ವಿಶೇಷ

'ಅಜಾತಶತ್ರು' ವಾಜಪೇಯಿ ಬಗ್ಗೆ ನಿಮಗೆ ಗೊತ್ತಿಲ್ಲದ 15 ಸಂಗತಿಗಳು

ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗಿಂದು 91ನೇ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ವಾಜಪೇಯಿ ಅವರ ಜೀವನದ...

'ಅಜಾತಶತ್ರು' ವಾಜಪೇಯಿ ಬಗ್ಗೆ ನಿಮಗೆ ಗೊತ್ತಿಲ್ಲದ 15 ಸಂಗತಿಗಳು
ಅಟಲ್ ಬಿಹಾರಿ ವಾಜಪೇಯಿ
Published On :
ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗಿಂದು 91ನೇ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ವಾಜಪೇಯಿ ಅವರ ಜೀವನದ ಆಸಕ್ತಿದಾಯಕ ಸಂಗತಿಗಳು ನಿಮಗಾಗಿ...
  • ಮಧ್ಯಪ್ರದೇಶದ ಬ್ರಾಹ್ಮಣ ಕುಟುಂಬದಲ್ಲಿ ಕೃಷ್ಣ ಬಿಹಾರಿ ವಾಜಪೇಯಿ ಮತ್ತು ಕೃಷ್ಣ ದೇವಿ ದಂಪತಿಗಳ ಮಗನಾಗಿ ಡಿಸೆಂಬರ್ 25, 1924 ರಂದು ಗ್ವಾಲಿಯರ್ನಲ್ಲಿ ಜನನ.
  • ಹದಿಹರೆಯದಲ್ಲಿ ಬ್ರಿಟಿಷರ ವಿರುದ್ಧ ಸಮರಕ್ಕಿಳಿದು ಜೈಲು ಸೇರಿದ್ದರು ವಾಜಪೇಯಿ. ಬ್ರಿಟಿಷರ ವಿರುದ್ಧ ಹೋರಾಟದ ಹೊತ್ತಲ್ಲೇ ರಾಷ್ಟ್ರೀಯ ಸ್ವಯಂ ಸೇವಕ್ ಸಂಘ್ (ಆರೆಸ್ಸೆಸ್) ಮತ್ತು ಜನ ಸಂಘದಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದರು.
  • 1950ರಲ್ಲಿ ಆರೆಸ್ಸೆಸ್ ಮ್ಯಾಗಜಿನ್ ನಡೆಸುವುದಕ್ಕೋಸ್ಕರ ಕಾನೂನು ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದರು. ಆಮೇಲೆ ಆರೆಸ್ಸೆಸ್ಸ್ ನ್ನು ಪೋಷಿಸಿ, ಬಿಜೆಪಿಯ ಶಕ್ತಿಯನ್ನಾಗಿ ಮಾರ್ಪಡಿಸಿದರು.
  • 1942-1945 ರ ಕ್ವಿಟ್ ಇಂಡಿಯಾ ಚಳವಳಿಯ ಹೊತ್ತಲ್ಲಿ ವಾಜಪೇಯಿ ರಾಜಕೀಯಕ್ಕೆ ಧುಮುಕಿದ್ದರು. ಮೊದಲಿಗೆ ಕಮ್ಯುನಿಸ್ಟ್ ಆಗಿದ್ದ ಇವರು ಆಮೇಲೆ ಆರೆಸ್ಸೆಸ್ಸ್ ಸೇರಿದರು.
  • ಭಾರತೀಯ ಜನ ಸಂಘದ ಸ್ಥಾಪಕ ಶ್ಯಾಮ ಪ್ರಸಾದ್ ಮೂಖರ್ಜಿ ಅವರ ಆಪ್ತ ಅನುಯಾಯಿಯಾಗಿದ್ದರು.
