ಚಂದ್ರಯಾನ-2 ಯೋಜನೆಗೆ ಇಸ್ರೋದಿಂದ ಭರದ ಸಿದ್ಧತೆ, ಮುಂದಿನ ವರ್ಷ ಉಡಾವಣೆ!
ಇಸ್ರೋದ ಮಹತ್ವಕಾಂಕ್ಷೀಯ ಚಂದ್ರಯಾನ-2 ಯೋಜನೆ ಕೊನೆತ ಹಂತಕ್ಕೆ ತಲುಪಿದ್ದು ಮುಂದಿನ ವರ್ಷ ಉಪಗ್ರಹ ಉಡಾವಣೆಗೆ ಭರದ ಸಿದ್ಧತೆಗಳು ನಡೆಯುತ್ತಿವೆ...

Published On :
ಬೆಂಗಳೂರು: ಇಸ್ರೋದ ಮಹತ್ವಕಾಂಕ್ಷೀಯ ಚಂದ್ರಯಾನ-2 ಯೋಜನೆ ಕೊನೆತ ಹಂತಕ್ಕೆ ತಲುಪಿದ್ದು ಮುಂದಿನ ವರ್ಷ ಉಪಗ್ರಹ ಉಡಾವಣೆಗೆ ಭರದ ಸಿದ್ಧತೆಗಳು ನಡೆಯುತ್ತಿವೆ ಎಂದು ಇಸ್ರೋ ಅಧ್ಯಕ್ಷ ಎಎಸ್ ಕಿರಣ್ ಕುಮಾರ್ ತಿಳಿಸಿದ್ದಾರೆ.
ಚಂದ್ರಯಾನ-2ರ ರೋವರ್ ಚಲನೆ ಮತ್ತು ಇತರ ಸಂಕೀರ್ಣ ಪರೀಕ್ಷೆಗಳು ಅಂತಿಮ ಘಟ್ಟಕ್ಕೆ ತಲುಪಿದೆ. ಚಂದ್ರನ ಅಂಗಳದ ಮೇಲೆ ರೋವರ್ ಇಳಿಸಿ ಸಂಶೋಧನೆ ನಡೆಸುವ ಉದ್ದೇಶದ ಚಂದ್ರಯಾನ-2 ಭಾರತದ ಬಾಹ್ಯಾಕಾಶ ವಿಜ್ಞಾನದಲ್ಲಿ ಮೈಲಿಗಲ್ಲಾಗಲಿದೆ ಎಂದರು.
ಇನ್ನು ಚಂದ್ರಯಾನ-2 ಹೊರತು ಪಡಿಸಿ ಇಸ್ರೋ ಡಿಸೆಂಬರ್ ತಿಂಗಳಲ್ಲಿ 28 ವಾಣಿಜ್ಯ ಉಪಗ್ರಹಗಳನ್ನು ಉಡಾವಣೆ ಮಾಡಲಾಗುವುದು ಎಂದರು.
ಚಂದ್ರಯಾನ-2ನಲ್ಲಿ ಕಕ್ಷೆಗಾಗಿ(ಆರ್ಬಿಟರ್), ಲ್ಯಾಂಡರ್ ಮತ್ತು ರೋವರ್ ಇರುತ್ತದೆ. ಬಾಹ್ಯಾಕಾಶ ನೌಕೆಯಿಂದ ಲ್ಯಾಂಡರ್ ಮೂಲಕ ರೋವರ್ ಅನ್ನು ನಿಧಾನವಾಗಿ ಚಂದ್ರನ ಮೇಲೆ ಇಳಿಸುವ ಪ್ರಕ್ರಿಯೆ ದೊಡ್ಡ ಸವಾಲಾಗಿದ್ದು ಅದರ ಪ್ರಯೋಗ ಭರದಿಂದ ನಡೆಯುತ್ತಿದೆ ಎಂದು ಹೇಳಿದರು.
ಲ್ಯಾಂಡರ್ ಮತ್ತು ರೋವರ್ ಅನ್ನು ಜಿಎಸ್ಎಲ್ವಿ-ಎಂಕೆ 2 ರಾಕೆಟ್ 3300 ಕೆಜಿ ತೂಕದ ಕಕ್ಷೆಗಾಮಿ ಒಯ್ಯಲಿದೆ. ಲ್ಯಾಂಡರ್ ಅನ್ನು ಚಂದ್ರನಲ್ಲಿ ಯಾವ ಪ್ರದೇಶದಲ್ಲಿ ಇಳಿಸಬೇಕು ಎಂಬುದು ಇನ್ನೂ ನಿರ್ಧಾರ ಆಗಿಲ್ಲ. ಇದಕ್ಕಾಗಿ ಚಂದ್ರಯಾನ-1 ಸೆರೆ ಹಿಡಿದ ಚಿತ್ರಗಳ ಅಧ್ಯಯನ ನಡೆಸಲಾಗುತ್ತಿದೆ ಎಂದರು.
2008ರ ನವೆಂಬರ್ ಇಸ್ರೋ ಚಂದ್ರಯಾನ-1 ಯೋಜನೆ ಕೈಗೊಂಡಿತ್ತು. ಸುಮಾರು ಒಂದು ವರ್ಷ ನಂತರ ತಾಂತ್ರಿಕ ಕಾರಣಗಳಿಂದ ಉಪಗ್ರಹ ನಿಷ್ಕ್ರಿಯವಾಗಿ ಭೂಮಿಗೆ ಸಂಕೇತಗಳನ್ನು ಕಳಿಸುವುದನ್ನು ಸ್ಧಗಿತಗೊಳಿಸಿತ್ತು.
ಆ್ಯಂಟ್ರಿಕ್ಸ್ ನೊಂದಿಗೆ 800 ಕೋಟಿ ಒಪ್ಪಂದ
ಇಸ್ರೋದ ವಾಣಿಜ್ಯ ವಹಿವಾಟು ಆ್ಯಂಟ್ರಿಕ್ಸ್ ಕಾರ್ಪೋರೇಷನ್ ಲಿಮಿಟೆಡ್ ಸುಮಾರು 850 ಕೋಟಿ ಒಪ್ಪಂದ ಮಾಡಿಕೊಂಡಿದೆ ಎಂದು ಆ್ಯಂಟ್ರಿಕ್ಸ್ ಅಧ್ಯಕ್ಷ ಎಸ್ ರಾಕೇಶ್ ತಿಳಿಸಿದ್ದಾರೆ. 29 ರಾಷ್ಟ್ರಗಳ 200 ಉಪಗ್ರಹ ಉಡಾವಣೆಗೆ ಒಪ್ಪಂದ ಮಾಡಿಕೊಂಡಿದ್ದು ಯೋಜನೆಗೆ ಕಾರ್ಯ ಪ್ರಗತಿಯಲ್ಲಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


