ವಿಶೇಷ

Smart Phone - ಒಂದು ಜಿಜ್ಞಾಸೆ!

ಯಾವ್ದೋ ಆಫೀಸಿನ ಕೆಲಸದ ಬಗ್ಗೆ ತಲೆ ಕೆಡಿಸಿಕೊಂಡು, ಯೋಚನೆ ಮಾಡ್ತಾ ಆಫೀಸಿನ ಕ್ಯಾಂಟೀನ್ ನಲ್ಲಿ ಒಂದು ಮೂಲೆಯಲ್ಲಿ ಕೂತು ಊಟ ಮಾಡಲು..

Smart Phone - ಒಂದು ಜಿಜ್ಞಾಸೆ!
ಸಾಂದರ್ಭಿಕ ಚಿತ್ರ
Published On :
ಯಾವ್ದೋ ಆಫೀಸಿನ ಕೆಲಸದ ಬಗ್ಗೆ ತಲೆ ಕೆಡಿಸಿಕೊಂಡು, ಯೋಚನೆ ಮಾಡ್ತಾ ಆಫೀಸಿನ ಕ್ಯಾಂಟೀನ್ ನಲ್ಲಿ ಒಂದು ಮೂಲೆಯಲ್ಲಿ ಕೂತು ಊಟ ಮಾಡಲು.. ಇನ್ನೇನು ಮಡದಿ ಕಳಿಸಿದ ಊಟದ ಡಬ್ಬ ತೆಗಿಬೇಕು, ಅಷ್ಟರಲ್ಲಿ ಯಾರೋ ಕರೆದಂತಾಗಿ ನೋಡಿದರೆ , ಅತ್ತೆಡೆ TV ಮುಂದಿನ ಟೇಬಲ್ ಬಳಿ ಕೂತು ಹರಟುತ್ತ ಊಟ ಮಾಡುತಿದ್ದ ರಮೇಶ, ಸತೀಶ. 
"ಇಲ್ಲೇ ಬಾ ನಾಗ್ಸ್ , ಒಟ್ಟಿಗೆ ಕೂತು ಹರಟುತ್ತ ಊಟ ಮಾಡಬಹುದು" ಅಂತಾ ಅವರಿಬ್ಬರೂ ಕರೆದಾಗ , ಸರಿ ಅಂತಾ ಹೋಗಿ ನಾನು ಅಲ್ಲೇ ಕೂತಿದ್ದೆ. 
ಅವರಿಬ್ಬರೂ ಅದು ಇದು ಅಂತಾ ಮಾತಾಡ್ತಾ ಇರೋವಾಗಾ , ಎದುರಿಗಿದ್ದ TV ನಲ್ಲಿ ಆಪಲ್ ಕಂಪನಿಯ ಹೊಸ ಸೆಲ್ ಫೋನುಗಳ ಬಗ್ಗೆ ಏನೋ ಒಂದು ವರದಿ ಬರ್ತಾ ಇತ್ತು. ತಕ್ಷಣ ಅವರಿಬ್ಬರ ಹರಟೆಯ ವಿಷಯ ಆಪಲ್ ಫೋನ್ ಬಗ್ಗೆ ಚೇಂಜ್ ಆಗಿತ್ತು. 
