ವಿಶೇಷ

೧೦೦ ದಿನ ತುಂಬಿದ ಪಾಂಡಾ ತ್ರಿವಳಿ-೫ ಕೆ ಜಿ ತೂಕ ಮತ್ತು ಎರಡು ಹಲ್ಲು

ಇಡೀ ವಿಶ್ವದಲ್ಲಿ ಬೀಜಿಂಗ್ ನಲ್ಲಿ ಮಾತ್ರ ಬದುಕುಳಿರುವ ಈ ದೈತ್ಯ ಪಾಂಡಾ 'ತ್ರಿವಳಿ' ಗಳಿಗೆ ಈಗ ೧೦೦ ದಿನ ತುಂಬಿದೆ. ...

೧೦೦ ದಿನ ತುಂಬಿದ ಪಾಂಡಾ ತ್ರಿವಳಿ-೫ ಕೆ ಜಿ ತೂಕ ಮತ್ತು ಎರಡು ಹಲ್ಲು
ಪಾಂಡಾ ಮರಿಗಳು
Published On :

ಬೀಜಿಂಗ್: ಇಡೀ ವಿಶ್ವದಲ್ಲಿ ಬೀಜಿಂಗ್ ನಲ್ಲಿ ಮಾತ್ರ ಬದುಕುಳಿರುವ ಈ ದೈತ್ಯ ಪಾಂಡಾ 'ತ್ರಿವಳಿ' ಗಳಿಗೆ ಈಗ ೧೦೦ ದಿನ ತುಂಬಿದೆ.

ಹುಟ್ಟಿದಾಗ ೧೦೦ ಗ್ರಾಂ ಇದ್ದ ಪ್ರತಿ ಪಾಂಡಾ ಈಗ ೫ ಕೆಜಿ ತೂಗುತ್ತಿವೆ. ೮೦ ದಿನ ಕಳೆದ ನಂತರ ಹಲ್ಲು ಹುಟ್ಟಿದ್ದು, ಈಗ ಮೂರೂ ಪಾಂಡಾಗಳಿಗೆ ಎರಡು ಸಣ್ಣ ಹಲ್ಲುಗಳಿವೆ.  ಹಾಗೆಯೇ ತನ್ನಮ್ಮನೊಂದಿಗೆ ಸರದಿಯಂತೆ ಐದು ದಿನಗಳಿಗೆ ಒಂದೊಂದೇ ವಾಸಿಸುತ್ತಿವೆ.

ಮರಿಗಳಿಗೆ ದೈಹಿಕ ಪರೀಕ್ಷೆ ನಡೆಸಿದ ನಂತರ ಅವುಗಳು ಆರೋಗ್ಯವಾಗಿವೆ ಎಂದು ಚೈಮ್ ಲಾಂಗ್ ಸಫಾರಿ ಪಾರ್ಕ್ ನ ಕಾರ್ಯ ನಿರ್ದೇಶಕ ಡಾಂಗ್ ಗ್ಯುಕ್ಸಿನ್ ತಿಳಿಸಿದ್ದಾರೆ.

ಬುಧವಾರದಿಂದ ನಿಯಮಿತ ಸಮಯದಲ್ಲಿ ಪಾಂಡಾಗಳ ಪ್ರದರ್ಶನಕ್ಕೆ ಅವುಗಳ ತವರು ಊರಿನಲ್ಲಿ ಸಾರ್ವಜನಿಕರಿಗೆ ಅವಕಾಶ ನೀಡಲಾಗುವುದು.

ಇಲ್ಲಿಯವರೆಗೂ ನಾಲ್ಕು ಬಾರಿ ತ್ರಿವಳಿಗಳು ಹುಟ್ಟಿದ್ದರೂ, ಕಳೆದ ಮೂರು ಬಾರಿ ದೈಹಿಕ ತೊಂದರೆಗಳಿಂದಲೊ, ಅಥವಾ ಕಡಿಮೆ ತೂಕದಿಂದಲೋ ಒಂದಲ್ಲ ಒಂದು ಮರಿ ಸಾವನ್ನಪ್ಪುತ್ತಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.