ವಿಜ್ಞಾನಿಗಳಿಂದ ಪ್ಲಾಸ್ಟಿಕ್ ತಿನ್ನುವ ಎಂಜೈಮ್ ನ ಆಕಸ್ಮಿಕ ಸಂಶೋಧನೆ!
ವಿಜ್ಞಾನಿಗಳು ಆಕಸ್ಮಿಕವಾಗಿ ಪ್ಲಾಸ್ಟಿಕ್-ಈಟಿಂಗ್( ಪ್ಲಾಸ್ಟಿಕ್-ಸೇವಿಸುವ) ಎಂಜೈಮ್ ನ್ನು ಅಭಿವೃದ್ಧಿಗೊಳಿಸಿದ್ದಾರೆ.

Published On :
ವಾಷಿಂಗ್ ಟನ್: ವಿಜ್ಞಾನದ ಲೋಕವೇ ಒಂದು ಅಚ್ಚರಿ. ವಿಜ್ಞಾನಿಗಳು ಯಾವುದಕ್ಕೋ ಹುಡುಕುತ್ತಿರುತ್ತಾರೆ. ಆಕಸ್ಮಿಕವಾಗಿ ಮತ್ಯಾವುದೋ ಸಿಕ್ಕಿರುತ್ತದೆ. ಆ ಆಕಸ್ಮಿಕವಾಗಿ ಸಿಕ್ಕಿದ್ದು, ಸಂಶೋಧಿಸಿದ್ದು ಮತ್ಯಾವುದಕ್ಕೋ ಉಪಯೋಗಕ್ಕೆ ಬರುತ್ತದೆ. ಆದ ಕಾರಣವೇ ವಿಜ್ಞಾನಿಗಳ ಸಂಶೋಧನೆಯ ಬೈ-ಪ್ರಾಡಕ್ಟ್ (ಉಪ ಉತ್ಪನ್ನ) ಆಗಿ ನಾವು ಅನೇಕ ಉಪಕರಣಗಳನ್ನು ಬಳಸುತ್ತಿದ್ದೇವೆ.
ಈಗ ಇಂತಹದ್ದೇ ಬೆಳವಣಿಗೆಯೊಂದು ಬ್ರಿಟನ್ ನ ಪೋರ್ಟ್ಸ್ಮೌತ್ ವಿಶ್ವವಿದ್ಯಾನಿಲಯದಲ್ಲಿ ನಡೆದಿದ್ದು, ವಿಜ್ಞಾನಿಗಳು ಆಕಸ್ಮಿಕವಾಗಿ ಪ್ಲಾಸ್ಟಿಕ್-ಈಟಿಂಗ್( ಪ್ಲಾಸ್ಟಿಕ್-ಸೇವಿಸುವ) ಎಂಜೈಮ್ ನ್ನು ಅಭಿವೃದ್ಧಿಗೊಳಿಸಿದ್ದಾರೆ.
ಬ್ರಿಟನ್ ನ ಪೋರ್ಟ್ಸ್ಮೌತ್ ವಿಶ್ವವಿದ್ಯಾನಿಲಯ ಹಾಗೂ ಅಮೆರಿಕದ ನವೀಕರಿಸಬಹುದಾದ ಶಕ್ತಿಯ ರಾಷ್ಟ್ರೀಯ ಪ್ರಯೋಗಾಲಯ ತ್ಯಾಜ್ಯ ಮರುಬಳಕೆ ಕೇಂದ್ರದಲ್ಲಿ ಪತ್ತೆಯಾದ ನೈಸರ್ಗಿಕ ಎಂಜೈಮ್ ನ ರಚನೆಯನ್ನು ಅಧ್ಯಯನ ಮಾಡುತ್ತಿದ್ದರು. ಇದರ ಬಗ್ಗೆ ಅಧ್ಯಯನ ಮಾಡುತ್ತಿದ್ದ ವಿಜ್ಞಾನಿಗಳು ಆಕಸ್ಮಿಕವೆಂಬಂತೆ ಪ್ಲಾಸ್ಟಿಕ್ ನ್ನು ತಿನ್ನುವ ಎಂಜೈಮ್ ನ್ನು ಅಭಿವೃದ್ಧಿಪಡಿಸಿದ್ದಾರೆ.
