ಪ್ಲೇಸ್ಟೋರ್ ನಲ್ಲಿ ಮಿತ್ರೋ ಆಪ್ ಮತ್ತೆ ಲಭ್ಯ: ಗೂಗಲ್
ಇತ್ತೀಚೆಗೆ ಭಾರಿ ಚರ್ಚೆಗೆ ಗ್ರಾಸವಾಗಿದ್ದ ದೇಶಿ ನಿರ್ಮಿತ ಮಿತ್ರೋ ಆಪ್ ಮತ್ತೆ ಗೂಗಲ್ ಪ್ಲೇಸ್ಟೋರ್ ನಲ್ಲಿ ಲಭ್ಯವಾಗಲಿದೆ.

ಇತ್ತೀಚೆಗೆ ಭಾರಿ ಚರ್ಚೆಗೆ ಗ್ರಾಸವಾಗಿದ್ದ ದೇಶಿ ನಿರ್ಮಿತ ಮಿತ್ರೋ ಆಪ್ ಮತ್ತೆ ಗೂಗಲ್ ಪ್ಲೇಸ್ಟೋರ್ ನಲ್ಲಿ ಲಭ್ಯವಾಗಲಿದೆ.
ಟೆಕ್ ದೈತ್ಯ ಗೂಗಲ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಇತ್ತೀಚೆಗಷ್ಟೇ ಪ್ಲೇಸ್ಟೋರ್ ನಿಂದ ತೆಗೆದುಹಾಕಲಾಗಿತ್ತು. ಇದನ್ನು ಪುನಃ ಗೂಗಲ್ ಪ್ಲೇಸ್ಟೋರ್ ನಲ್ಲಿ ಸೇರಿಸಲಾಗುವುದು ಎಂದು ಆಂಡ್ರಾಯ್ಡ್ ಹಾಗೂ ಗೂಗಲ್ ಪ್ಲೇ ನ ಉಪಾಧ್ಯಕ್ಷ ಸಮೀರ್ ಸಮತ್ ಹೇಳಿದ್ದಾರೆ.
ಮಿತ್ರೋ ಆ್ಯಪ್ ಗೆ ಸಂಬಂಧಿಸಿದಂತೆ ‘ ನಮ್ಮ ತಂಡ ಆ್ಯಪ್ ಡೆವಲಪರ್ ಜೊತೆಗೆ ಸಮಸ್ಯೆಯನ್ನು ಬಗೆಹರಿಸಲು ಸೂಚಿಸಿದ್ದೇವೆ, ಸಮಸ್ಯೆ ಬಗೆಹರಿದ ನಂತರ ಅಪ್ಲಿಕೇಶನ್ ಅನ್ನು ಮತ್ತೆ ಸಲ್ಲಿಸಲು ಹೇಳಿದ್ದೇವೆ ಎಂದು ಸಮೀರ್ ಸಮತ್ ತಿಳಿಸಿದ್ದಾರೆ.
ಇತ್ತೀಚೆಗೆ ಭಾರತದಲ್ಲಿ ಚೀನಾ ಆ್ಯಪ್ಗಳ ನಿಷೇಧ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಪ್ರಾರಂಭವಾಗಿತ್ತು. ವಿಶೇಷವಾಗಿ ‘ಟಿಕ್ಟಾಕ್‘ ಆ್ಯಪ್ ನಿಷೇಧವಾಗಬೇಕೆಂಬ ಕೂಗು ಕೇಳಿಬಂದಿತ್ತು. ಈ ಹಿನ್ನಲೆಯಲ್ಲಿ ಅನೇಕರು ‘ಟಿಕ್ಟಾಕ್‘ ಅನ್ಇನ್ಸ್ಟಾಲ್ ಮಾಡಿದ್ದರು. ಈ ಬೆನ್ನಲ್ಲೇ ‘ಮಿತ್ರೋ ಆ್ಯಪ್‘ ಜನಪ್ರಿಯಗೊಂಡಿತ್ತು.
ಭಾರತದಲ್ಲಿ ಚೀನಾ ಆ್ಯಪ್ ಬಳಕೆ ನಿಷೇಧ ಮಾಡಬೇಕೆಂಬ ಅಭಿಯಾನದ ಭಾಗವಾಗಿ ಜನ್ಮ ತಳೆದಿದ್ದ ‘ರಿಮೂವ್ ಚೀನಾ ಆ್ಯಪ್ ಬಗ್ಗೆಯೂ ಗೂಗಲ್ ಪ್ರತಿಕ್ರಿಯೆ ನೀಡಿದ್ದು, ಭದ್ರತಾ ವಿಷಯವನ್ನು ಹೊರತುಪಡಿಸಿ, ಯಾವುದೇ ಕಾರಣಕ್ಕೂ ಮೂರನೇ ವ್ಯಕ್ತಿಯ ಆ್ಯಪ್ ಗಳನ್ನು ಯಾವುದೇ ಮೊಬೈಲ್ ನಲ್ಲಿ ತೆಗೆದು ಹಾಕುವುದಕ್ಕೆ ಅಥವಾ ಬದಲಾವಣೆ ಮಾಡುವುದಕ್ಕೆ ಗೂಗಲ್ ಅನುಮತಿ ನೀಡುವುದಿಲ್ಲ, ಆದ್ದರಿಂದ ರಿಮೂವ್ ಚೀನಾ ಆ್ಯಪ್ ನ್ನು ತೆಗೆದುಹಾಕುವ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಸಮೀರ್ ಸಮತ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


