ಅಮೆರಿಕಾದಲ್ಲಿ ಹಿಂದು ಜನಸಂಖ್ಯೆ ಹೆಚ್ಚಳ; ನಾಲ್ಕನೆ ಅತಿ ದೊಡ್ಡ ಧಾರ್ಮಿಕ ಸಮುದಾಯ
ವಲಸಿಗರ ಹೆಚ್ಚಳದಿಂದ ಅಮೆರಿಕಾದಲ್ಲಿ ಹಿಂದೂಗಳ ಸಂಖ್ಯೆ ೨.೨೩ ದಶಲಕ್ಷಕ್ಕೆ ಏರಿದೆ. ೨೦೦೭ ರಿಂದೀಚೆಗೆ ಹಿಂದುಗಳ ಜನಸಂಖ್ಯೆ ಶೇಕಡಾ ೮೫.೮ ಏರಿಕೆ

ನ್ಯೂಯಾರ್ಕ್: ವಲಸಿಗರ ಹೆಚ್ಚಳದಿಂದ ಅಮೆರಿಕಾದಲ್ಲಿ ಹಿಂದೂಗಳ ಸಂಖ್ಯೆ ೨.೨೩ ದಶಲಕ್ಷಕ್ಕೆ ಏರಿದೆ. ೨೦೦೭ ರಿಂದೀಚೆಗೆ ಹಿಂದುಗಳ ಜನಸಂಖ್ಯೆ ಶೇಕಡಾ ೮೫.೮ ಏರಿಕೆ ಕಂಡಿದೆ. ಇದು ಅಮೆರಿಕಾದಲ್ಲಿ ಹಿಂದುಗಳನ್ನು ನಾಲ್ಕನೇ ಅತಿ ದೊಡ್ಡ ಧಾರ್ಮಿಕ ಸಮುದಾಯವನ್ನಾಗಿಸಿದೆ.
ಹಿಂದುಗಳ ಅನುಪಾತದ ಏರಿಕೆ ೨೦೦೭ ರಲ್ಲಿ ೦.೪% ಇದ್ದರೆ ಕಳೆದ ವರ್ಷ ಇದು ೦.೭% ಇದೆ ಎಂದು ಧಾರ್ಮಿಕ ಜನಸಂಖ್ಯೆಯ ಅಧ್ಯಯನವೊಂದು ತಿಳಿಸಿದೆ.
೨೦೦೭ ರಲ್ಲಿ ಅಮೆರಿಕಾದ ಒಟ್ಟು ಜನಸಂಖ್ಯೆ ೩೦೧.೨ ದಷಲಕ್ಷವಿದ್ದು ಅದರಲ್ಲಿ ಹಿಂದೂಗಳ ಸಂಖ್ಯೆ ೧.೨ ದಶಲಕ್ಷ ಇತ್ತು. ೨೦೧೪ ರಲ್ಲಿ ಅಮೆರಿಕಾದ ಜನಸಂಖ್ಯೆ ೩೧೮.೮೮ ದಶಲಕ್ಷಕ್ಕೆ ಏರಿದ್ದು ಹಿಂದುಗಳ ಸಂಖ್ಯೆ ೧.೦೩ ದಶಲಕ್ಷ ಏರಿಕೆಯನ್ನು ಕಂಡಿದೆ.
"ಕ್ರಿಶ್ಚಿಯನ್ ಜನಸಂಖ್ಯೆ ಅಮೇರಿಕಾದಲ್ಲಿ ಅತಿ ಹೆಚ್ಚಿನದ್ದಾಗಿದ್ದರೂ ಈ ಸಂಖ್ಯೆ ಕುಸಿಯುತ್ತಿದೆ" ಎಂದು ವರದಿ ತಿಳಿಸಿದೆ.
ಇದಲ್ಲದೆ ಹಿಂದು ಸಮುದಾಯದ ಬಗ್ಗೆ ಇತರ ಮಾಹಿತಿಯನ್ನೂ ಈ ವರದಿ ನೀಡಿದೆ. ಅದರ ಮುಖ್ಯಾಂಶಗಳು ಇಂತಿವೆ.
- ಹಿಂದೂಗಳಲ್ಲಿ ವಿವಾಹ ವಿಚ್ಚೇಧನ ಅತಿ ಕಡಿಮೆ ಅಂದರೆ ೫% ಇದೆ.
- ಹಿಂದುಗಳು ಅನ್ಯಧರ್ಮೀಯರನ್ನು ಮದುವೆಯಾಗುವ ಸಂಭವ ಅತ್ಯಲ್ಪ. ೯೧% ಹಿಂದುಗಳ ಸಂಗಾತಿಗಳು ಹಿಂದು ಧರ್ಮದವರೇ ಆಗಿದ್ದಾರೆ.
- ಹಿಂದುಗಳ ಸರಾಸರಿ ವಯಸ್ಸು ೩೩ ವರ್ಷ
- ಸ್ಯಾನ್ ಫ್ರಾನ್ಸಿಸ್ಕೋದ ೫% ಜನಸಂಖ್ಯೆ ಹಾಗೂ ನ್ಯೂಯಾರ್ಕ್ ನ ೩% ಜನಸಂಖ್ಯೆ ಹಿಂದುಗಳು.
- ಬಹುತೇಕ ಹಿಂದುಗಳು ಪಶ್ಚಿಮದಲ್ಲೂ(೩೮%) ಹಾಗೂ ಈಶಾನ್ಯದಲ್ಲೂ(೩೩%) ವಾಸಿಸುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