ಪ್ರೋಟೀನ್ ಇಂಜಿನಿಯರಿಂಗ್ ನಲ್ಲಿ ಸಹಾಯ ಪಡೆದುಕೊಳ್ಳುವ ಉದ್ದೇಶದಿಂದ ತ್ಯಾಜ್ಯ ಮರುಬಳಕೆ ಕೇಂದ್ರದಲ್ಲಿ ಪತ್ತೆಯಾದ ನೈಸರ್ಗಿಕ ಎಂಜೈಮ್ ನ ರಚನೆಯ ಬಗ್ಗೆ ಅಧ್ಯಯನ ನಡೆಸುತ್ತಿದ್ದೆವು, ಆದರೆ ಕೊನೆಗೆ ಪ್ಲಾಸ್ಟಿಕ್ ತಿನ್ನುವ ಎಂಜೈಮ್ ನ್ನು ಪತ್ತೆ ಮಾಡಿದ್ದೇವೆ ಎಂದು ಎನ್ಆರ್ ಇಎಲ್ ನ ಮುಖ್ಯ ಸಂಶೋಧಕ ಗ್ರೆಗ್ ಬೆಕ್ಹ್ಯಾಮ್ ಹೇಳಿದ್ದಾರೆ.
ಪಿಇಟಿ ಯಿಂದ ನಿರ್ಮಿಸಲಾಗಿರುವ ಪ್ಲಾಸ್ಟಿಕ್ ಬಾಟೆಲ್ ಗಳ ಮರುಬಳಕೆಯಲ್ಲಿ ಈ ಸಂಶೋಧನೆ ಸಹಕಾರಿಯಾಗಲಿದೆ ಎಂದು ಬ್ರಿಟನ್ ನ ಪೋರ್ಟ್ಸ್ಮೌತ್ ವಿಶ್ವವಿದ್ಯಾನಿಲಯ ಹೇಳಿದೆ. ಪಾಲಿಥಿಲೀನ್ ಫ್ಯುರಾಂಡಿಕಾರ್ಬಾಕ್ಸಿಲೇಟ್, ಅಥವಾ ಪಿಇಎಫ್ ಕರಗಿ ವಿಘಟನೆಯಾಗುವುದಕ್ಕೆ ಹೊಸದಾಗಿ ಸಂಶೋಧನೆಯಾಗಿರುವ ಎಂಜೈಮ್ ಅತ್ಯಂತ ಸಹಕಾರಿ ಎಂದು ಪೋರ್ಟ್ಸ್ಮೌತ್ ವಿಶ್ವವಿದ್ಯಾನಿಲಯ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಬ್ರೇಕಿಂಗ್ ನ್ಯೂಸ್
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಮುಖ್ಯ ಚುನಾವಣಾ ಆಯುಕ್ತರನ್ನ ವಜಾ ಮಾಡೊದು ಅಷ್ಟು ಸುಲಭನಾ? ಯಾರಿಗಿದೆ ಆ ಪವರ್? ಸಂವಿಧಾನ ಹೇಳುವುದೇನು?ರಾಹುಕಾಲ ಎಂದರೇನು? ಮದುವೆಗೆ ಅನ್ವಯಿಸುತ್ತದೆಯೇ? ರಾಹು ಶಾಂತಿಗಾಗಿ ನಿಂಬೆ ಹಣ್ಣು ದೀಪ ಹಚ್ಚುವುದು ಸೂಕ್ತವೇ?ಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ; ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!ಕರ್ನಾಟಕದ ನಂ.1 ಶ್ರೀಮಂತ ಯಾರು ಗೊತ್ತಾ? ಅಂಬಾನಿ, ಅದಾನಿ ಬಿಡಿ; ಇಲ್ಲಿದೆ ನಮ್ಮ ಕರುನಾಡ ಸಿರಿವಂತರ ಟಾಪ್ ಲಿಸ್ಟ್!ಫ್ಯಾಟ್ ನಿಂದ ಫಿಟ್ ವರೆಗೆ: ಸಾಹೇಬಲಾಲ್ ಛಪ್ಪರ್ಬಂದ್ ಸ್ಫೂರ್ತಿದಾಯಕ ಪಯಣವಿದೇಶಿ ಪ್ರವಾಸದ ಪ್ಲ್ಯಾನ್ ಇದೆಯೇ? ಒಂದು ಸಣ್ಣ ತಪ್ಪು ಭಾರೀ ದಂಡಕ್ಕೆ ಕಾರಣವಾಗಬಹುದು; ಪ್ರವಾಸಿಗರು ತಿಳಿದಿರಲೇಬೇಕಾದ ನಿಯಮಗಳಿವು...!ಮನಸ್ಸಿದ್ದರೆ ಮಾರ್ಗ ಎಂಬುದನ್ನು ರುಜುವಾತು ಮಾಡಿದ ಛಲವಾದಿ; 27 ವರ್ಷಗಳ ಹೋರಾಟದಲ್ಲಿ 26 ಬಾರಿ ಸೋತು 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾದ ವಿಜಯ್ಪಶ್ಚಿಮ ಘಟ್ಟಗಳ ESA - ಕಸ್ತೂರಿರಂಗನ್ ವರದಿ ಇನ್ನೂ ಏಕೆ ಜಾರಿಗೆ ಬಂದಿಲ್ಲ?


