ ಅಲ್ಲಿನ ಪ್ರಜೆಯಾಗಿದ್ದಾಳೆ. ವರುಷಗಳ ಹಿಂದೆ ಸ್ವೀಡಿಷ್ ದಂಪತಿಗಳು ಈಕೆಯನ್ನು ದತ್ತು ಪಡೆದಿದ್ದು, 41 ವರುಷಗಳ ನಂತರ ಆಕೆ ತನ್ನ ಅಮ್ಮನನ್ನು ಹುಡುಕಿ ಭಾರತಕ್ಕೆ ಬಂದಿದ್ದಾಳೆ. ತನ್ನ ಅಮ್ಮನನ್ನು ನೋಡಬೇಕು ಎಂಬ ಆಸೆ ಅವಳನ್ನು ಭಾರತಕ್ಕೆ ಕರೆದು ಕೊಂಡು ಬಂದಿತ್ತು. ಆ ಅಮ್ಮ ಎಲ್ಲಿದ್ದಾಳೆ ಎಂದು ಆಕೆ ಹುಡುಕುತ್ತಲೇ ಇದ್ದಳು. 42 ವರುಷಗಳ ನಂತರ ಆ ಮಗಳಿಗೆ ತನ್ನ ಅಮ್ಮ ಸಿಕ್ಕಿದಳು!
21ನೇ ವಯಸ್ಸಿನಲ್ಲಿ ಎಲಿಜಬೆತ್‌ಳ ಅಮ್ಮನ ವಿವಾಹವಾಗಿತ್ತು. ಮೂರು ವರ್ಷದ ದಾಂಪತ್ಯದ ನಂತರ ಅದೊಂದು ದಿನ ಇನ್ಯಾರಲ್ಲೋ ಜಗಳವಾಡಿ ಬಂದು ಆತ್ಮಹತ್ಯೆ ಮಾಡಿಕೊಂಡರು. ಅದರ ನಂತರ ಅಮ್ಮ ಬೇರೊಂದು ವಿವಾಹ ಮಾಡಿಕೊಳ್ಳಬೇಕೆಂದು ಕುಟುಂಬದವರು ಒತ್ತಾಯ ಮಾಡುತ್ತಿದ್ದರು. ಆ ಹೊತ್ತಿನಲ್ಲಿ ಅಮ್ಮ ಗರ್ಭಿಣಿಯಾಗಿದ್ದುದರಿಂದ ಆಕೆಯನ್ನು ಅನಾಥಾಶ್ರಮವೊಂದಕ್ಕೆ ಸೇರಿಸಲಾಯಿತು. ಹಾಗೆ 1973ರಲ್ಲಿ ಎಲಿಜಬೆತ್ ಅಲ್ಲಿ ಹುಟ್ಟಿದಳು. ಎಲಿಜಬೆತ್‌ಗೆ ಎರಡೂವರೆ ವರ್ಷವಿದ್ದಾಗ ಸ್ವೀಡಿಷ್ ದಂಪತಿಗಳು ಆಕೆಯನ್ನು ದತ್ತು ಪಡೆದರು. ಬೆಳೆಯುತ್ತಿದ್ದ ಹಾಗೆ ಎಲಿಜಬೆತ್ ತನ್ನ ನಿಜವಾದ ಅಮ್ಮನನ್ನು ನೋಡಬೇಕೆಂದು ಆಸೆ ಪಡುತ್ತಿದ್ದಳು. ತನ್ನ ಅಮ್ಮನನ್ನು ಪತ್ತೆ ಹಚ್ಚಲೇಬೇಕು ಎಂಬ ಆಕೆಯ ತೀರ್ಮಾನಕ್ಕೆ ದತ್ತು ಪಡೆದ ಅಪ್ಪ ಅಮ್ಮನೂ ಬೆಂಬಲ ಸೂಚಿಸಿದರು.
