ಚಂದ್ರಯಾನ-2: ಚಂದ್ರನ ಕಕ್ಷೆಯ ಕುಶಲತೆ ಪರೀಕ್ಷೆ ಪೂರ್ಣ
ಚಂದ್ರಯಾನ -2 ಬಾಹ್ಯಾಕಾಶ ನೌಕೆ ಚಂದ್ರನ ಕಕ್ಷೆಯಲ್ಲಿ ಎರಡನೇ ಸುತ್ತಿನ ಚಲನೆಯಲ್ಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬುಧವಾರ ಹೇಳಿದೆ. ಚಂದ್ರಯಾನ -2 ಚಂದ್ರನ ಮೇಲಿಳಿಯುವ ಸಲುವಾಗಿ ಇದಾಗಲೇ ಚಂದ್ರನ ಕಕ್ಷೆ ಸೇರಿದೆ.

ಬೆಂಗಳೂರು: ಚಂದ್ರಯಾನ -2 ಬಾಹ್ಯಾಕಾಶ ನೌಕೆ ಚಂದ್ರನ ಕಕ್ಷೆಯಲ್ಲಿ ಎರಡನೇ ಸುತ್ತಿನ ಚಲನೆಯಲ್ಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬುಧವಾರ ಹೇಳಿದೆ. ಚಂದ್ರಯಾನ -2 ಚಂದ್ರನ ಮೇಲಿಳಿಯುವ ಸಲುವಾಗಿ ಇದಾಗಲೇ ಚಂದ್ರನ ಕಕ್ಷೆ ಸೇರಿದೆ.
ಇದುವರೆಗೆ ಬಾಹ್ಯಾಕಾಶ ನೌಕೆಯ ಎಲ್ಲಾ ನಿಯತಾಂಶಗಳು ಸಾಮಾನ್ಯವಾಗಿದೆ.ಎಂದು ಬೆಂಗಳೂರಿನ ಪ್ರಧಾನ ಕಛೇರಿ ಪ್ರಕಟಣೆ ಹೇಳಿದೆ.
ಚಂದ್ರಯಾನ-2 ಗಗನನೌಕೆಯ ಚಂದ್ರನ ಕಕ್ಷೆಯಲ್ಲಿನ ಪಯಣ ನಿಗದಿಯಂತೆ ಸಾಗಿದ್ದು ಬುಧವಾರ (ಆಗಸ್ಟ್ 21, 2019) 12.50 ಗಂಟೆಗೆ ಎರಡನೇ ಬಾರಿಗೆ ಕಕ್ಷೆಯ ಕುಶಲತೆಯನ್ನುಯೋಜಿಸಿದಂತೆ ಆನ್‌ಬೋರ್ಡ್ ಪ್ರೊಪಲ್ಷನ್ ಸಿಸ್ಟಮ್ ಬಳಸಿ ಯಶಸ್ವಿಯಾಗಿ ನಡೆಸಲಾಯಿತು. ಇದರ ಅವಧಿ 1228 ಸೆಕೆಂಡುಗಳು ಎಂದು ಇಸ್ರೋ ಹೇಳಿಕೆಯಲ್ಲಿ ತಿಳಿಸಿದೆ.
ಇನ್ನೊಂದು ಹಂತದ ಕುಶಲತೆಯ ಪರೀಕ್ಷೆಯು ಆಗಸ್ಟ್ 28, 2019 ರಂದು 05.30-06.30 ಗಂಟೆಗಳ ನಡುವೆ ನಿಗದಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


