ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗುವ ಸಾಧ್ಯತೆ ಬಗ್ಗೆ ಟ್ವಿಟರ್ ಪೋಸ್ಟ್ ನಿಂದಲೂ ತಿಳಿಯಬಹುದು!
ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗುತ್ತದೆಯೋ ಇಲ್ಲವೋ ಎಂಬ ಟ್ವಿಟರ್ ನಂತಹ ಜಾಲತಾಣಗಳಿಂದಲೂ ಅಂದಾಜಿಸಬಹುದು ಎನ್ನುತ್ತಿದೆ ಹೊಸದೊಂದು ಸಮೀಕ್ಷೆ.

Published On :
ಲಾಸ್ ಏಂಜಲೀಸ್: ಸಾಮಾಜಿಕ ಜಾಲತಣಾಗಳು ಇಂದಿನ ದಿನಗಳಲ್ಲಿ ಸ್ನೇಹಿತರೊಂದಿಗೆ ಸಂಪರ್ಕ, ಸಂವಹನ ಸಾಧಿಸುವುದಕ್ಕಷ್ಟೇ ಸೀಮಿತವಾಗಿಲ್ಲ. ಮಾಧ್ಯಮಗಳಿಗೂ ಪರ್ಯಾಯವಾಗಿ ಸಮಾಜಿಕ ಮಾಧ್ಯಮಗಳು ಬೆಳವಣಿಗೆಯಾಗುತ್ತಿದ್ದು, ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗುತ್ತದೆಯೋ ಇಲ್ಲವೋ ಎಂಬ ಟ್ವಿಟರ್ ನಂತಹ ಜಾಲತಾಣಗಳಿಂದಲೂ ಅಂದಾಜಿಸಬಹುದು ಎನ್ನುತ್ತಿದೆ ಹೊಸದೊಂದು ಸಮೀಕ್ಷೆ.
ಪ್ರತಿಭಟನೆ ನಡೆಯುತ್ತಿರುವ ವಿಷಯಕ್ಕೆ ನೈತಿಕತೆ ಆಯಾಮ ನೀಡಿದಾಗ ಜನ ಹಿಂಸಾಚಾರವನ್ನು ಅನುಮೋದಿಸುತ್ತಾರೆ. ಈ ರೀತಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿನ ಅತಿರೇಕದ ವರ್ತನೆಗಳು ಪ್ರತಿಭಟನೆಗಳನ್ನು ಹಿಂಸಾಚಾರಕ್ಕೆ ತಿರುಗಿಸುವ ಸಾಧ್ಯತೆ ಇದೆ ಎಂದು ಸಂಶೋಧಕರು ಹೇಳಿದ್ದಾರೆ
ಬಾಲ್ಟಿಮೋರ್ ಮತ್ತು ಚಾರ್ಲೊಟ್ಟೆಸ್ವಿಲ್ಲೆಯಲ್ಲಿನ ಪ್ರತಿಭಟನೆಗಳು ಇದಕ್ಕೆ ತಾಜಾ ಉದಾಹರಣೆಗಳಾಗಿದ್ದು, ಜನರ ಗ್ರಹಿಕೆ ಸಾಮಾಜಿಕ ಜಾಲತಾಣದಿಂದ ಪ್ರೇರಣೆ ಪಡೆದಿರುತ್ತವೆ ಎಂದು ದಕ್ಷಿಣ ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾನಿಲಯದ ಸಂಶೋಧಕರಾದ ಮೊರ್ಟೆಜಾ ದೆಹಘಾನಿ ಹೇಳಿದ್ದಾರೆ.
ಯಾವುದೇ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ತನ್ನ ನಂಬಿಕೆ ಅಥವಾ ಅಭಿಪ್ರಾಯವನ್ನು, ಒಮ್ಮತದ ಅಭಿಪ್ರಾಯ ಎಂಬಂತೆ ಸಾಮಾಜಿಕ ಜಾಲತಾಣಿಗರು ಅದನ್ನು ಗುರುತಿಸುತ್ತಾರೆ. ಇದರಿಂದಾಗಿ ಅಪಾಯಕಾರಿ ಸನ್ನಿವೇಶಗಳು ನಿರ್ಮಾಣವಾಗುತ್ತವೆ ಎಂದು ದೆಹಘಾನಿ ಅಭಿಪ್ರಾಯಪಟ್ಟಿದ್ದಾರೆ.
