ವಿಶೇಷ

ಚೈನಾ ಇಂದ ಸ್ಪೇನ್ ವರೆಗೆ: ವಿಶ್ವದ ಅತಿ ಉದ್ದನೆಯ ರೈಲು ಮಾರ್ಗ

ಚೈನಾದ ಕೈಗಾರಿಕಾ ನಗರ ಯಿವು..

ಚೈನಾ ಇಂದ ಸ್ಪೇನ್ ವರೆಗೆ: ವಿಶ್ವದ ಅತಿ ಉದ್ದನೆಯ ರೈಲು ಮಾರ್ಗ
ಚೈನಾದಿಂದ ಸ್ಪೇನ್ ವರೆಗೆ ಹೋಗುವ ಸರಕು ರೈಲು
Published On :

ವಾಶಿಂಗ್ ಟನ್: ಚೈನಾದ ಕೈಗಾರಿಕಾ ನಗರ ಯಿವು ಇಂದ ಸ್ಪೇನ್ ರಾಜಧಾನಿ ಮ್ಯಾಡ್ರಿಡ್ ಗೆ ೨೧ ದಿನಗಳಲ್ಲಿ ೬೨೦೦ ಮೈಲಿ ಕ್ರಮಿಸಿ ತೆರಳುವ ೮೨ ಬಂಡಿಗಳ ಸರಕು ರೈಲನ್ನು ಚೈನಾ ಅನಾವರಣಗೊಳಿಸಿದೆ. ಈ ಕಾರ್ಗೋ ರೈಲು ಆರು ದೇಶಗಳ ಮುಖಾಂತರ ಸ್ಪೇನ್ ಗೆ ತೆರಳಲಿದೆ. ಇದು ವಿಶ್ವದ ಅತಿ ಉದ್ದನೆಯ ರೈಲು ಮಾರ್ಗ.

ಈ ರೈಲು ಯಿವು ನಗರವನ್ನು ನವೆಂಬರ್ ೧೮ ರಂದು ಬಿಟ್ಟಿದೆ ಎಂದು ವಾಶಿಂಗ್ ಟನ್ ಮೂಲದ ಪತ್ರಿಕೆಯೊಂದು ವರದಿ ಮಾಡಿದೆ. ಈ ರೈಲು ಮಾರ್ಗ ರಷಿಯಾದ ಟ್ರಾನ್ಸ್-ಸೈಬೀರಿಯನ್ ರೈಲು ಮಾರ್ಗಕ್ಕಿಂತ ಉದ್ದವಾದುದು. ಸಣ್ಣ ಬಳಕೆ ವಸ್ತುಗಳಿಗೆ ಯಿವು ನಗರ ಅತಿ ದೊಡ್ಡ ಸಗಟು ವ್ಯಾಪಾರಿ ಕೇಂದ್ರ. ಈ ರೈಲು ಮಾರ್ಗದಿಂದ ಈ ನಗರ ಇನ್ನೂ ಎತ್ತರದ ಯೋಜನೆಗೆ ಅಡಿಯಿಟ್ಟಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.