ವಿಜ್ಞಾನ-ತಂತ್ರಜ್ಞಾನ

ಪಿಎಸ್ಎಲ್ ವಿ -47 ಉಡಾವಣೆ ಕ್ಷಣಗಣನೆ ಆರಂಭ, ಮುಂಜಾನೆಯೇ ತಿಮ್ಮಪ್ಪನ ದರ್ಶನ ಪಡೆದ ಶಿವನ್

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮಹತ್ವಾಕಾಂಕ್ಷೆಯ ಮತ್ತೊಂದು ಉಡಾವಣೆಗೆ ಸಿದ್ಧತೆ ನೆಡೆಸಿದೆ.

ಪಿಎಸ್ಎಲ್ ವಿ -47 ಉಡಾವಣೆ ಕ್ಷಣಗಣನೆ ಆರಂಭ, ಮುಂಜಾನೆಯೇ ತಿಮ್ಮಪ್ಪನ ದರ್ಶನ ಪಡೆದ ಶಿವನ್
ಪಿಎಸ್ಎಲ್ ವಿ -47 ಉಡಾವಣೆ ಕ್ಷಣಗಣನೆ ಆರಂಭ, ಮುಂಜಾನೆಯೇ ತಿಮ್ಮಪ್ಪನ ದರ್ಶನ ಪಡೆದ ಶಿವನ್
Published On :

ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮಹತ್ವಾಕಾಂಕ್ಷೆಯ ಮತ್ತೊಂದು ಉಡಾವಣೆಗೆ ಸಿದ್ಧತೆ ನೆಡೆಸಿದೆ. ಪಿಎಸ್ಎಲ್ ವಿ -47 ರಾಕೆಟ್ ಉಡಾವಣೆಗೆ ಕ್ಷಣಗಣನೆ ಆರಂಭಗೊಂಡಿದ್ದು, ಮಂಗಳವಾರ ಬೆಳಿಗ್ಗೆ 5 ಗಂಟೆ 28 ನಿಮಿಷದಲ್ಲಿ ಆರಂಭಗೊಂಡಿರುವ ಕ್ಷಣಗಣನೆ 26 ಗಂಟೆಗಳ ಕಾಲ ಮುಂದುವರಿಯಲಿದೆ.

ಪಿಎಸ್ಎಲ್ ವಿ ಎಸ್ಇ ಸಿ-47 ಅನ್ನು ಬುಧವಾರ ಬೆಳಿಗ್ಗೆ 9.28 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾಯಿಸಲಾಗುವುದು. ರಾಕೆಟ್  ಮೂಲಕ 714 ಕೆಜಿ ತೂಕದ ಕಾರ್ಟೊಸ್ಯಾಟ್-3 ಉಪಗ್ರಹವನ್ನು ಉಡಾಯಿಸಲಿದೆ. ಅಲ್ಲದೆ, ಅಮೆರಿಕಾಗೆ ಸೇರಿದ 13 ವಾಣಿಜ್ಯ ನ್ಯಾನೊ ಉಪಗ್ರಹಗಳನ್ನು ನಭಕ್ಕೆ ಕಳುಹಿಸಲಿದೆ. ಈ ಪೈಕಿ ಫ್ಲೋಕ್ -4 ಪಿ ಎಂದು ಕರೆಯಲ್ಪಡುವ 12 ಪುಟ್ಟ ಉಪಗ್ರಹಗಳು ಮತ್ತು ಮೆಶ್ಬೆಡ್ ಎಂಬ ಮತ್ತೊಂದು ಚಿಕ್ಕ ಉಪಗ್ರಹವಿದೆ. 

ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನೆಡೆಸಲಾಗುವ 74 ನೇ ಉಡಾವಣೆಯಾಗಿದೆ. ಪಿಎಸ್ಎಲ್ವಿ  ಎಸ್ಇ ಸಿ -47 ಉಡಾವಣೆ ಹಿನ್ನೆಲೆಯಲ್ಲಿ ಇಸ್ರೋ ಅಧ್ಯಕ್ಷ ಶಿವನ್ ಅವರು ಮಂಗಳವಾರ ಬೆಳಿಗ್ಗೆ ತಿರುಪತಿ ತಿರುಮಲಕ್ಕೆ ಭೇಟಿ ಶ್ರೀ ವೆಂಕಟೇಶ್ವರನ ಆರ್ಶಿವಾದ ಪಡೆದುಕೊಂಡರು.  ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್ಎಲ್ ವಿ ಎಸ್ಇ ಸಿ-47 ರಾಕೆಟ್ ಉಡಾವಣೆ ಯಶಸ್ವಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.