ಈ ಕುರುತಿ ಅಧ್ಯಯನ ನಡೆಸುವುದಕ್ಕಾಗಿಯೇ ಅತ್ಯಾಧುನಿಕ ಯಂತ್ರ ಕಲಿಕೆ ತಂತ್ರವನ್ನು ಬಳಕೆ ಮಾಡಲಾಗಿದ್ದು 2015 ರಲ್ಲಿ ಬಾಲ್ಟಿಮೋರ್ ಪ್ರತಿಭಟನೆ ವೇಳೆ ಮಾಡಲಾಗಿದ್ದ 18 ಮಿಲಿಯನ್ ಟ್ವೀಟ್ ಗಳನ್ನು ವಿಶ್ಲೇಷಿಸಲಾಗಿದೆ. ಮಾರಲ್ ಟ್ವೀಟ್ ಗಳು ಹಾಗೂ ಬಂಧನದ ಸಂಖ್ಯೆಗಳಿಗೂ ಇರಬಹುದಾದ ನಂಟಿನ ಬಗ್ಗೆ ನೇಚರ್ ಹ್ಯೂಮನ್ ಬಿಹೇವಿಯರ್ ಎಂಬ ಜರ್ನಲ್ ಅಧ್ಯಯನಮಾಡಿದ್ದು, ಪ್ರತಿ ಗಂಟೆಗೆ ಬಂಧನವಾಗುತ್ತಿದ್ದವರ ಸಂಖ್ಯೆಗೂ ಆ ಹಿಂದೆ ಹಿಂಸಾಚಾರವನ್ನು ಉತ್ತೇಜಿಸುವ ಟ್ವೀಟ್ ಗಳಿಗೂ ಸಂಬಂಧವಿರುತ್ತಿತ್ತು ಎಂಬುದು ಅಧ್ಯಯನ ವರದಿ ಮೂಲಕ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಟ್ವಿಟರ್ ಪೋಸ್ಟ್ ಗಳಿಂದ ನಿರ್ದಿಷ್ಟ ವಿಷಯದ ಬಗ್ಗೆ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗುವ ಸಾಧ್ಯತೆಯನ್ನು ತಿಳಿಯಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಬ್ರೇಕಿಂಗ್ ನ್ಯೂಸ್
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಮುಖ್ಯ ಚುನಾವಣಾ ಆಯುಕ್ತರನ್ನ ವಜಾ ಮಾಡೊದು ಅಷ್ಟು ಸುಲಭನಾ? ಯಾರಿಗಿದೆ ಆ ಪವರ್? ಸಂವಿಧಾನ ಹೇಳುವುದೇನು?ರಾಹುಕಾಲ ಎಂದರೇನು? ಮದುವೆಗೆ ಅನ್ವಯಿಸುತ್ತದೆಯೇ? ರಾಹು ಶಾಂತಿಗಾಗಿ ನಿಂಬೆ ಹಣ್ಣು ದೀಪ ಹಚ್ಚುವುದು ಸೂಕ್ತವೇ?ಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ; ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!ಕರ್ನಾಟಕದ ನಂ.1 ಶ್ರೀಮಂತ ಯಾರು ಗೊತ್ತಾ? ಅಂಬಾನಿ, ಅದಾನಿ ಬಿಡಿ; ಇಲ್ಲಿದೆ ನಮ್ಮ ಕರುನಾಡ ಸಿರಿವಂತರ ಟಾಪ್ ಲಿಸ್ಟ್!ಫ್ಯಾಟ್ ನಿಂದ ಫಿಟ್ ವರೆಗೆ: ಸಾಹೇಬಲಾಲ್ ಛಪ್ಪರ್ಬಂದ್ ಸ್ಫೂರ್ತಿದಾಯಕ ಪಯಣವಿದೇಶಿ ಪ್ರವಾಸದ ಪ್ಲ್ಯಾನ್ ಇದೆಯೇ? ಒಂದು ಸಣ್ಣ ತಪ್ಪು ಭಾರೀ ದಂಡಕ್ಕೆ ಕಾರಣವಾಗಬಹುದು; ಪ್ರವಾಸಿಗರು ತಿಳಿದಿರಲೇಬೇಕಾದ ನಿಯಮಗಳಿವು...!ಮನಸ್ಸಿದ್ದರೆ ಮಾರ್ಗ ಎಂಬುದನ್ನು ರುಜುವಾತು ಮಾಡಿದ ಛಲವಾದಿ; 27 ವರ್ಷಗಳ ಹೋರಾಟದಲ್ಲಿ 26 ಬಾರಿ ಸೋತು 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾದ ವಿಜಯ್ಪಶ್ಚಿಮ ಘಟ್ಟಗಳ ESA - ಕಸ್ತೂರಿರಂಗನ್ ವರದಿ ಇನ್ನೂ ಏಕೆ ಜಾರಿಗೆ ಬಂದಿಲ್ಲ?