  • 1953ರಲ್ಲಿ ಕಾಶ್ಮೀರದಲ್ಲಿ ಮೂಖರ್ಜಿ ಅಮರಣಾಂತ ಉಪವಾಸ ಮಾಡಿದಾಗ ವಾಜಪೇಯಿ ಅವರಿಗೆ ಸಾಥ್ ನೀಡಿದ್ದರು. ಈ ಹೋರಾಟದ ನಂತರ ಅಸೌಖ್ಯದಿಂದ ಮೂಖರ್ಜಿ ಮರಣ ಹೊಂದಿದರು. ಅವರ ಸಾವು ಯುವಕ ವಾಜಪೇಯಿಯನ್ನು ತುಂಬಾ ಕಂಗೆಡಿಸಿತ್ತು. 
  • ಮೂಖರ್ಜಿಯ ಸಾವು ನಂತರ  ವಾಜಪೇಯಿ  1957ರಲ್ಲಿ ಮೊದಲ ಬಾರಿ ಸಂಸತ್ ಚುನಾವಣೆಯಲ್ಲಿ ವಿಜಯ ಸಾಧಿಸಿದರು.
  • 1957 ರಿಂದ 2009ರ ವರೆಗೆ ಲೋಕಸಭೆ, ಸಂಸತ್ನ ಕೆಳಮನೆಯಲ್ಲಿ ವಾಜಪೇಯಿ ಅವರು ಸೇವೆ ಸಲ್ಲಿಸಿದರು.
  • 4 ದಶಕಗಳ ಕಾಲ ವಿಪಕ್ಷದಲ್ಲಿದ್ದ ಬಿಜೆಪಿ 1996ರಲ್ಲಿ ವಾಜಪೇಯಿ ನೇತೃತ್ವದಲ್ಲಿ ಅಧಿಕಾರಕ್ಕೇರಿತು. ಆದರೆ ಈ ಸರ್ಕಾರ 13 ದಿನಗಳ ಕಾಲವಷ್ಟೇ ಅಧಿಕಾರ ನಡೆಸಿತು.
  • 1998ರಲ್ಲಿ 13 ತಿಂಗಳುಗಳ ಕಾಲ ಅಧಿಕಾರ ನಡೆಸಿದ ಬಿಜೆಪಿ ಸರ್ಕಾರ ಎಐಎಡಿಎಂಕೆ ನೇತಾರೆ ಜೆ. ಜಯಲಲಿತಾ ಅವರ ಬೆಂಬಲ ವಾಪಸ್ ತೆಗೆದುಕೊಂಡಾಗ ಮತ್ತೆ ಬಿತ್ತು.
  • 1999ರಲ್ಲಿ ಮತ್ತೆ ವಾಜಪೇಯಿ ಸರ್ಕಾರ  ಅಧಿಕಾರಕ್ಕೇರಿ 5 ವರ್ಷಗಳ ಅಧಿಕಾರಾವಧಿಯನ್ನು ಪೂರೈಸಿತು .
  • ಮೊರಾರ್ಜಿ ದೇಸಾಯಿ ಅವರ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದ ವಾಜಪೇಯಿ ವಿಶ್ವ ಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ್ದು ಅವರಿಗೆ ಹೆಚ್ಚು ಕೀರ್ತಿ ತಂದುಕೊಟ್ಟಿತ್ತು.
  • 1999ರಲ್ಲಿ ಪಾಕಿಸ್ತಾನಕ್ಕೆ ಬಸ್ ಸಂಪರ್ಕ ಕಲ್ಪಿಸಿ ಪಾಕ್ ಭೇಟಿ ಮಾಡಿದ್ದು ಅವರ ಸಾಧನೆಗಳಲ್ಲೊಂದು.
  • ಬ್ರಹ್ಮಚಾರಿಯಾಗಿದ್ದ ವಾಜಪೇಯಿ ಉತ್ತಮ ವಾಗ್ಮಿ ಮತ್ತು ಕವಿಯಾಗಿದ್ದಾರೆ.
  • ಭಾರತ ಸರ್ಕಾರ ಇವರಿಗೆ 1992ರಲ್ಲಿ ಪದ್ಮ ವಿಭೂಷಣ ಮತ್ತು ಮಾರ್ಚ್  27,2015 ರಂದು ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
(ಸಂಗ್ರಹ ಮಾಹಿತಿ)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.