ವಿಜ್ಞಾನ-ತಂತ್ರಜ್ಞಾನ

270 ದಶಲಕ್ಷ ನಕಲಿ ಖಾತೆಗಳಿರುವುದು ಫೇಸ್ ಬುಕ್ ಗೂ ಗೊತ್ತು!

2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾದ ಕೈಚಳಕದ ವಿಷಯದಲ್ಲಿ ಫೇಸ್ ಬುಕ್ ಮೇಲೂ ಈಗಾಗಲೇ ಆರೋಪ ಕೇಳಿಬಂದಿದೆ. ಈ ಬೆನ್ನಲ್ಲೇ ಫೇಸ್ ಬುಕ್ ನಲ್ಲಿ 270 ಮಿಲಿಯನ್ ನಕಲಿ ಖಾತೆಗಳು ಇವೆ

270 ದಶಲಕ್ಷ ನಕಲಿ ಖಾತೆಗಳಿರುವುದು ಫೇಸ್ ಬುಕ್ ಗೂ ಗೊತ್ತು!
Published On :
ಲಂಡನ್: 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾದ ಕೈಚಳಕದ ವಿಷಯದಲ್ಲಿ ಫೇಸ್ ಬುಕ್ ಮೇಲೂ ಈಗಾಗಲೇ ಆರೋಪ ಕೇಳಿಬಂದಿದೆ. ಈ ಬೆನ್ನಲ್ಲೇ ಫೇಸ್ ಬುಕ್ ನಲ್ಲಿ 270 ಮಿಲಿಯನ್ ನಕಲಿ ಖಾತೆಗಳು ಇವೆ ಎಂದು ಸಂಸ್ಥೆ ಒಪ್ಪಿಕೊಂಡಿದೆ
ಈ ವಾರ ತನ್ನ ಮೂರನೇ-ತ್ರೈಮಾಸಿಕ ಲಾಭಾಂಶವನ್ನು ಘೋಷಿಸಿದ್ದು, ಈ ವರದಿಯಲ್ಲಿ ಈ ಹಿಂದೆ ತಾನು ಅಂದಾಜಿಸಿದ್ದಕ್ಕಿಂತ ಹೆಚ್ಚು ನಕಲಿ ಖಾತೆಗಳಿವೆ ಎಂದು ತಿಳಿಸಿರುವುದನ್ನು ದಿ ಟೆಲಿಗ್ರಾಫ್ ವರದಿ ಮಾಡಿದ್ದು ಜುಲೈ ನಲ್ಲಿ ಅಂದಾಜಿಸಿದ್ದಕ್ಕಿಂತ ಶೇ.1 ರಷ್ಟು ನಕಲಿ ಖಾತೆಗಳಿವೆ ಎಂದು ಫೇಸ್ ಬುಕ್ ಹೇಳಿದೆ. 
ಇನ್ನು ಶೇ.10 ರಷ್ಟು ಖಾತೆಗಳು ಅಸಲಿ ಖಾತೆ ಹೊಂದಿರುವ ವ್ಯಕ್ತಿಗಳದ್ದೇ ಮತ್ತೊಂದು ಖಾತೆಯಾಗಿರುತ್ತದೆ 2.1 ಬಿಲಿಯನ್ ಪೈಕಿ ಶೇ.13 ರಷ್ಟು ಅಕ್ರಮ ಖಾತೆಗಳಾಗಿವೆ ಎಂದು ಫೇಸ್ ಬುಕ್ ತಿಳಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.