ವಿಶೇಷ

ಶಾಲಾ ಗೆಳೆಯರ ವಿಚಿತ್ರ ಪುನರ್ಮಿಲನದ ಕಥೆ ಇದು

ನ್ಯಾಯಾಲಯದಲ್ಲಿ ಅಪರಾಧ ವಿಚಾರಣೆ ವೇಳೆಯಲ್ಲಾದ ವಿಚಿತ್ರ ನಾಟಕೀಯ ಪುನರ್ಮಿಲನ ಇದು.

ಶಾಲಾ ಗೆಳೆಯರ ವಿಚಿತ್ರ ಪುನರ್ಮಿಲನದ ಕಥೆ ಇದು
ಕೋರ್ಟ್ ವಿಚಾರಣೆ ವೇಳೆಯಲ್ಲಿ ಒಂದಾದ ಶಾಲಾ ಗೆಳೆಯರು (ಅಪರಾಧಿ ಮತ್ತು ನ್ಯಾಯಾಧೀಶೆ)
Published On :

ಮಯಾಮಿ: ನ್ಯಾಯಾಲಯದಲ್ಲಿ ಅಪರಾಧ ವಿಚಾರಣೆ ವೇಳೆಯಲ್ಲಾದ ವಿಚಿತ್ರ ನಾಟಕೀಯ ಪುನರ್ಮಿಲನ ಇದು.   

ಮಯಾಮಿಯ ಫ್ಲೋರಿಡಾದ ನ್ಯಾಯಾಧೀಶೆ ಮಿಂಡಿ ಗ್ಲೇಜರ್ ಗುರುವಾರ ಕಳ್ಳತನ ಆರೋಪದ ಮೇಲೆ ಬಂಧಿತನಾಗಿದ್ದ ಪುರುಷನೊಬ್ಬನ ವಿಚಾರಣೆ ನಡೆಸುವಾಗ ನಡೆದ ಘಟನೆ ಇದು.

ಆದರೆ ಈ ಬಂಧಿತನನ್ನು ಹಿಂದೆಲ್ಲೋ ನೋಡಿದ ನೆನಪಾಗಿ ಹೌದು ತನ್ನ ಶಾಲಾ ಗೆಳೆಯ ಅವನೆಂದು ತಿಳಿದು, ಆಪಾದಿತನ ಶಾಲೆಯ ಬಗ್ಗೆ ವಿಚಾರಿಸಿದಾಗ ಅವನು ಕೂಡ ನ್ಯಾಯಮೂರ್ತಿಯನ್ನು ಗುರುತು ಹಚ್ಚಿದ್ದಾನೆ. ತನ್ನ ಶಾಲಾ ಗೆಳತಿಯನ್ನು ಗುರುತು ಹಚ್ಚಿದಾಕ್ಷಣ ದೊಡ್ಡ ನಗು ಬೀರಿದ್ದರೂ, ನಂತರ ತಾನು ಆರೋಪಿ ಎಂದು ನೆನಪಿಸಿಕೊಂಡು ಜೋರಾಗಿ ಅಳಲು ಪ್ರಾರಂಭಿಸಿದನಂತೆ.

'ಶಾಲಾ ದಿನಗಳಲ್ಲಿ ಬೂತ್(ಆರೋಪಿ) ಬಹಳ ಒಳ್ಳೆಯ ಗೆಳೆಯನಾಗಿದ್ದ, ಅವನ ಜೊತೆ ನಾನು ಫುಟ್ಬಾಲ್ ಆಡುತ್ತಿದ್ದೆ" ಎಂದು ನೆನಪಿಸಿಕೊಂಡ ನ್ಯಾಯಾಧೀಶೆ "ಈಗ ನೊಡಿ ಎಂತಹ ಪರಿಸ್ಥಿತಿ ಬಂದೊದಗಿದೆ" ಎಂದಿದ್ದಾರೆ.

ನೀನಿಲ್ಲಿರುವುದಕೆ ನಾನು ವಿಷಾದಿಸುತ್ತೇನೆ ಆದರೆ ನನಗೆ ಯಾವುದೇ ಸಹಾಯ ಮಾಡಲು ಸಾಧ್ಯವಿಲ್ಲ ಎಂದಿರುವ ಮಿಂಡಿ, ಆರೋಪಿಗೆ ೪೪೦೦೦ ಡಾಲರ್ ಬಾಂಡ್ ನೊಂದಿಗೆ ಜಾಮೀನು ನೀಡಿದ್ದಾರೆ. "ನಿನಗೆ ಮುಂದೆ ಒಳ್ಳೆಯದಾಗಲಿ, ನಿನ್ನ ಜೀವನ ಬದಲಾಯಿಕೊಳ್ಳುವಂತೆ ಆಶಿಸುತ್ತೇನೆ" ಎಂದು ಜಡ್ಜ್ ಹಾರೈಸಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.