1998ರಲ್ಲಿ ಈಕೆ ಅಮ್ಮನನ್ನು ಹುಡುಕಲು ಆರಂಭಿಸಿದ್ದು, ಕೊನೆಗೆ ಮಹಾರಾಷ್ಟ್ರದ ಒಂದು ಗ್ರಾಮದಲ್ಲಿ ಈಕೆಗೆ ಅಮ್ಮ ಸಿಕ್ಕಿದಳು. ದತ್ತು ಪತ್ರದಲ್ಲಿ ಅಮ್ಮನ ಹೆಸರು ಮತ್ತು ಅಜ್ಜನ ಹೆಸರು ಮಾತ್ರ ಇತ್ತು. 2014ರಲ್ಲಿ ಬೆಲ್ಜಿಯಂನಲ್ಲಿ ಪ್ರಧಾನ ಕಾರ್ಯಾಲಯವನ್ನು ಹೊಂದಿರುವ  ಎಗೈನ್ಸ್ಟ್ ಚೈಲ್ಡ್ ಟ್ರಾಫಿಕಿಂಗ್ ಸಂಸ್ಥೆಯನ್ನು ಭೇಟಿಯಾಗಿದ್ದು, ಅಲ್ಲಿಂದ ಈಕೆಗೆ ಸಹಾಯ ಲಭಿಸಿತ್ತು.  ಆಗಸ್ಟ್ ತಿಂಗಳಲ್ಲಿ ಅಮ್ಮನ ಫೋಟೋ ಸಹಿತ ಆಕೆಯನ್ನು ಪತ್ತೆ ಹಚ್ಚಿದ್ದೇವೆ ಎಂದು ಸಂಸ್ಥೆ  ಎಲಿಜಬೆತ್‌ಗೆ ಇಮೇಲ್ ಬಂದಿತ್ತು. ಹಾಗೆ ಅಮ್ಮನನ್ನು ನೋಡಲು ಬಂದಾಗ ಮೊದಲ ಭೇಟಿಯಲ್ಲಿ ಇಬ್ಬರೂ ಮೌನದ ಮೊರೆ ಹೋಗಿದ್ದರು. ಜೀವನದಲ್ಲಿ ಮತ್ತೆಂದೂ ಮಗಳನ್ನು ಭೇಟಿಯಾಗಲು ಸಾಧ್ಯವೇ ಇಲ್ಲ ಎಂದು ಭಾವಿಸಿದ್ದ ಅಮ್ಮನ ಮುಂದೆ ಆ ಮಗಳು ನಿಂತಿದ್ದಾಳೆ. ಆಕೆಯ ಹಾವ, ಭಾವ, ನಗು ಎಲ್ಲದರಲ್ಲೂ ಅಮ್ಮನದ್ದೇ ಛಾಪು! 
ಇದೀಗ ತನ್ನ ಎರಡನೇ ವಿವಾಹದಲ್ಲಿ ಹುಟ್ಟಿದ ಮಗಳೊಂದಿಗೆ ಎಲಿಜಬೆತ್‌ನ ಅಮ್ಮ ವಾಸಿಸುತ್ತಿದ್ದಾರೆ. ತಾನು ಅಮ್ಮನದ್ದೇ ಕಾರ್ಬನ್ ಪ್ರತಿಯೆಂದು ಗೊತ್ತಾದಾಗ ಎಲಿಜಬೆತ್‌ಗೆ ಸಂತೋಷದಿಂದ ಕಣ್ಣೀರು ಹಾಕುತ್ತಾಳೆ. ಅಮ್ಮನನ್ನು ನೋಡಬೇಕೆಂಬ ಆಸೆ ನೆರವೇರಿದ ನಂತರ ಎಲಿಜಬೆತ್ ವಾಪಸ್ ಸ್ವೀಡನ್‌ಗೆ ಮರಳಿದ್ದಾಳೆ.
ದೂರದಲ್ಲಿ ಎಲ್ಲೋ ನನ್ನ ಅಮ್ಮ ಇದ್ದಾರೆ, ಅವರನ್ನು ನೋಡಬೇಕೆಂಬ ಆಸೆ ಕೈಗೂಡಿದೆ. ಅಮ್ಮನನ್ನು ನೋಡಿದೆನಲ್ಲಾ...A ಕ್ಷಣಗಳಷ್ಟೇ ನನಗೆ ಸಾಕು ಎಂದು ಎಲಿಜಬೆತ್ ಸಂತೃಪ್ತರಾಗಿ ಸ್ವೀಡನ್‌ಗೆ ಮರಳುವಾಗ ಮಗಳನ್ನು ನೋಡಿದ ಖುಷಿಯಲ್ಲಿ ಅಮ್ಮನ ಕಣ್ಣಿನಿಂದಲೂ ಎರಡು ಹನಿ ಜಾರಿ ಬಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.