ರಮೇಶ "ಆಪಲ್ ಫೋನ್ ರಾಕ್ಸ್ ಮ್ಯಾನ್" ...ಅಂತಾ ತನ್ನ ಬಳಿ ಇದ್ದ ಐಫೋನ್ ತೆಗೆದು ತೋರಿಸುತ್ತಾ ಹೇಳಿದಾಗ , ಸ್ವಲ್ಪ ಸಿಟ್ಟಾದಂತೆ ಕಂಡ ಸತೀಶ , ಅದರಲ್ಲೇನು ಇದೆ ವಿಶೇಷ ? ನೋಡು ಈ ಸ್ಯಾಮ್ ಸಂಗ್ ಗ್ಯಾಲಕ್ಸಿ ಸ್ಮಾರ್ಟ್ ಫೋನ್ ..ಫಾರ್ ಬೆಟರ್ than ಐಫೋನ್, ಅಂತಾ ಅವನ ಬಳಿ ಇದ್ದ ಗ್ಯಾಲಕ್ಸಿ ಸ್ಮಾರ್ಟ್ ಫೋನನ್ನು ಸ್ಮಾರ್ಟ್ ಆಗಿ ಹಿಡಿದು ತೋರಿಸಿದ್ದ. ಮೊದಲೇ ಮಡದಿ ಕಳಿಸಿದ್ದ ಉಪ್ಪು , ಹುಳಿ ಇಲ್ಲದ ಸಪ್ಪೆಯ ಚಿತ್ರಾನ್ನವನ್ನು ತಿನ್ನಲೊ ಬೇಡವೋ ಅಂತಾ ನಿಧಾನವಾಗಿ ತಿಂತಾ, ಆಫೀಸಿನ ಕೆಲಸದ ಬಗ್ಗೆ ತಲೆ ಕೆಡಿಸಿಕೊಂಡು ಕುಳಿತಿದ್ದ ನಂಗೆ ಇವರಿಬ್ಬರ ವಾದ ವಿವಾದ ಇನ್ನು ಸ್ವಲ್ಪ ತಲೆ ನೋವು ಬರಿಸಿತ್ತು. 
ನಾಗ್ಸ್ , ನೀ ಹೇಳಮ್ಮ , ಇವೆರಡು ಸ್ಮಾರ್ಟ್-ಫೋನ್ಸ್ ನಲ್ಲಿ ಯಾವುದು ರಾಕ್ಸ್ ಅಂತಾ ಇಬ್ಬರು ನನ್ನ ಕಡೆನೇ ನೋಡಿ ಕೇಳಿದಾಗ...hmm "ಕಷ್ಟ ಗುರು , ನೋಡು ನನ್ನ ಹತ್ತಿರ ಇರೋದೋ ಹಳೆ ಜಮಾನದ ಫೋನ್ . ನಿಮ್ಮಷ್ಟು ಸ್ಮಾರ್ಟ್ ಇಲ್ಲ ಗುರು ನಾ "..ನೀವೇ ಹೇಳಿ ಈ ಹೊಸ ಸ್ಮಾರ್ಟ್-ಫೋನ್ಸ್ ಗಳ ಜಾದು , ಮಹಿಮೆ, ಉಪಯೋಗ ಅಂತಾ ನಾ, ಅವರ ಪ್ರಶ್ನೆಯನ್ನು ಅವರಿಗೇ ವಾಪಸುಮಾಡಿದ್ದೆ !
"ಆಪಲ್ ನ್ಯೂ ಐಫೋನ್ 6plus/6S  , 64 ಬಿಟ್ OS ವಿಥ್ A8 ಚಿಪ್, M8 ಪ್ರೊಸೆಸರ್ - ತುಂಬಾ ಸ್ಪೀಡ್ , ಫಿಂಗರ್ ಪ್ರಿಂಟ್ ಐಡೆಂಟಿಟಿ ಮಾಡುತ್ತೆ , ಗರ್ಲ್ ಫ್ರೆಂಡ್ ಜೊತೆ ಫೇಸ್ ಟೈಮ್ ವೀಡಿಯೊ ಕಾಲ್ ಮಾಡಬಹುದು , ಒಳ್ಳೆ ಹೈ resolution ಕ್ಯಾಮೆರಾದಲ್ಲಿ ಬೊಂಬಾಟಾಗಿ ನಿನ್ನ ಹುಡುಗಿ ಫೋಟೋ ಕ್ಲಿಕ್ ಮಾಡಿ , ಸೂಪರ್ ರೆಟಿನಾ ಸ್ಕ್ರೀನ್ ನಲ್ಲಿ 3D ಟಚ್ ನಲ್ಲಿ ಟಚ್ ಮಾಡ್ತಾ ಅವಳಿಗೆ ತೋರಿಸಿ, ಆ ಸೊನ್ನೆ ನಂಬರ್ ಕರೀನಾ ಇದ್ದ ಹಾಗೆ ಇದ್ದೀಯ ಅಂತಾ ಹೇಳಿ.. ಇಂಪ್ರೆಸ್ ಮಾಡಬಹುದು ನೋಡಮ್ಮ...Forward ಥಿಂಕಿಂಗ್  ಅಂತಾ ಕಣ್ಣು ಮಿಟುಕಿಸಿ  ;) " ರಮೇಶ ಹೇಳಿದಾಗ , ಮೊದಲೇ ಸಿಟ್ಟಾಗಿದ್ದ ಸತೀಶ ಶುರು ಹಚ್ಚಿದ್ದ ತನ್ನ ಸ್ಯಾಮ್ ಸಂಗ್ ಫೋನ್ ಬಗ್ಗೆ. " ಗ್ಯಾಲಕ್ಸಿ Android ಸ್ಮಾರ್ಟ್ ಫೋನ್ ಅಷ್ಟೇ ಗುರು , ಸ್ಕ್ರೀನ್ ಟಚ್ ಮಾಡದಲೆ ಫೋಟೋಗಳನ್ನೂ , ಬೇರೆ ಕಂಟೆಂಟ್ಸ ನೋಡಬಹುದು , ಆಟೋಮ್ಯಾಟಿಕ್ ಆಗಿ ವೀಡಿಯೊ pause ಮಾಡುತ್ತೆ ನೀನು ಬೇರೆ ಕಡೆ ನೋಡಿದ ತಕ್ಷಣ , ಮತ್ತೆ ಅಲ್ಲಿಂದಲೇ resume ಮಾಡುತ್ತೆ ಫೋನ್ ನೋಡಿದ ತಕ್ಷಣ...Life companion ಗುರು" ಗೊತ್ತಾ ? 
ಅಷ್ಟರಲ್ಲೇ ನನ್ನ ಓಬಿರಾಯನ ಕಾಲದ ಫೋನ್ ಟ್ರಿಣ್ ಟ್ರಿಣ್ ಅಂತಾ ಶಬ್ದ ಮಾಡ ತೊಡಗಿದಾಗ , ಆಫೀಸ್ ಮ್ಯಾನೇಜರ್ ಏನರ ಫೋನ್ ಮಾಡಿದರೋ ಏನೋ ಅಂತಾ ನೋಡದೆ ಎತ್ತಿಕೊಂಡು ಸರ ಸರನೆ  , ಹಲೋ ಅಂದಿದ್ದೆ ಬರ ಬರನೆ ! ಅತ್ತ ಕಡೆಯಿಂದ " ಏನ್ರಿ ಊಟ ಮಾಡಿದ್ರ ? ಚಿತ್ರಾನ್ನ ಹ್ಯಾಗಿತ್ತು ?" ಮಡದಿಯ ಅದೇ ಕರ ಕರ ಧ್ವನಿ ! 
ಏನು ಉಪ್ಪು ಇಲ್ಲ , ಹುಳಿ ಇಲ್ಲ ಸಪ್ಪಗೆ ಇದೆ ಅಂತಾ ನಾ ಹೇಳಿದಾಗ ..."ನಿಮಗೆ ನಾನು ಅಡಿಗೆ ಮಾಡಿದ್ದು ಯಾವದು ಇಷ್ಟ ಆಗೋಲ್ಲ ? ವಾಪಸು ತಂದರೆ ಅದಕ್ಕೆ ಉಪ್ಪು ಸೇರಿಸಿ ಕೊಡ್ತೀನಿ, ರಾತ್ರಿಗೆ ನಿಮಗೆ ಅದೇ ಗತಿ " ಅಂತ ರಪ್ಪೆಂದು ಇಟ್ಟೇ ಬಿಟ್ಟಿದ್ದಳು ಫೋನನ್ನು! 
