ವಿಜ್ಞಾನ-ತಂತ್ರಜ್ಞಾನ

ಏನಿದು ಹೈಸಿಸ್ ಉಪಗ್ರಹ, ಅದರ ಕಾರ್ಯವೇನು?

ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಹೈಸಿಸ್ ಉಪಗ್ರಹ ಉಡಾವಣೆಗೆ ಸಜ್ಜಾಗಿದೆ.

ಏನಿದು ಹೈಸಿಸ್ ಉಪಗ್ರಹ, ಅದರ ಕಾರ್ಯವೇನು?
ಸಂಗ್ರಹ ಚಿತ್ರ
Published On :
ಶ್ರೀಹರಿಕೋಟಾ: ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಹೈಸಿಸ್ ಉಪಗ್ರಹ ಉಡಾವಣೆಗೆ ಸಜ್ಜಾಗಿದೆ.
ಇಂದು ಬೆಳಗ್ಗೆ 9.58ಕ್ಕೆ ಉಪಗ್ರಹ ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಉಡಾವಣೆಯಾಗುತ್ತಿದ್ದು, ಭಾರತದ ಅತ್ಯಂತ ಯಶಸ್ವೀ ಉಪಗ್ರಹ ವಾಹಕ ಪಿಎಸ್ಎಲ್ ವಿ-ಸಿ43 ನೌಕೆ ಉಪಗ್ರಹವನ್ನು ನಭಕ್ಕೆ ಕೊಂಡಯ್ಯೊಲಿದೆ. ಇನ್ನು ಹೈಸಿಸ್ ಉಪಗ್ರಹದೊಂದಿಗೆ ಇತರೆ 8 ದೇಶಗಳ 30 ಪುಟ್ಟ ಉಪಗ್ರಹಗಳು ಕೂಡ ಕಕ್ಷೆಗೆ ಸೇರಲಿವೆ.
ಏನಿದು ಹೈಸಿಸ್ ಉಪಗ್ರಹ, ಅದರ ಕಾರ್ಯವೇನು?
ಹೈಸಿಸ್, ಭೂ ಪರಿವೀಕ್ಷಣಾ ಉಪಗ್ರಹವಾಗಿದ್ದು, ಭೂ ಮೇಲ್ಮೈ ಅನ್ನು ಇನ್‌ಫ್ರಾರೆಡ್‌ ಮತ್ತು ಶಾರ್ಟ್‌ವೇರ್‌ ಇನ್‌ಫ್ರಾರೆಡ್‌ ಕಿರಣಗಳ ನೆರವಿನಿಂದ ಹತ್ತಿರದಿಂದ ಪರಿಶೀಲಿಸುವುದು ಇದರ ಕಾರ್ಯವಾಗಿದೆ. ಅಂತೆಯೇ ಖುದ್ದು ಇಸ್ರೊ ಅಭಿವೃದ್ಧಿಪಡಿಸಿರುವ ಈ ಉಪಗ್ರಹದ ಉಡ್ಡಯನದ ಪ್ರಧಾನ ಉಪಗ್ರಹವಾಗಿದ್ದು, ರಾಕೆಟ್‌ನ ಒಟ್ಟು ತೂಕ 380 ಕೆ.ಜಿ. ಇರಲಿದೆ. ಉಪಗ್ರಹವನ್ನು ಭೂಮಿಯಿಂದ 636 ಕಿ.ಮೀ. ಎತ್ತರದ ಕಕ್ಷೆಗೆ ಸೇರಿಸಲಾಗುವುದು.  ಇದೇ ತಿಂಗಳಲ್ಲಿ ಇಸ್ರೊ ನಡೆಸುತ್ತಿರುವ 2ನೇ ಉಡ್ಡಯನ ಇದಾಗಿದೆ. ನ.14ರಂದು ಜಿಸ್ಯಾಟ್‌-29 ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಗಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.