ಹೊಸತನಗಳೊಂದಿಗೆ ಬರಲಿದೆ ಬೀಟಾ ಆವೃತ್ತಿಯ ವಾಟ್ಸ್ ಅಪ್
ಆಂಡ್ರಾಯ್ಡ್ ಮೊಬೈಲ್ ಗಳಲ್ಲಿ ಅತ್ಯಂತ ಜನಪ್ರಿಯವಾಘಿರುವ ವಾಟ್ಸ್ ಅಪ್ ಅಪ್ಲಿಕೇಷನ್ ನ ಹೊಸ ಬೀಟಾ ಆವೃತ್ತಿಯು ಹಲವಾರು ಹೊಸತನಗಳನ್ನು ಹೊಂದಿದೆ,

Published On :
ಸ್ಯಾನ್ ಫ್ರಾನ್ಸಿಸ್ಕೋ: ಆಂಡ್ರಾಯ್ಡ್ ಮೊಬೈಲ್ ಗಳಲ್ಲಿ ಅತ್ಯಂತ ಜನಪ್ರಿಯವಾಘಿರುವ ವಾಟ್ಸ್ ಅಪ್ ಅಪ್ಲಿಕೇಷನ್ ನ ಹೊಸ ಬೀಟಾ ಆವೃತ್ತಿಯು ಹಲವಾರು ಹೊಸತನಗಳನ್ನು ಹೊಂದಿದೆ, ಆಪ್ ನ ಗಾತ್ರ ಚಿಕ್ಕದಾಗಿರುವುದು ಸೇರಿದಂತೆ ನಿಮ್ಮ ವಾಟ್ಸ್ ಅಪ್ ಸಂಖ್ಯೆಯನ್ನು ಬದಲಾಯಿಸಿದಾಗ ನಿಮ್ಮ ಸಂಖ್ಯೆಗೆ ಸಂಬಂಧಿಸಿದ ಸಂಪರ್ಕಗಳನ್ನು ತಿಳಿಸುವ ವೈಶಿಷ್ಟ್ಯಗಳನ್ನು ಈ ನೂತನ ಆವೃತ್ತಿ ಒಳಗೊಂಡಿರುತ್ತದೆ ಎಂದು ಮಾದ್ಯಮ ವರದಿ ತಿಳಿಸಿದೆ.
ತಂತ್ರಜ್ಞಾನ ವೆಬ್ ಸೈಟ್ ಟೆಕ್ನೆಪೋಲಿಸ್ ಪ್ರಕಾರ, ಇತ್ತೀಚಿನ ವಾಟ್ಸ್ ಅಪ್ ಆವೃತ್ತಿ 2.17.375 ನ್ನು ಡೌನ್ ಲೋಡ್ ಮತ್ತು ಇನ್ ಸ್ಟಾಲ್ ಮಾಡುವಾಗ ಇದಕ್ಕೆ ಮೊದಲಿನ ಮಾದರಿಗಿಂತ ಕಡಿಮೆ ಸ್ಪೇಸ್ ಸಾಕಾಗಲಿದೆ. ಈ ಮೊದಲಿನ ವಾಟ್ಸ್ ಅಪ್ ಅಪ್ಲಿಕೇಷನ್ ಗೆ ಹೋಲಿಸಿದರೆ ಸುಮಾರು 6 ಎಂಬಿ ನಷ್ಟು ಕಡಿಮೆ ಗಾತ್ರವನ್ನು ಈ ಬೀಟಾ ಆವೃತ್ತಿ ಹೊಂದಿದೆ. - ಈ ಹಿಂದಿನ ಆವೃತ್ತಿಯಲ್ಲಿದ್ದ 20 ಲೈಬ್ರರಿಗಳನ್ನು ತೆಗೆದು ಹಾಕಿದ ಪರಿಣಾಮ ವಾಟ್ಸ್ ಅಪ್ ನೂತನ ಆವೃತ್ತಿಯ ಗಾತ್ರ ತಗ್ಗಿದೆ ಎನ್ನಲಾಗಿದೆ.
ಇತರ ಪ್ರಮುಖ ಬದಲಾವಣೆ ಎಂದರೆ ನೀವು ನಿಮ್ಮ ವಾಟ್ಸ್ ಅಪ್ ಫೋನ್ ಸಂಖ್ಯೆಯನ್ನು ಬದಲಾಯಿಸಿದಾಗ, ನಿಮ್ಮ ಸಂಪರ್ಕಗಳು ಈ ಬದಲಾವಣೆಯ ನ್ನು ಸ್ವೀಕರಿಸುತ್ತವೆ.
ವಾಟ್ಸ್ ಅಪ್ ಬಳಕೆದಾರರು ತಮ್ಮ ಲಿಸ್ಟ್ ನಲ್ಲಿರುವ ಯಾವುದೇ ಸಂಪರ್ಕಗಳನ್ನು ಕಸ್ಟಮೈಸ್ ಮಾಡಬಹುದು - ನಿಮ್ಮೊಂದಿಗೆ ಚಾಟ್ ಮಾಡುವವರು ಸಹ ನೀವು ವಾಟ್ಸ್ ಅಪ್ ಸಂಖ್ಯೆಯನ್ನು ಬದಲಿಸಿದ್ದೀರಿ ಎನ್ನುವ ಸೂಚನೆ ಪಡೆಯುತ್ತಾರೆ.
ಈ ಎರಡು ಪ್ರಮುಖ ಬದಲಾವಣೆಯೊಂದಿಗೇ, ಸಂಸ್ಥೆ ಹಲವಾರು ಸಣ್ಣ ತಪ್ಪುಗಳನ್ನು ಸರಿಪಡಿಸುವ 473 ಫೈಲ್ ಗಳನ್ನು ಮಾರ್ಪಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Whatsappವಾಟ್ಸ್ ಅಪ್WhatsApp for AndroidTeknepolisBeta version of WhatsAppಆಂಡ್ರಾಯ್ಡ್ ನಲ್ಲಿ ವಾಟ್ಸ್ ಅಪ್ಟೆಕ್ನೆಪೋಲಿಸ್ವಾಟ್ಸ್ ಅಪ್ ಬೀಟಾ ಆವೃತ್ತಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


