ಸಾಮಾಜಿಕ ಬೆಂಬಲಕ್ಕೆ ಫೇಸ್ ಬುಕ್, ಅರಿವಿಗೆ ಟ್ವಿಟರ್: ಅಧ್ಯಯನ ವರದಿ
ಸಾಮಾಜಿಕ ಬೆಂಬಲ ಪಡೆಯುವುದು ಫೇಸ್ ಬುಕ್ ಬಳಕೆಯ ಮುಖ್ಯ ಉದ್ದೇಶವಾಗಿದ್ದರೆ, ಸಮಕಾಲೀನ ಆಗುಹೋಗುಗಳ ಬಗ್ಗೆ ಅರಿವು, ಸಲಹೆಗಳನ್ನು ಪಡೆಯುವುದಕ್ಕೆ ಸಾರ್ವಜನಿಕರು ಟ್ವಿಟರ್ ನ್ನು ಹೆಚ್ಚು...

Published On :
ವಾಷಿಂಗ್ ಟನ್: ಸಾಮಾಜಿಕ ಬೆಂಬಲ ಪಡೆಯುವುದು ಫೇಸ್ ಬುಕ್ ಬಳಕೆಯ ಮುಖ್ಯ ಉದ್ದೇಶವಾಗಿದ್ದರೆ, ಸಮಕಾಲೀನ ಆಗುಹೋಗುಗಳ ಬಗ್ಗೆ ಅರಿವು, ಸಲಹೆಗಳನ್ನು ಪಡೆಯುವುದಕ್ಕೆ ಸಾರ್ವಜನಿಕರು ಟ್ವಿಟರ್ ನ್ನು ಹೆಚ್ಚು ಬಳಸುತ್ತಾರೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.
ಮಿಷಿಗನ್ ಹಾಗೂ ಸ್ಯಾನ್ ಡೈಗೊ ವಿಶ್ವವಿದ್ಯಾನಿಲಯಗಳು ಸಾಮಾಜಿಕ ಜಾಲತಾಣಗಳ ಮೂಲಕ ಸಾಮಾಜಿಕ ಬೆಂಬಲ ಪಡೆಯುವ ವಿಷಯವಾಗಿ ಕಳೆದ 10 ವರ್ಷಗಳು ಅಧ್ಯಯನ ನಡೆಸಿದ್ದು, ಇಬ್ಬರು ವ್ಯಕ್ತಿಗಳ ನಡುವಿನ ಬಾಂಧವ್ಯ ಗಾಢಗೊಳ್ಳುವುದು ಹಾಗೂ ಸಾಮಾಜಿಕ ಬೆಂಬಲದ ವಿಷಯದಲ್ಲಿ ಸಾಮಾಜಿಕ ಜಾಲತಾಣದ ಪಾತ್ರದ ಬಗ್ಗೆ ಅಧ್ಯಯನ ನಡೆಸಿದ್ದಾರೆ.
10 ವರ್ಷಗಳ ಅಧ್ಯಯನದ ವರದಿಯ ಫಲಿತಾಂಶದಲ್ಲಿ ಫೇಸ್ ಬುಕ್ ಬಳಕೆಯ ಮುಖ್ಯ ಉದ್ದೇಶ ಸಾಮಾಜಿಕ ಬೆಂಬಲ ಪಡೆಯುವುದಾದರೆ, ಅರಿವು, ಸಲಹೆಗಳನ್ನು ಟ್ವಿಟರ್ ಬಳಕೆಯ ಮುಖ್ಯ ಉದ್ದೇಶವಾಗಿರುತ್ತದೆ ಎಂದು ಅಮೆರಿಕಾದ ಇಂಟರಾಕ್ಟಿವ್ ಮೀಡಿಯಾ ಇನ್ಸ್ಟಿಟ್ಯೂಟ್ ನ ಬ್ ಬ್ರೆಂಡಾ ಕೆ ವೈಡರ್ ಹೋಲ್ಡ್ ಹೇಳಿದ್ದಾರೆ. ಅಧ್ಯಯನ ವರದಿ ಸೈಬರ್ ಸೈಕಾಲಜಿ ಹಾಗೂ ಸಾಮಾಜಿಕ ಜಾಲತಾಣದ ಕುರಿತ ಜರ್ನಲ್ ನಲ್ಲಿ ಪ್ರಕಟವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