ಹೇ ನಾಗ್ಸ್ , ಹೇಳಮ್ಮ ಈಗ ಯಾವ ಫೋನು ಸ್ಮಾರ್ಟ್ ಅಂತಾ? ನೀನು ನಿನ್ನ ಈ ಡಬ್ಬಾ ಫೋನ್ ತಗೆದಾಕಿ , ಈ ಸ್ಮಾರ್ಟ್ ಫೋನ್ ತಗೋ ಗುರು...ಮಸ್ತ್ ಇರುತ್ತೆ , ಅದರ ಜೊತೆ ನೀನು ಸಹಾ ಸ್ಮಾರ್ಟ್ ಆಗ್ತಿಯಾ" ಅಂತಾ ಅವರಿಬ್ಬರೂ ಒಮ್ಮೆಗೆ ಮತ್ತೆ ಕೇಳಿ,ಹೇಳಿದಾಗ ...
ನೋಡು ಗುರು " ಈ forward ಥಿಂಕಿಂಗ್ , ಲೈಫ್ companion ಗಿಂತ , ಎಮರ್ಜೆನ್ಸಿ ಟೈಮಲ್ಲಿ ಕಾಲ್ ಮಾಡಲಿಕ್ಕೆ ಒಂದು ಫೋನ್ ಅಂತಾ ಇದ್ದರೆ ಸಾಕು. ನಾನು ಏನು ಮಾಡ್ತಾ ಇದೀನಿ ಅಂತ ಆ ಗೆಳತಿ,ಹೆಂಡ್ತಿ ಅವರಿಗೆ ತೋರಿಸೋದು ಬೇಡ , ಎಡವಟ್ಟಿನಲ್ಲಿ ಸಿಕ್ಕಿ ಹಾಕಿಕೊಳ್ಳೋದು ಬೇಡ.
ನಂಗೆ ಈ M8 , A8 ಪ್ರೊಸೆಸರ್ ಎಲ್ಲ ಅರ್ಥ ಆಗೋಲ್ಲ ಗುರು...ಈಗ ತಾನೇ AK47 ನಿಂದ ಬುಲೆಟ್ಸ್ ಹಾರಿಬಂದಂಗೆ ಹೆಂಡ್ತಿ ಮಾತುಗಳು ಗುಯ್ಯಂತಿದಾವೆ ಕಿವಿಯಲ್ಲಿ ...
ಗೊತ್ತಿಲ್ಲ ಮಾರಾಯ ನಂಗೆ 
ಆ 32 , 64 ಬಿಟ್ಟು... 
ಗೊತ್ತಿರುವುದು ಮಾತ್ರ 
ಹೆಂಡತಿಯ ಈ ಸಿಟ್ಟು ..!
ಈ ನಿಮ್ಮ ಸ್ಮಾರ್ಟ್ ಫೋನ್ ಏನಾರ ಮಡದಿಯ ಆ ಕರ್ಕಶ ಧ್ವನಿಯನ್ನು.. ಇಂಪಾದ ರಾಗಕ್ಕೆ ಆಟೋಮ್ಯಾಟಿಕ್ ಆಗಿ ಕನ್ವರ್ಟ್ ಮಾಡಿ ನನ್ನ ಕಿವಿಗೆ ಕೇಳಿಸೋ ಹಾಗೆ ಮಾಡಿದ್ರೆ ಹೇಳ್ರಪ್ಪ , ಇವತ್ತೇ ಒಂದು , ಆ ಸ್ಮಾರ್ಟ್ ಫೋನ್ ತಗೋತೀನಿ ..." ಅಂದೆ. 
ಇವನನ್ನು ಕಾಪಾಡಪ್ಪ ಹೇ ವೆಂಕಟೇಶ , 
ಅಂತಾ ಸುಮ್ಮನೆ ಹೇಳದೆ ಎದ್ದು 
ಹೋಗಿದ್ದರು... ಆ ರಮೇಶ ,ಸತೀಶ !
ನಿಮಗೆ ಯಾವದಾದ್ರು ಆ ತರಹದ ಸ್ಮಾರ್ಟ್ ಫೋನು ಗೊತ್ತಿದ್ದರೆ ತಕ್ಷಣ ಹೇಳಿ ನನಗೆ...
- ನಾಗರಾಜ್.ಎಂ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.