ಫೇಸ್ ಬುಕ್ ಗ್ರೂಪ್ ಅಡ್ಮಿನ್ ಗಳು ಇನ್ನುಮುಂದೆ ಸದಸ್ಯರ ಕಮೆಂಟ್ ಬ್ಯಾನ್ ಮಾಡಬಹುದು
ಜನಪ್ರಿಯ ಸಾಮಾಜಿಕ ತಾಣ ಫೇಸ್ ಬುಕ್ ಈಗ ಹೊಸ ಟೂಲ್ ವೊಂದನ್ನು ಪರಿಚಯಿಸಿದ್ದು, ಅದನ್ನು ಬಳಸಿ ಗ್ರೂಪ್ ಅಡ್ಮಿನ್ ಗಳು...

Published On :
ಸ್ಯಾನ್ ಫ್ರಾನ್ಸಿಸ್ಕೋ: ಜನಪ್ರಿಯ ಸಾಮಾಜಿಕ ತಾಣ ಫೇಸ್ ಬುಕ್ ಈಗ ಹೊಸ ಟೂಲ್ ವೊಂದನ್ನು ಪರಿಚಯಿಸಿದ್ದು, ಅದನ್ನು ಬಳಸಿ ಗ್ರೂಪ್ ಅಡ್ಮಿನ್ ಗಳು ಸದಸ್ಯರ ಕಮೆಂಟ್ ಅನ್ನು ತಾತ್ಕಾಲಿಕವಾಗಿ ಬ್ಯಾನ್ ಮಾಡಬಹುದಾಗಿದೆ.
ಅಡ್ಮಿನ್ ಗಳು ಒಂದು ಕ್ಲಿಕ್ ಮಾಡುವ ಮೂಲಕ ತಮ್ಮ ಸಮುದಾಯದ ನಿಯಮಗಳನ್ನು ಉಲ್ಲಂಘಿಸುವ ಸದಸ್ಯರನ್ನು ಗ್ರೂಪ್ ನಿಂದ ತೆಗೆಯ ಹಾಗೂ ಅವರು ಯಾವುದೇ ಕಮೆಂಟ್ ಮಾಡದಂತೆ ನಿಷೇಧಿಸುವ ಅಧಿಕಾರ ಹೊಂದಿರುವುದಾಗಿ ಇಂದು ಫೇಸ್ ಬುಕ್ ತಿಳಿಸಿದೆ.
ಗ್ರೂಪ್ ಅಡ್ಮಿನ್ ಗಳು ಹೊಸದಾಗಿ ಗ್ರೂಪ್ ಸೇರುವ ಸದಸ್ಯರಿಗೆ ಸ್ವಾಗತ ಪೋಸ್ಟ್ ಅನ್ನು ಹಾಕಲು ಅವಕಾಶ ನೀಡಲಾಗಿದ್ದು, ಈ ಪೋಸ್ಟ್ ಹೊಸದಾಗಿ ಸೇರಿದ ಸದಸ್ಯರಿಗೆ ಆಟೋಮ್ಯಾಟಿಕ್ ಆಗಿ ಟ್ಯಾಗ್ ಆಗುತ್ತದೆ ಎಂದು ಫೇಸ್ ಬುಕ್ ತಿಳಿಸಿದೆ.
ಫೇಸ್ ಬುಕ್ ಪರಿಚಯಿಸಿರುವ ಈ ಹೊಸ ಸಾಧನದಿಂದ ಗ್ರೂಪ್ ನಲ್ಲಿ ಸಾಮಾಜಿಕ ಸ್ವಾಸ್ಥ್ಯ ಹಾಳುಮಾಡುವಂತಹ ಮತ್ತು ಅಶ್ಲೀಲ ಕಮೆಂಟ್ ಗಳಿಗೆ ಕಡಿವಾಣ ಹಾಕಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


