ಮೇ ತಿಂಗಳಲ್ಲಿ 65 ಲಕ್ಷ ವಾಟ್ಸ್ ಆಪ್ ಖಾತೆಗಳ ನಿಷೇಧ
2021 ರ ಹೊಸ ಐಟಿ ನಿಯಮಗಳ ಅನುಸಾರ ಮೆಟಾ ಒಡೆತನದ ವಾಟ್ಸ್ ಆಪ್ ಮೇ ತಿಂಗಳಲ್ಲಿ 65 ಲಕ್ಷ ಅನಗತ್ಯ ಖಾತೆಗಳನ್ನು ನಿಷೇಧಿಸಿದೆ.

ನವದೆಹಲಿ: 2021 ರ ಹೊಸ ಐಟಿ ನಿಯಮಗಳ ಅನುಸಾರ ಮೆಟಾ ಒಡೆತನದ ವಾಟ್ಸ್ ಆಪ್ ಮೇ ತಿಂಗಳಲ್ಲಿ 65 ಲಕ್ಷ ಅನಗತ್ಯ ಖಾತೆಗಳನ್ನು ನಿಷೇಧಿಸಿದೆ.
ಸ್ವತಃ ವಾಟ್ಸ್ ಆಪ್ ಈ ಬಗ್ಗೆ ಮಾಹಿತಿ ನೀಡಿದ್ದು, ಮೇ.1 ರಿಂದ 31 ರ ವರೆಗೆ ನಿಷೇಧಗೊಂಡಿರುವ ವಾಟ್ಸ್ ಆಪ್ ಖಾತೆಗಳ ಪೈಕಿ 2,420,700 ಖಾತೆಗಳನ್ನು ಗ್ರಾಹಕರಿಂದ ವರದಿಯಾಗುವುದಕ್ಕೂ ಮುನ್ನ ಸ್ವಯಂ ಪ್ರೇರಿತವಾಗಿ ನಿರ್ಬಂಧಿಸಲಾಗಿದೆ.
ಏಪ್ರಿಲ್ ತಿಂಗಳಿನಲ್ಲಿ ವಾಟ್ಸ್ ಆಪ್ ಭಾರತದಲ್ಲಿ 500 ಮಿಲಿಯನ್ ಗ್ರಾಹಕರನ್ನು ಹೊಂದಿತ್ತು. ಈ ವರೆಗೂ 74 ಲಕ್ಷ ಅನಗತ್ಯ ಖಾತೆಗಳನ್ನು ನಿಷೇಧಿಸಲಾಗಿದೆ.
ಮೇ ತಿಂಗಳಲ್ಲಿ 3,912 ಕುಂದುಕೊರತೆ ವರದಿಗಳು, ನಿಷೇಧ ಮನವಿಗಳು ಬಂದಿದ್ದು, ಈ ಪೈಕಿ 297 ಅರ್ಜಿಗಳ ಕುರಿತು ಕ್ರಮ ಕೈಗೊಳ್ಳಲಾಗಿದೆ ಎಂದು ವಾಟ್ಸ್ ಆಪ್ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


