ವಿಶೇಷ

ಸೆಲ್ಫಿ ಬಿಡಿ, ಈ ಭಯಾನಕ ಎಲ್ಫಿ ನೋಡಿ ಮನಸೂರೆಗೊಳ್ಳಿ

ದೇಶದ ಪ್ರಧಾನಿಯವರ ಹಲವಾರು ಸೆಲ್ಫಿಗಳನ್ನು ನೀವು ನೋಡಿದ್ದೀರಿ. ಸಿಂಗಳೀಕವೊಂದು ಸೆಲ್ಫಿ ತೆಗೆದುಕೊಂಡಿದ್ದು ನೋಡಿದ್ದೀರಿ. ಆದರೆ ಈ ಭಯಾನಕ 'ಎಲ್ಫಿ'ಗೆ

ಸೆಲ್ಫಿ ಬಿಡಿ, ಈ ಭಯಾನಕ ಎಲ್ಫಿ ನೋಡಿ ಮನಸೂರೆಗೊಳ್ಳಿ
ಆನೆ ಸೆಲ್ಫಿ ಅಥವಾ ಎಲ್ಫಿ
Published On :

ವ್ಯಾಂಕೋವರ್: ದೇಶದ ಪ್ರಧಾನಿಯವರ ಹಲವಾರು ಸೆಲ್ಫಿಗಳನ್ನು ನೀವು ನೋಡಿದ್ದೀರಿ. ಸಿಂಗಳೀಕವೊಂದು ಸೆಲ್ಫಿ ತೆಗೆದುಕೊಂಡಿದ್ದು ನೋಡಿದ್ದೀರಿ. ಆದರೆ ಈ ಭಯಾನಕ 'ಎಲ್ಫಿ'ಗೆ ನೀವು ಮನಸೂರೆಗೊಳ್ಳಲು ಇರಲು ಸಾಧ್ಯವೇ ಇಲ್ಲ.  

ಸಾಮಾಜಿಕ ಅಂತರ್ಜಾಲದಲ್ಲಿ ಟ್ರೆಂಡಿಂಗ್ ಇರುವ ಈ ಆನೆ ಸೆಲ್ಫಿ ಅಥವಾ ಎಲ್ಫಿ ಬಳಕೆದಾರರರನ್ನು ಆಶ್ಚರ್ಯಗೊಳಿಸಿದೆ. ಬ್ರಿಟಿಶ್ ಕೊಲಂಬಿಯಾ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ಹಾಗು ಸದ್ಯಕ್ಕೆ ಥೈಲ್ಯಾಂಡಿನಲ್ಲಿ ಓದುತ್ತಿರುವ ಕ್ರಿಶ್ಚಿಯನ್ ಲೆಬ್ಲ್ಯಾಂಕ್ ಈ ಎಲ್ಫಿಯನ್ನು ಪೋಸ್ಟ್ ಮಾಡಿದ್ದಾರೆ.

ಥೈಲ್ಯಾಂಡ್ ನ ಕೊಹ್ ಫಂಗನ್ ದ್ವೀಪದಲ್ಲಿ ಈ ಎಲ್ಫಿ ಕ್ಲಿಕ್ಕಿಸಲಾಗಿದೆ.

"ನಾನು ಆನೆಗಳಿಗೆ ಬಾಳೆಹಣ್ಣು ತಿನ್ನಿಸುತ್ತಾ ಫೋಟೊಗಳನ್ನು ಹಿಡಿಯುತ್ತಿದ್ದೆ. ಬಾಳೆ ಹಣ್ಣುಗಳು ಮುಗಿದಾಕ್ಷಣ ಆನೆ ನನ್ನ ಗೋಪ್ರೋ ಕ್ಯಾಮರಾ ಕಸಿಯಿತು. ಕ್ಯಾಮರಾದಲ್ಲಿ ಟೈಮರ್ ಸೆಟ್ ಆಗಿದ್ದರಿಂದ ಆನೆ ಎಲ್ಫಿ ಕ್ಲಿಕ್ಕಿಸಿತು" ಎಂದು ಲೆಬ್ಲ್ಯಾಂಕ್ ತಿಳಿಸಿದ್ದಾರೆ.

ಈ ಅಧ್ಬುತ ಫೋಟೊವನ್ನು ಲೆಬ್ಲ್ಯಾಂಕ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪ್ರಕಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.