ಚಂದ್ರನಿಂದ 1,731 ಗ್ರಾಮ್ ನಷ್ಟು ಮಾದರಿಗಳನ್ನು ತಂದ ಚೀನಾದ ಚಾಂಗ್'ಇ -5 ಪ್ರೋಬ್
ಈ ವಾರವಷ್ಟೇ ಸುರಕ್ಷಿತವಾಗಿ ಭೂಮಿಗೆ ಇಳಿದಿದ್ದ ಚೀನಾದ ಚಾಂಗ್'ಇ-5 ಪ್ರೋಬ್ ಚಂದ್ರನ ಕಕ್ಷೆಯಿಂದ ಬರೊಬ್ಬರಿ 1,731 ಗ್ರಾಮ್ ನಷ್ಟು ಸ್ಯಾಂಪಲ್ ಗಳನ್ನು ಹೊತ್ತು ತಂದಿದೆ.

ಬೀಜಿಂಗ್: ಈ ವಾರವಷ್ಟೇ ಸುರಕ್ಷಿತವಾಗಿ ಭೂಮಿಗೆ ಇಳಿದಿದ್ದ ಚೀನಾದ ಚಾಂಗ್'ಇ-5 ಪ್ರೋಬ್ ಚಂದ್ರನ ಕಕ್ಷೆಯಿಂದ ಬರೊಬ್ಬರಿ 1,731 ಗ್ರಾಮ್ ನಷ್ಟು ಸ್ಯಾಂಪಲ್ ಗಳನ್ನು ಹೊತ್ತು ತಂದಿದೆ.
ಚೀನಾದ ಬಾಹ್ಯಾಕಾಶ ಸಂಸ್ಥೆ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಸ್ಯಾಂಪಲ್ ಗಳನ್ನು ಚೀನಾದ ಸಂಶೋಧಕ ತಂಡಕ್ಕೆ ಹಸ್ತಾಂತರಿಸಲಾಗಿದೆ.
ಚೀನಾದ ಚಾಂಗ್'ಇ-5 ಪ್ರೋಬ್ ಇನ್ನರ್ ಮಂಗೋಲಿಯಾದ ಅಟಾನಾಮಸ್ ಪ್ರದೇಶದಲ್ಲಿ ಭೂಸ್ಪರ್ಶವಾಗಿದೆ. ಚೀನಾದ ಮೂರು ಹಂತಗಳ ಚಂದ್ರನ ಅನ್ವೇಷಣೆಯ ಯೋಜನೆಯ ಭಾಗದಲ್ಲಿ ಇದೂ ಸಹ ಒಂದಾಗಿದ್ದು 2004 ರಲ್ಲೇ ಈ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿತ್ತು. ಚಂದ್ರನ ಮೇಲ್ಮೈ ಮೇಲೆ ಇಳಿದಿರುವ ಮೂರನೇ ಬಾಹ್ಯಾಕಾಶ ನೌಕೆ ಇದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


