ಹೊಸ ವರ್ಷಕ್ಕೆ ಹೊಸ ಕೊಡುಗೆ: 2018 ಕ್ಕೆ ದೇಶಿ ಜಿಪಿಎಸ್ ಹೊಂದಲಿರುವ ಭಾರತ!
ದೇಶದ ಯಾವುದೇ ಭಾಗದಲ್ಲಿ ಪ್ರಯಾಣಿಕರು ದಾರಿ ತಪ್ಪಿದರೆ, ಸರಿಯಾದ ದಾರಿ ತೋರಿಸುವ ದೇಶಿ ಜಿಪಿಎಸ್ ನಾವಿಕ್ ಅಂತಿಮ ಹಂತದ ಪರೀಕ್ಷಾರ್ಥ ಪ್ರಯೋಗದಲ್ಲಿದ್ದು, 2018 ವರ್ಷಾರಂಭಕ್ಕೆ ಸಾರ್ವಜನಿಕ ಬಳಕೆಗೆ...

Published On :
ನವದೆಹಲಿ: ದೇಶದ ಯಾವುದೇ ಭಾಗದಲ್ಲಿ ಪ್ರಯಾಣಿಕರು ದಾರಿ ತಪ್ಪಿದರೆ, ಸರಿಯಾದ ದಾರಿ ತೋರಿಸುವ ದೇಶಿ ಜಿಪಿಎಸ್ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ ಅಥವಾ ದಿಕ್ಸೂಚಿ ವ್ಯವಸ್ಥೆಯ ತಂತ್ರಜ್ಞಾನ) ನಾವಿಕ್ ಅಂತಿಮ ಹಂತದ ಪರೀಕ್ಷಾರ್ಥ ಪ್ರಯೋಗದಲ್ಲಿದ್ದು, 2018 ವರ್ಷಾರಂಭಕ್ಕೆ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ.
ಇಂಡಿಯನ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಂ (ಐಆರ್ ಎನ್ಎಸ್ಎಸ್) ನಾವಿಕ್ ನ ಅಂತಿಮ ಹಂತದ ಪರೀಕ್ಷೆ ನಡೆಯುತ್ತಿದ್ದು, 2018 ರ ವರ್ಷಾರಂಭಕ್ಕೆ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ ಎಂದು ಅಹಮದಾಬಾದ್ ನ ಮೂಲದ ಸ್ಪೇಸ್ ಅಪ್ಲಿಕೇಷನ್ ಕೇಂದ್ರ (ಎಸ್ಎಸಿ) ದ ತಪನ್ ಮಿಶ್ರ ಹೇಳಿದ್ದಾರೆ.
ಐಆರ್ ಎನ್ಎಸ್ಎಸ್ ಕಾರ್ಯಾಚರಣೆಗೆ ಅಗತ್ಯವಿದ್ದ 7 ಉಪಗ್ರಹ (ಐಆರ್ ಎನ್ಎಸ್ಎಸ್-1G) ಭಾರತ 2016 ರ ಏಪ್ರಿಲ್ 28 ರಂದು ಉಡಾವಣೆ ಮಾಡಿತ್ತು. ಐಆರ್ ಎನ್ಎಸ್ಎಸ್ ಗೆ ಪ್ರಧಾನಿ ನರೇಂದ್ರ ಮೋದಿ ನಾವಿಕ್ ಎಂದು ನಾಮಕರಣ ಮಾಡಿದ್ದು, ಭಾರತದ ಪ್ರದೇಶಗಳ ಬಗ್ಗೆ ನಿಖರವಾದ ಮಾಹಿತಿ ನೀಡಲಿದೆ.
24 ಉಪಗ್ರಹಗಳನ್ನು ಹೊಂದಿರುವ ಅಮೆರಿಕಾದ ಜಿಪಿಎಸ್ ಇಡಿ ವಿಶ್ವದ ಪ್ರದೇಶಗಳ (ಪೊಸಿಷನಿಂಗ್) ಬಗ್ಗೆ ಮಾಹಿತಿ ನೀಡುವ ಸಾಮರ್ಥ್ಯ ಹೊಂದಿದೆ. ಆದರೆ ಕೇವಲ 7 ಉಪಗ್ರಹಳನ್ನು ಹೊಂದಿರುವ ಭಾರತದ ನಾವಿಕ್ ವ್ಯವಸ್ಥೆ ಭಾರತ ಹಾಗೂ ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳ ಬಗ್ಗೆ ಮಾತ್ರ ಮಾಹಿತಿ ನೀಡಲಿದೆಯಾದರೂ ಅಮೆರಿಕಾದ ಜಿಪಿಎಸ್ ಗಿಂತ ನಿಖರವಾದ ವ್ಯವಸ್ಥೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


